ಅತೀ ಕಡಿಮೆ ರುಪಾಯಿ ಮೌಲ್ಯ; ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ

ಅತೀ ಕಡಿಮೆ ರುಪಾಯಿ ಮೌಲ್ಯ; ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ


ಜನವರಿ, ನವೆಂಬರ್ 21: ಡಾಲರ್ ಎದುರು ರೂಪಾಯಿ (ಡಾಲರ್ ವಿರುದ್ಧ ರೂಪಾಯಿ) ಕರೆನ್ಸಿ ಮೌಲ್ಯದ ಕುಸಿತ ಮುಂದುವರಿದಿದೆ. ಇಂದು ಶುಕ್ರವಾರ ರುಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಡಾಲರ್ ಎದುರು ರುಪಾಯಿ ಅಪಮೌಲ್ಯ ಮೊದಲ ಬಾರಿಗೆ 89ರ ಮಟ್ಟ ದಾಟಿದೆ. ಫಾರೆಕ್ಸ್ ಡಾಲರ್ ಎದುರು ರುಪಾಯಿ 89.55ಕ್ಕೆ ಇಳಿದಿದೆ. ಇಂದಿನ ಟ್ರೇಡಿಂಗ್ ಒಂದು ಹಂತದಲ್ಲಿ ರುಪಾಯಿ 89.65ಕ್ಕೆ ಏರಿತ್ತು. ಇದು ರುಪಾಯಿ ಇತಿಹಾಸದಲ್ಲೇ ಕನಿಷ್ಠ ಮೌಲ್ಯ ಎನಿಸಿದೆ.

ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಡಾಲರ್ ಎದುರು ರೂಪಾಯಿ 88.80 ಇದ್ದದ್ದು ಹೊಸ ಕನಿಷ್ಠ ಮಟ್ಟ ಎನಿಸಿತ್ತು. ಈಗ ನವೆಂಬರ್ ಮೂರನೇ ವಾರದಲ್ಲಿ ದಾಖಲೆ ಮುರಿದಿದೆ. ದಿನಗಳಲ್ಲಿ ಒಂದು ಡಾಲರ್‌ಗೆ 90 ರೂಪಾಯಿ ಮಟ್ಟ ದಾಟಿದರೆ ಅಚ್ಚರಿ ಇಲ್ಲ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ರುಪಾಯಿ ಇಷ್ಟು ಕುಸಿಯಲು ಏನು ಕಾರಣ?

ಅಮೆರಿಕನ್ ಡಾಲರ್ ಎದುರು ರುಪಾಯಿ ಸಾಕಷ್ಟು ಹೆಚ್ಚಾಗಿದೆ. ಹಲವು ಅಂಶಗಳಿಂದಲೂ ಇರುವ ಪ್ರವೃತ್ತಿ ಇದು. ಇದೀಗ ಕೆಲ ದಿನಗಳಿಂದ ತೀಕ್ಷ್ಣವಾಗಿ ರುಪಾಯಿ ಕುಸಿಯುತ್ತಿರುವುದು ಗಮನಾರ್ಹವಾಗಿದೆ. ಇರಾನ್ ತೈಲ ವ್ಯಾಪಾರದಲ್ಲಿ ತೊಡಗಿರುವ ಸಂಸ್ಥೆಗಳ ಮೇಲೆ ಅಮೆರಿಕ ನಿಷೇಧ ಹಾಕಿದ್ದು ಭಾರತೀಯ ಸೇರಿದಂತೆ ವಿವಿಧ ಅಂಶಗಳು ರೂಪಾಯಿ ಕರೆನ್ಸಿಗೆ ಹಿನ್ನಡೆ ತಂದಿವೆ ಎಂದು ತಜ್ಞರು ಹೇಳಿದ್ದಾರೆ.

ಭಾರತೀಯ ಸಂಸ್ಥೆಗಳ ಮೇಲೆ ಅಮೆರಿಕದ ನಿಷೇಧದ ಜೊತೆಗೆ ಟ್ಯಾರಿಫ್ ಕಾರಣದಿಂದ ಭಾರತದ ರಫ್ತು ಶೇ. 11.8ರಷ್ಟು ಕಡಿಮೆಯಿರುವುದು, ಮತ್ತು ಚಿನ್ನದ ಆಮದು ಹೆಚ್ಚಿರುವುದು, ಇದರಿಂದ ಭಾರತದ ಟ್ರೆಡ್ ಡೆಫಿಸಿಟ್ ಹೆಚ್ಚಾಗಿರುವುದು. ಇದು ಡಾಲರ್ ಎದುರು ರುಪಾಯಿ ಹೆಚ್ಚು ದುರ್ಬಲಗೊಳ್ಳಲು ಕಾರಣವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ.

ಇದನ್ನೂ ಓದಿ: ಸದ್ಯ ಷೇರುಪೇಟೆ ಸುರಕ್ಷಿತ ಇಲ್ಲ; ಕಾದಿದೆ ವಿಪತ್ತು: ವ್ಯಾಲ್ಯುಯೇಶನ್ ಎಕ್ಸ್‌ಪರ್ಟ್ ದಾಮೋದರನ್ ಆತಂಕ

ವಿದೇಶೀ ಹೂಡಿಕೆಗಳ ಹಿಂತೆಗೆತದ ಪರಿಣಾಮವೂ…

ಡಾಲರ್ ಎದುರು ಅತ್ಯಂತ ದುರ್ಬಲ ಸಾಧನೆ ತೋರಿದ ಏಷ್ಯನ್ ಕರೆನ್ಸಿಗಳ ಸಾಲಿನಲ್ಲಿ ರುಪಾಯಿಯೂ ಇದೆ. ಅಮೆರಿಕ ಟ್ಯಾರಿಫ್ ಕ್ರಮ ಜಾರಿಗೊಳಿಸಿದಾಗಿನಿಂದ ರುಪಾಯಿ ಮೇಲೆ ಒತ್ತಡ ಹೆಚ್ಚಿದೆ. ಇದರ ಜೊತೆಗೆ ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆದಾರರು ಈ ವರ್ಷ 16. 5 ಬಿಲಿಯನ್ ಡಾಲರ್ ಹೂಡಿಕೆ ಹಿಂಪಡೆದಿರುವುದು ರುಪಾಯಿ ಮೇಲೆ ನಿರಂತರ ಒತ್ತಡ ಇರಿಸಿ. ಇದರ ಜೊತೆಗೆ ಟ್ಯಾರಿಫ್ ಒತ್ತಡ ಹಾಗೂ ಡಾಲರ್ ಬಲವೃದ್ಧಿ ಇತ್ಯಾದಿ ವಿವಿಧ ಅಂಶಗಳು ರೂಪಾಯಿಗೆ ಹಿನ್ನಡೆ ತಂದಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *