Headlines

Rupee vs Dollar: ರುಪಾಯಿ ಹೊಸ ದಾಖಲೆ ಮಟ್ಟಕ್ಕೆ ಕುಸಿತ; ಈ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತದ ಕರೆನ್ಸಿ

Rupee vs Dollar: ರುಪಾಯಿ ಹೊಸ ದಾಖಲೆ ಮಟ್ಟಕ್ಕೆ ಕುಸಿತ; ಈ ವರ್ಷದಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿದ ಭಾರತದ ಕರೆನ್ಸಿ


ನವೆಂಬರ್ 2: ಕರೆನ್ಸಿಯಾದ ರುಪಾಯಿಯ ಮೌಲ್ಯ (ಡಾಲರ್ ವಿರುದ್ಧ ರೂಪಾಯಿ) ಭಾರತದಲ್ಲಿ ಕುಸಿತ ಮುಂದುವರಿದಿದೆ. ಇಂದು ಮಂಗಳವಾರ ಡಾಲರ್ ಎದುರು ರುಪಾಯಿ 89.95ರ ಮಟ್ಟಕ್ಕೆ ಕುಸಿದಿದೆ. ರುಪಾಯಿ ಇತಿಹಾಸದಲ್ಲೇ ಇದು ಅತ್ಯಂತ ಹೀನಾಯ ಸ್ಥಿತಿ ಎನಿಸಿದೆ. ಈ ವಾರದಲ್ಲೇ ರುಪಾಯಿ ಮೌಲ್ಯ ಮೊತ್ತಮೊದಲ ಬಾರಿಗೆ 90ರ ಗಡಿ ದಾಟಿ ಹೋದರೆ ಅಚ್ಚರಿ ಇಲ್ಲ. ನಿನ್ನೆ ಸೋಮವಾರವೇ ರುಪಾಯಿ ಬಹಳ ಒತ್ತಡಕ್ಕೆ ಸಿಲುಕಿತ್ತು. ಟ್ರೇಡಿಂಗ್ನ ಒಂದು ಹಂತದಲ್ಲಿ ಅದರ ಮೌಲ್ಯ 89.79ರವರೆಗೂ ಹೋಗಿತ್ತು. ನಂತರ ತುಸು ಚೇತರಿಸಿಕೊಂಡು 89.53ರಲ್ಲಿ ದಿನಾಂತ್ಯಗೊಳಿಸಿತು. ಇವತ್ತು ಬೆಳಗ್ಗೆ 10:45ಕ್ಕೆ ಅದರ ಮೌಲ್ಯ 89.95ರವರೆಗೂ ಕುಸಿದಿದೆ. ಇವತ್ತೇ 90ರ ಗಡಿ ದಾಟಿದರೂ ಅಚ್ಚರಿ ಇರದು.

ಡಾಲರ್ ಎದುರು ರುಪಾಯಿ ಕುಸಿಯುತ್ತಿರುವುದು ಯಾಕೆ?

ಈ ವರ್ಷ ಡಾಲರ್ ಎದುರು ರುಪಾಯಿ ಮೌಲ್ಯ ಶೇ. 4.3 ಹೆಚ್ಚು ಪ್ರಮಾಣದಲ್ಲಿ ಕುಸಿತ ಕಂಡುಬಂದಿದೆ. 2025 ರಲ್ಲಿ ಏಷ್ಯಾದ ಕರೆನ್ಸಿಗಳ ಮೇಲಿನ ಅತ್ಯಂತ ಹೀನಯ ಪ್ರದರ್ಶನ ರುಪಾಯಿಯದ್ದು. ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾದರೂ ಭಾರತದ ಕರೆನ್ಸಿ ಇಷ್ಟು ಹಿನ್ನಡೆ ಕಾಣುತ್ತಿರುವುದಕ್ಕೆ ಕಾರಣಗಳಿವೆ.

ಇದನ್ನೂ ಓದಿ: ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದ ಹೂಡಿಕೆ, ಎಲ್ ಪಿಜಿ ಅನುಭೋಗದಲ್ಲಿ ಸಖತ್ ವರ್ಷ

ರುಪಾಯಿ ಮೌಲ್ಯ ಕುಸಿಯುತ್ತಿರುವುದಕ್ಕೆ ಕಾರಣವೇನು?

  • ಡಾಲರ್ ಕರೆನ್ಸಿ ಪ್ರಬಲವಾಗಿ ಉಳಿದಿದೆ
  • ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಇನ್ನೂ ಕೈಗೂಡದೇ ಇದೆ.
  • ಭಾರತದ ಮೇಲೆ ಅಮೇರಿದ ಟ್ಯಾರಿಫ್ ಇನ್ನೂ ಅಧಿಕ ಮಟ್ಟದಲ್ಲಿದೆ.
  • ಷೇರು ಮಾರುಕಟ್ಟೆಯಿಂದ ವಿದೇಶೀ ಹೂಡಿಕೆಗಳು ಹೆಚ್ಚಾಗಿ ಹೊರಹೋಗುತ್ತಿವೆ.
  • ಟ್ರೇಡ್ ಡೆಫಿಸಿಟ್ ಇನ್ನೂ ಇದೆ.
  • ಆರ್ಬಿಐ ಮೊದಲಿನಂತೆ ಈಗ ರುಪಾಯಿ ಕುಸಿತ ತಡೆಯಲು ಕ್ರಮ ತೆಗೆದುಕೊಳ್ಳುತ್ತಿಲ್ಲ

ರುಪಾಯಿ ಮೌಲ್ಯ ಕುಸಿತದಿಂದ ಅನನುಕೂಲಗಳೇನು?

  • ರುಪಾಯಿ ಮೌಲ್ಯ ಕಡಿಮೆಯಾಗಿದೆ.
  • ಆಮದು ಮಾಡಿಕೊಳ್ಳುವ ಉದ್ಯಮಗಳಿಗೆ ಹಿನ್ನಡೆಯಾಗಿದೆ.
  • ಹಣದುಬ್ಬರ ಪ್ರಮಾಣ.

ರುಪಾಯಿ ಕುಸಿತದಿಂದ ಅನುಕೂಲಗಳೇನು?

  • ರುಪಾಯಿ ಮೌಲ್ಯವನ್ನು ಕಡಿಮೆ ಮಾಡುವುದರಿಂದ ರಫ್ತಾಗುವ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ. ಇದರಿಂದ ರಫ್ತಿಗೆ ಅನುಕೂಲವಾಗುತ್ತದೆ.
  • ಅನಿವಾಸಿ ಭಾರತೀಯರು ತಮ್ಮ ಮನೆಗಳಿಗೆ ಹಣ ಕಳುಹಿಸಿದಾಗ, ಹೆಚ್ಚು ಹಣ ಸಿಗುತ್ತದೆ.

ಇದನ್ನೂ ಓದಿ: ಜಿಎಸ್ಟಿ ದರ ಕಡಿತದ ಪರಿಣಾಮ, ನವೆಂಬರ್‌ನಲ್ಲಿ ತೆರಿಗೆ ಸಂಗ್ರಹ ಕುಂಠಿತ

ಭಾರತ ರಫ್ತಿಗಿಂತ ಆಮದು ಹೆಚ್ಚಾಗಿ ಮಾಡಿಕೊಳ್ಳುವುದರಿಂದ ರುಪಾಯಿ ಮೌಲ್ಯ ಕುಸಿತದಿಂದ ಹಿನ್ನಡೆಯೇ ಹೆಚ್ಚು. ಅಮೆರಿಕದ ಜೊತೆ ಭಾರತ ಟ್ರೇಡ್ ಡೀಲ್ ತೆಗೆದುಕೊಂಡಿತು, ಟ್ಯಾರಿಫ್ ಅನ್ನು ಗಣನೀಯವಾಗಿ ಕಡಿಮೆ ಮಾಡಿಸಿಕೊಂಡರೆ ರುಪಾಯಿ ಮೌಲ್ಯವನ್ನು ಹೆಚ್ಚಿಸಬಹುದು. ಅಲ್ಲಿಯವರೆಗೆ ಭಾರತದ ಕರೆನ್ಸಿಯ ಹಿನ್ನಡೆ ಮುಂದುವರಿಯಬಹುದು.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:08 pm, ಮಂಗಳವಾರ, 2 ಡಿಸೆಂಬರ್ 25



Source link

Leave a Reply

Your email address will not be published. Required fields are marked *