ಕಾಲ್ನಡಿಗೆಯ ಮೂಲಕ ತಿರುಮಲೆ ಏರಿ ತಿಮ್ಮಪ್ಪನ ದರ್ಶನ ಪಡೆದ ನಟಿ ರುಕ್ಮಿಣಿ ವಸಂತ್

ಕಾಲ್ನಡಿಗೆಯ ಮೂಲಕ ತಿರುಮಲೆ ಏರಿ ತಿಮ್ಮಪ್ಪನ ದರ್ಶನ ಪಡೆದ ನಟಿ ರುಕ್ಮಿಣಿ ವಸಂತ್

ಕಾಲ್ನಡಿಗೆಯ ಮೂಲಕ ತಿರುಮಲೆ ಏರಿ ತಿಮ್ಮಪ್ಪನ ದರ್ಶನ ಪಡೆದ ನಟಿ ರುಕ್ಮಿಣಿ ವಸಂತ್

Rukmini Vasanth: ಚಂದನವನದ ಸುಂದರಿ, ಕಾಂತಾರದ ಕನಕವತಿ ಖ್ಯಾತಿಯ ರುಕ್ಮಿಣಿ ವಸಂತ್ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಕಾಲ್ನಡಿಗೆಯಲ್ಲಿ ತಿರುಮಲೆ ಬೆಟ್ಟವನ್ನೇರಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದು, ಸದ್ಯ ನಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದ ಜನಪ್ರಿಯ ನಟಿ, ಸದ್ಯ ತೆಲುಗು, ತಮಿಳು ಸಿನಿಮಾದಲ್ಲೂ ಬಹು ಬೇಡಿಕೆಯ ನಟಿಯಾಗಿದ್ದಾರೆ ರುಕ್ಮಿಣಿ ವಸಂತ್. ಸದ್ಯ ಟಾಕ್ಸಿಕ್ ಸಿನಿಮಾದ ಬಿಡುಗಡೆಗೆ ಕಾಯುತ್ತಿರುವ ನಟಿ, ಇದೀಗ ತಮ್ಮ ಹೊಸ ಚಿತ್ರಗಳ ಶೂಟಿಂಗ್ ನಿಂದ ಬ್ರೇಕ್ ತೆಗೆದುಕೊಂಡು ತಿರುಮಲಕ್ಕೆ ಹೋಗಿ ಬಂದಿದ್ದಾರೆ.

ಕನ್ನಡಿಗರ ಫೇವರಿಟ್ ರುಕ್ಕಮ್ಮ, ತಿರುಪತಿ ತಿರುಮಲ ದರ್ಶನ ಪಡೆದು ಬಂದಿದ್ದು, ಫೋಟೊಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ತಿರುಮಲದಲ್ಲಿನ ಆಕೆಯ ಫೋಟೊಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರುಕ್ಮಿಣಿ ವಸಂತ್ ತಮ್ಮ ಸ್ನೇಹಿತರ ಜೊತೆ ಅಲಪಿರಿ ಮೆಟ್ಟಿಲುಗಳನ್ನು ಕಾಲ್ನಡಿಗೆಯಲಿ ಏರಿ, ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ. ಕುಂಕುಮ ಹಚ್ಚಿದ ಮೆಟ್ಟಿಲುಗಳು, ಕೈಯಲ್ಲಿ ಹೂವು, ತುಳಸಿ ಮಾಲೆಯನ್ನು ಕೈಯಲ್ಲಿ ಹಿಡಿದಿರುವ ಫೋಟೊಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ.

ರುಕ್ಮಿಣಿ ವಸಂತ್ ಸದ್ಯಕ್ಕಂತೂ ಬ್ಯುಸಿ ನಟಿ, ಕನ್ನಡದಲ್ಲಿ ಟಾಕ್ಸಿಕ್ ಸಿನಿಮಾದಲ್ಲಿ ಯಶ್ ಜೊತೆ ನಟಿಸಿದ್ದು, ತೆಲುಗಿನಲ್ಲಿ ಎನ್ ಟಿ ಆರ್ ಜೊತೆ ಸಿನಿಮಾಗೆ ಸಹಿ ಹಾಕಿದ್ದಾರೆ. ಇನ್ನು ಬಂದಿರುವ ಮಾಹಿತಿಯ ಪ್ರಕಾರ ಅಕ್ಕಿನೇನಿ ನಾಗ ಚೈತನ್ಯ ಜೊತೆ, ಧ್ರುವ್ ವಿಕ್ರಮ್ ಜೊತೆಗೂ ಸಹ ರುಕ್ಮಿಣಿ ನಟಿಸುತ್ತಾರೆ ಎನ್ನಲಾಗುತ್ತಿದೆ.

ಬಿರ್ ಬಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ರುಕ್ಮಿಣಿ ವಸಂತ್ ಎಂಟ್ರಿ ಕೊಟ್ಟಿದ್ದರು. ಬಳಿಕ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿಯಲ್ಲಿ ನಟಿಸಿದ್ದರು. ಬಳಿಕ ಬಾನ ದಾರಿಯಲ್ಲಿ, ಬಘೀರ, ಭೈರತಿ ರಣಗಲ್ ಚಿತ್ರಗಳಲ್ಲಿ ಸ್ಟಾರ್ ನಟರೊಂದಿಗೆ ನಟಿಸಿದ್ದರು.

ಇದಲ್ಲದೇ ರುಕ್ಮಿಣಿ ತಮಿಳಿನ ಏಸ್ ಮತ್ತು ಮದರಾಸಿ, ಹಾಗೂ ತೆಲುಗಿನಲ್ಲಿ ಅಪುಡೋ ಇಪುಡೋ ಎಪುಡೋ ಚಿತ್ರದಲ್ಲೂ ಸಹ ರುಕ್ಮಿಣಿ ನಟಿಸಿದ್ದರು. ಇನ್ನು ಕಾಂತಾರ ಚಾಪ್ಟರ್ 1 ಸಿನಿಮಾದ ಕನಕವತಿ ಪಾತ್ರ ಟ್ವಿಸ್ಟ್ ಗಳ ಜೊತೆಗೆ ಇಡೀ ದೇಶದ ಗಮನ ಸೆಳೆದಿದ್ದರು. ಆ ಮೂಲಕ ನ್ಯಾಷನಲ್ ಕ್ರಶ್ ಕೂಡ ಆಗಿದ್ದರು.

Source link

Leave a Reply

Your email address will not be published. Required fields are marked *