Headlines

ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು

ಬೇರೆಡೆಗೆ ಹೋಗುತ್ತಿದ್ದ ರಷ್ಯನ್ ತೈಲ ಟ್ಯಾಂಕರ್​ಗಳು ಭಾರತದ ಕಡೆಗೆ; ಆಪತ್ಕಾಲದಲ್ಲಿ ಭಾರತಕ್ಕೆ ದಕ್ಕಿದ ನೆರವು


ನವದೆಹಲಿ, ಮಾರ್ಚ್ 5: ಪಶ್ಚಿಮ ಏಷ್ಯಾದ ಕಾರಣ ಜಾಗತಿಕ ತೈಲ ಪೂರೈಕೆಯಲ್ಲಿ ಭಾರತವು ಪೆಟ್ರೋಲಿಯಂ ಕೊರತೆಗೆ ಸಿಲುಕಿದೆ. ಇದೆ ಹೊತ್ತಲ್ಲಿ ರಷ್ಯಾ ದೇಶದಿಂದ ನೆರವಿನ ಹಸ್ತ ಸಿಕ್ಕಿದೆ. ಬ್ಲೂಮ್ಬರ್ಗ್ ವರದಿ ಪ್ರಕಾರ ತೈಲ ಹೊತ್ತ ಮೂರು ಹಡಗುಗಳು (ತೈಲ ಸರಕುಗಳು) ಭಾರತಕ್ಕೆ ಬರುತ್ತಿವೆ. ಇದರಲ್ಲಿ ಒಂದು ಹಡಗು ನಿನ್ನೆಯೇ (ಫೆ. 4) ಭಾರತಕ್ಕೆ ಬಂದಿದೆಯಂತೆ. ಈ ಮೂರು ಹಡಗುಗಳಲ್ಲಿ 21 ಲಕ್ಷಕ್ಕೂ ಅಧಿಕ ಬ್ಯಾರಲ್ ತೈಲ ಇದೆ.

ಓಡುನೆ, ಮಟಾರಿ ಮತ್ತು ಇಂದ್ರಿ ಹಡಗುಗಳ ಮೂಲಕ ಭಾರತಕ್ಕೆ ಈ ತೈಲ ಸಿಗುತ್ತಿದೆ. ಓಡುನೆ ಮತ್ತು ಇಂದ್ರಿ ಹಡಗುಗಳು ಸ್ಯೂಜ್ಮ್ಯಾಕ್ಸ್ ದರ್ಜೆಯ ಹಡುಗಗಳಾಗಿದ್ದರೆ, ತಲಾ 7,30,000 ಬ್ಯಾರಲ್ಗಳನ್ನು ಸಾಗಿಸುತ್ತವೆ. ಮಟಾರಿ ಎಂಬುದು ಆಫ್ರಾಮ್ಯಾಕ್ಸ್ ದರ್ಜೆಯ ಹಡಗಾಗಿದ್ದು, ಇದು 7,00,000 ಬ್ಯಾರಲ್ ತೈಲವನ್ನು ಸಾಗಿಸುತ್ತದೆ.

ಇದನ್ನೂ ಓದಿ: ಪೆಟ್ರೋಲ್ ಕೊರತೆ ಎದುರಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆಯ ಯೋಜನೆ ಹಾಕಿದ ಭಾರತ

7.3 ಲಕ್ಷ ಬ್ಯಾರಲ್ ತೈಲ ಹೊತ್ತ ಓಡುನೆ ಹಡಗು ಭಾರತದ ಪಾರದೀಪ್ ಬಂದರನ್ನು ತಲುಪಿದೆ. ಮಟಾರಿ ಟ್ಯಾಂಕರ್ ಗುಜರಾತ್ ನ ವಾಡಿನರ್ ಬಂದರಿನತ್ತ ಬರುತ್ತಿದೆ. ಇನ್ನು, ಸಿಂಗಾಪುರದತ್ತ ಹೋಗುತ್ತಿದ್ದ ಇಂದ್ರಿ ಟ್ಯಾಂಕರ್ ಭಾರತದತ್ತ ತಿರುಗಿದೆ ಎಂದು ಹೇಳಲಾಗುತ್ತಿದೆ.

ಪೆಟ್ರೋಲಿಯಂ ರಿಫೈನರಿ ಕಂಪನಿಗಳು ರಷ್ಯಾದಿಂದ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಾಧ್ಯತೆಯ ಬಗ್ಗೆ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದೆ.

ಉಕ್ರೇನ್ ಯುದ್ಧವು ಪ್ರಾರಂಭವಾಗಿ, ರಷ್ಯಾ ಮೇಲೆ ಪಾಶ್ಚಿಮಾತ್ಯ ದೇಶಗಳು ನಿಷೇಧ ಹಾಕಿದ ಬಳಿಕ ರಷ್ಯಾದಿಂದ ಭಾರತ ಹಾಗೂ ಚೀನಾ ಕಡಿಮೆ ಬೆಲೆಗೆ ತೈಲ ಖರೀದಿ ಮಾಡಲಾಗುತ್ತಿದೆ. ಆದರೆ, ಅಮೆರಿಕದ ಒತ್ತಡದಿಂದ ತಿಂಗಳ ಹಿಂದಷ್ಟೇ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿತ್ತು. ಭಾರತಕ್ಕೆಂದು ಇದ್ದ ತೈಲವನ್ನು ಚೀನಾ ಮತ್ತಷ್ಟು ಕಡಿಮೆ ಬೆಲೆಗೆ ಕೊಂಡುಕೊಂಡಿತು.

ಇದನ್ನೂ ಓದಿ: ಹಾರ್ಮುಜ್ ಮಾರ್ಗದಲ್ಲಿ ಚೀನಾಗೆ ಮಾತ್ರ ಅವಕಾಶ ಎಂದ ಇರಾನ್; ಭಾರತಕ್ಕೆ ನಾವು ತೈಲ ಕೊಡುತ್ತೇವೆ ಎಂದ ರಷ್ಯಾ

ಈಗ ಗಲ್ಫ್ ದೇಶಗಳಿಂದ ತೈಲ ಪೂರೈಕೆ ಸ್ಥಗಿತಗೊಂಡಿರುವ ಹೆಚ್ಚಾಗಿ ತೈಲಕ್ಕೆ ಬೇಡಿಕೆ ಬರುತ್ತಿದೆ. ಭಾರತ ಮತ್ತು ಚೀನಾದ ಕಂಪನಿಗಳು ತೈಲದ ಮೇಲೆ ಆಸಕ್ತಿ ತೋರಿವೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *