ಮದುವೆಗೆ 2 ವಾರ ಇರುವಾಗಲೇ ಅರ್ಜುನ್ ತೆಂಡೂಲ್ಕರ್ ಭಾವಿ ಪತ್ನಿಯ ಕೀನ್ಯಾ ಟ್ರಿಪ್ ವೈರಲ್ ಆಗಿದೆ. ಮಾರ್ಚ್ ಮೊದಲ ವಾರದಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ಇದಕ್ಕೂ ಮೊದಲು ಭಾವಿ ಪತ್ನಿ ಯಾರ ಜೊತೆ ಕೀನ್ಯಾ ಟ್ರಿಪ್ ಮಾಡಿದ್ದಾರೆ?

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತನ್ನ ಬಹು ಕಾಲದ ಗೆಳತಿ ಸಾನ್ಯ ಚಂದೋಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮಾರ್ಚ್ 5ರಂದು ವಿವಾಹ ಮಹೋತ್ಸ ನಡೆಯಲಿದೆ. ಹಲವು ಪ್ರತಿಷ್ಠಿತ ಗಣ್ಯರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮದುವೆಗೆ ಇನ್ನು ಎರಡು ವಾರ ಮಾತ್ರ ಬಾಕಿ. ಇದರ ನಡುವೆ ಅರ್ಜುನ್ ತೆಂಡೂಲ್ಕರ್ ಮದುವೆಯಾಗಲಿರುವ ಸಾನಿಯಾ ಚಂದೋಕ್ ಕೀನ್ಯಾ ಟ್ರಿಪ್ ಫೋಟೋಗಳು ವೈರಲ್ ಆಗಿದೆ.

ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ಕಾರ್ಯಕ್ರಮಗಳು ಆಗಾಗಲೇ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕೀನ್ಯಾ ಪ್ರವಾಸದ ಫೋಟೋ ವೈರಲ್ ಆಗಿದೆ. ವಿಶೇಷ ಅಂದರೆ ಸಾನಿಯಾ ಚಂದೋಕ್ ಕೀನ್ಯಾ ಪ್ರವಾಸವನ್ನು ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಜೊತೆ ತೆರಳಿದ್ದಾರೆ. ಇತ್ತೀಚಿನ ಪ್ರವಾಸದ ಫೋಟೋ ಈಗ ಬಹಿರಂಗವಾಗಿದೆ.

ಸಾನಿಯಾ ಚಂದೋಕ್ ಜೊತೆಗಿನ ಕೀನ್ಯಾ ಪ್ರವಾಸದ ಫೋಟೋಗಳನ್ನು ಸಾರಾ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ. ಕೀನಾದ ವನ್ಯ ಜೀವಿಗಳ ತಾಣದಲ್ಲಿ ಸಂಬ್ರಮಿಸುತ್ತಿರು ಫೋಟೋ, ಅಪರೂಪದ ಹಲವು ವನ್ಯ ಜೀವಿಗಳ ಫೋಟೋಗಳನ್ನು ಹಂಚಿಕೊಂಡಿದ್ದರೆ. ಇದೇ ವೇಳೆ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ಆರಂಭಗೊಂಡಿದೆ. ಈ ಪೈಕಿ ಒಂದು ಕಾರ್ಯಕ್ರಮದಲ್ಲಿ ಹಲವು ಗಣ್ಯರು ಪಾಲ್ಗೊಂಡಿದ್ದರು. ಟೀಂ ಇಂಡಿಯಾ ಆಟಗಾರ ಶುಬಮನ್ ಗಿಲ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಿರುವ ವಿಡಿಯೋಗಳು ವೈರಲ್ ಆಗಿತ್ತು.

ಪುತ್ರ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ಮದುವೆ ಕಾರ್ಯಕ್ರಮಕ್ಕೆ ಸಚಿನ್ ತೆಂಡೂಲ್ಕರ್ ದಂಪತಿ ಹಲವು ಗಣ್ಯರನ್ನು ಆಹ್ವಾನಿಸಿದೆ. ಈ ಪೈಕಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ ಹಲವರನ್ನು ಆಹ್ವಾನಿಸಲಾಗಿದೆ.

2025ರ ಆಗಸ್ಟ್ ತಿಂಗಳಲ್ಲಿ ಅರ್ಜುನ್ ತೆಂಡೂಲ್ಕರ್ ಹಾಗೂ ಸಾನಿಯಾ ಚಂದೋಕ್ ರಿಲೇಶನ್ಶಿಪ್ ಅಧಿಕೃತಗೊಂಡಿತ್ತು. ಆಪ್ತರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಈ ಮೂಲಕ ತಮ್ಮ ರಿಲೇಶನ್ಶಿಪ್ ಅಧಿಕತಗೊಳಿಸಿದ್ದರು. ಆದರೆ ಮದುವೆ ಅದ್ಧೂರಿಯಾಗಿ ಸಂಭ್ರಮಿಸಲು ಸಚಿನ್ ಕುಟುಂಬ ಎಲ್ಲಾ ತಯಾರಿ ನಡೆಸಿದೆ.

ಆಗಸ್ಟ್ನಲ್ಲಿ ರಿಲೇಶನ್ಶಿಪ್ ಅಧಿಕೃತ

Source link
ಮದುವೆಗೆ 2 ವಾರ ಇರುವಾಗಲೇ ಅರ್ಜುನ್ ತೆಂಡೂಲ್ಕರ್ ಭಾವಿ ಪತ್ನಿಯ ಕೀನ್ಯಾ ಟ್ರಿಪ್ ವೈರಲ್