Headlines

31 ಕೇಸ್ ಇದ್ದರೂ 9 ವರ್ಷಗಳಿಂದ ಕಣ್ಣಾಮುಚ್ಚಾಲೆ: ರಂಜಾನ್​​ಗೆಂದು ವಿದೇಶದಿಂದ ಬಂದು ಲಾಕ್​​ ಆದ ಆರೋಪಿ

31 ಕೇಸ್ ಇದ್ದರೂ 9 ವರ್ಷಗಳಿಂದ ಕಣ್ಣಾಮುಚ್ಚಾಲೆ: ರಂಜಾನ್​​ಗೆಂದು ವಿದೇಶದಿಂದ ಬಂದು ಲಾಕ್​​ ಆದ ಆರೋಪಿ


ಮಂಗಳೂರು/ ರಾಮನಗರ, ಫೆಬ್ರವರಿ 19: ಆರೋಪಿಗಳು ಚಾಪೆ ಕೆಳಗೆ ತೂರಿದರೆ, ಪೊಲೀಸರು ರಂಗೋಲಿ ಕೆಳಗೆ ತೂರ್ತಾರೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಒಂದೆರಡಲ್ಲ ಬರೋಬ್ಬರಿ 31 ಕೇಸುಗಳಿದ್ದರು ಪೊಲೀಸರ ಕೈಗೆ ಸಿಗದೆ 9 ವರ್ಷಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಆರೋಪಿಯನ್ನು ಕೊನೆಗೂ ಖಾಕಿ ಬಂಧಿಸಿದ್ದಾರೆ. ರೌಡಿಶೀಟರ್ ಸಫ್ವಾನ್ ಹುಸೇನ್ (42) ಅರೆಸ್ಟ್ ಆದ ಆರೋಪಿ, ಹೆಸರು ಬದಲಿಸಿಕೊಂಡು ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದ. ರಂಜಾನ್ ಹಿನ್ನೆಲೆ ವಿದೇಶದಿಂದ ಈತ ಬಂದಿರುವ ಮಾಹಿತಿ ಆಂಧ್ರ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಮಂಗಳೂರು ಸಿಸಿಬಿ ಈತನನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.

ಟಾರ್ಗೆಟ್ ಗ್ಯಾಂಗ್‌ನಲ್ಲಿ ಸಕ್ರಿಯವಾಗಿರುವ ರೌಡಿಶೀಟರ್ ಸಫ್ವಾನ್ ಹುಸೇನ್ ವಿರುದ್ಧ 2 ಕೊಲೆ, ಗ್ಯಾಂಗ್ ರೇಪ್, ಕೊಲೆಯತ್ನ, ದರೋಡೆ ಸೇರಿದಂತೆ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು 31 ಪ್ರಕರಣಗಳಿವೆ. ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನದಲ್ಲಿ ಈತ ಕಾಣಿಸಿಕೊಂಡಿದ್ದಾನೆ. ನಕಲಿ ಹೆಸರಿನಲ್ಲಿ ಆಧಾರ್ ಮಾಡಿ ಆಂಧ್ರ ಪ್ರದೇಶದಲ್ಲಿ ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದ ಆರೋಪಿ, 2018ರಲ್ಲಿ ವಿದೇಶಕ್ಕೆ ಪರಾರಿಯಾಗಿದ್ದ. ಆದರೆ ಹಬ್ಬದ ಹಿನ್ನೆಲೆ ದೇಶಕ್ಕೆ ಮರಳಿ ಬಂದಿರುವ ಮಾಹಿತಿ ಆಧಾರದಲ್ಲಿ ಎಸ್‌ಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಆಂಧ್ರ ಪ್ರದೇಶದ ರಾಯ್ ಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಮಂಗಳೂರು ಸಿಸಿಬಿ ಪೊಲೀಸ್ ತಂಡ ಸಫ್ವಾನ್ ಹುಸೈನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ; ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು

ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದ ಪಾಪಿ ಪತಿ

ಪತ್ನಿಯನ್ನು ಪತಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರದ ಯಾರಬ್ ಎಂಬಲ್ಲಿ ನಡೆದಿದೆ. ಸೋಫಿಯಾ ಬಾನು(21) ಕೊಲೆಯಾದ ದುರ್ದೈವಿ, ಆರೋಪಿ ಸಲ್ಮಾನ್(22) ಆರೋಪಿಯಾಗಿದ್ದಾನೆ. ಪತ್ನಿಯನ್ನು ಹತ್ಯೆ ಮಾಡಿ ಈತ ತಾನೇ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದರೆ, ಕೌಟುಂಬಿಕ ಕಲಹ ಅಥವಾ ಅನೈತಿಕ ಸಂಬಂಧ ಹಿನ್ನೆಲೆ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ರಾಮನಗರ ಟೌನ್ ಪೊಲೀಸ್ ಠಾಣಾ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *