
ಜನವರಿ, ಏಪ್ರಿಲ್ 2: ಸತತ ಹಿನ್ನಡೆಯಲ್ಲಿದ್ದ ರುಪಾಯಿ ಕರೆನ್ಸಿ ಗುರುವಾರ ಡಾಲರ್ ಎದುರು 105 ಪೈಸೆಗಳ ಲಾಭ ಪಡೆದು 94ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಹಿಂದಿನ ದಿನದ ವಹಿವಾಟು ಅಂತ್ಯದಲ್ಲಿ ಡಾಲರ್ ಎದುರು 94.70ರ ಮಟ್ಟದಲ್ಲಿದ್ದ ರೂಪಾಯಿ ಮೌಲ್ಯ ಇವತ್ತು ಗುರುವಾರ 93.65ಕ್ಕೆ ಏರಿದೆ. ಡಾಲರ್ ಎದುರು ರುಪಾಯಿ (ಡಾಲರ್ ವಿರುದ್ಧ ರೂಪಾಯಿ) ಆದಾಯಕ್ಕೆ ಪ್ರಮುಖವಾಗಿ ಕಾರಣವಾಗಲು ಆರ್ ಬಿಐ ತೆಗೆದುಕೊಂಡ ಕ್ರಮ.
ಸ್ಪೆಕ್ಯುಲೇಟಿವ್ ಟ್ರೇಡಿಂಗ್ ನಿಂದ ರುಪಾಯಿಗೆ ಬಹಳ ಹಿನ್ನಡೆಯಾಯಿತು. ತೈಲ ಬೆಲೆ ಹೆಚ್ಚುತ್ತಿದೆ ಭಾರತದ ಕರೆಂಟ್ ಅಕೌಂಟ್ ಕೊರತೆ ಹಿಗ್ಗಿತು. ಇದು ರುಪಾಯಿ ಮೇಲೆ ಹೆಚ್ಚಿನ ಒತ್ತಡ ಹಾಕಿದೆ. ರೂಪಾಯಿಗೆ ಹಿನ್ನಡೆ ತರುತ್ತಿದ್ದ ಸ್ಪೆಕ್ಯುಲೇಟಿವ್ ಬೆಟ್‌ಗಳಿಗೆ ಆರ್‌ಬಿಐ ಕಡಿವಾಣ ಹಾಕಿತು. ಬ್ಯಾಂಕುಗಳು ರುಪಾಯಿ ಎನ್ಡಿಎಫ್ಗಳನ್ನು (ನಾನ್ ಡೆಲಿವರಬಲ್ ಫಾರ್ವರ್ಡ್ಸ್) ನೀಡದಂತೆ ನಿಯಮಗಳನ್ನು ಹಾಕಲಾಗಿದೆ. ಕ್ಯಾನ್ಸಲ್ ಆದ ಫಾರ್ವರ್ಡ್ ಕಾಂಟ್ರಾಕ್ಟ್‌ಗಳನ್ನು ರೀಬುಕಿಂಗ್ ಮಾಡದಂತೆ ಕಂಪನಿಗಳನ್ನು ತಡೆಯಲಾಗಿದೆ. ಇದರಿಂದ ಕರೆನ್ಸಿ ಸ್ಪೆಕ್ಯುಲೇಶನ್ ಅತಿಯಾಗಿ ಆಗುವುದು ತಪ್ಪಿದಂತಾಯಿತು.
ಇದನ್ನೂ ಓದಿ: ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಆಮದು ಸುಂಕದಿಂದ ವಿನಾಯಿತಿ; ಹಲವು ಉದ್ಯಮಗಳಿಗೆ ಅನುಕೂಲ
ಇರಾನ್ ಯುದ್ಧವು ತಾರ್ಕಿಕ ಅಂತ್ಯ ಮುಟ್ಟುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ತೈಲ ಬೆಲೆ 100 ಡಾಲರ್ಗಿಂತ ಹೆಚ್ಚಿನ ಮಟ್ಟದಲ್ಲಿದೆ. ಗುರುವಾರ ಬ್ರೆಂಟ್ ಫ್ಯೂಚರ್ಸ್ನಲ್ಲಿ ತೈಲ ಬೆಲೆ ಶೇ. 5ರಷ್ಟು ಹೆಚ್ಚಾಗಿ ಬ್ಯಾರಲ್‌ಗೆ 106 ಡಾಲರ್ ಮುಟ್ಟಿದೆ. ಇದೇ ಮಟ್ಟದಲ್ಲಿ ತೈಲ ಬೆಲೆ ಮತ್ತಷ್ಟು ಕಾಲ ಮುಂದುವರಿಯುತ್ತಿದ್ದರೆ ಭಾರತದ ಆರ್ಥಿಕತೆಗೆ ಮತ್ತಷ್ಟು ಹಿನ್ನಡೆ ತರುತ್ತಾ ಹೋಗಬಹುದು.
ಭಾರತಕ್ಕೆ ಬೈ ಹೇಳುತ್ತಿರುವ ವಿದೇಶೀ ಹೂಡಿಕೆದಾರರು
ವಿದೇಶೀ ಪೋರ್ಟ್ಫೋಲಿಯೋ ಹೂಡಿಕೆದಾರರು ಭಾರತೀಯ ಈಕ್ವಿಟಿ ಸೆಗ್ಮೆಂಟ್ನಿಂದ ಸತತವಾಗಿ ನಿರ್ಗಮಿಸುತ್ತಿದ್ದಾರೆ. ಬುಧವಾರವೂ ಎಫ್‌ಪಿಐಗಳೀಂದ 8,331 ಕೋಟಿ ರೂ ಮೊತ್ತದ ಷೇರುಗಳ ಮಾರಾಟವಾಗಿದೆ. ಮಾರ್ಚ್ ತಿಂಗಳಿನಲ್ಲಿ ಎಫ್ ಪಿಐಗಳು 1.18 ಲಕ್ಷ ಕೋಟಿ ರೂ ಹೂಡಿಕೆಗಳನ್ನು ಹಿಂಪಡೆದಿದ್ದಾರೆ.
ಇದನ್ನೂ ಓದಿ: ಟ್ರಂಪ್ ಹಾಕಿದ ಟ್ಯಾರಿಫ್‌ಗಳಿಗೆ ಬದಲಾಗಿ ಸಿಗಲಿದೆ ರೀಫಂಡ್; ಯಾರಿಗೆ ಸಿಗುತ್ತೆ ಆದ್ಯತೆ?
2024-25ರಲ್ಲಿ ಎಫ್ ಪಿಐಗಳಿಂದ ನಿವ್ವಳ ಹೊರಹರಿವು ಆಗಿರುವುದು ಬರೋಬ್ಬರಿ 1.80 ಲಕ್ಷ ಕೋಟಿ ರೂ ನಷ್ಟವಾಗಿದೆ. ಕಳೆದ 34 ವರ್ಷದಲ್ಲೇ ಇದು ದಾಖಲೆ ಪ್ರಮಾಣದ ಎಫ್‌ಪಿಐ ಹೊರಹರಿವು. ಈ ಬೆಳವಣಿಗೆಯು ರೂಪಾಯಿ ಮೇಲೆ ಅತೀವ ಒತ್ತಡ ತಂದಿದೆ. ಪರಿಣಾಮವಾಗಿ ಡಾಲರ್ ಎದುರು ರುಪಾಯಿ ಒಂದು ಹಂತದಲ್ಲಿ 95ರ ಗಡಿ ದಾಟಿ ಹೋಗಿತ್ತು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ