
ಕೋಲಾರ, ಮಾರ್ಚ್ 07: ಯುಪಿಎಸ್‌ಸಿ 2026 ರ ಫಲಿತಾಂಶ ಪ್ರಕಟವಾಗಿದ್ದು, ಕೋಲಾರ ಜಿಲ್ಲೆಯ ಅಣ್ಣಿನಹಳ್ಳಿಯ ರೈತನ ಮಗ ಸಾಗರ್ 641ನೇ ಅಖಿಲ ಭಾರತ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ. ರಾಜ್ಯದಿಂದ 22ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐಎಸ್‌ಎಸ್ ಮತ್ತು ಐಪಿಎಸ್ ಶ್ರೇಣಿಗಳಿಗೆ ಆಯ್ಕೆಯಾಗುತ್ತಿದ್ದಾರೆ. ಸಾಗರ್ ಎ. ಅವರು ತಮ್ಮ ಸಾಧನೆಯನ್ನು ಟಿವಿ9 ಜೊತೆ ಹಂಚಿಕೊಂಡಿದ್ದಾರೆ.
ಸಾಗರ ಮೂಲತಃ ಕೋಲಾರ ಜಿಲ್ಲೆಯ ನೆನಮನಹಳ್ಳಿ ನಿವಾಸಿ, ಅವರ ತಂದೆ-ತಾಯಿ ಇಬ್ಬರೂ ರೈತರು. ಸಾಗರ್ ಅವರು ಈ ಹಿಂದೆ ವಿಧಾನಸೌಧದಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಸಬ್ ಇನ್ಸ್ ಪೆಕ್ಟರ್ ಆಗಿ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದಾರೆ. ಏಳು ವರ್ಷಗಳ ಕಾಲ ಯುಪಿಎಸ್ಸಿ ಪರೀಕ್ಷೆಗೆ ಸತತವಾಗಿ ಅಧ್ಯಯನ ಮಾಡಿದ ಸಾಗರ್, ಇದು ಅವರ ಆರನೇ ಪ್ರಯತ್ನವಾಗಿದೆ. ಹಿಂದಿನ ಐದು ಪ್ರಯತ್ನಗಳಲ್ಲಿ ಪ್ರಿಲಿಮ್ಸ್ ಹಂತವನ್ನು ಸಹ ಮಾಡಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ಪ್ರಿಲಿಮ್ಸ್, ಮೇನ್ಸ್ ಮತ್ತು ಸಂದರ್ಶನ ಮೂರನ್ನೂ ಯಶಸ್ವಿಯಾಗಿ ತಲುಪಿದ್ದಾರೆ. ಈ ಸಾಧನೆಗೆ ಕುಟುಂಬ, ಸ್ನೇಹಿತರು ಮತ್ತು ಮಾರ್ಗದರ್ಶಕರ ಬೆಂಬಲವೂ ಕಾರಣ ಎಂದು ಸಾಗರ್ ಹೇಳಿದ್ದಾರೆ. ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಿದ್ಧರಾಗಿರುವ ಸಾಗರ್, ಭವಿಷ್ಯದಲ್ಲಿ ಐಎಸ್ಎಸ್ ಆಗುವ ಗುರಿಯನ್ನು ಹೊಂದಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.