
ಕಾಲಜ್ಞಾನ ಶಾಸ್ತ್ರವು ಏಪ್ರಿಲ್ 2026 ರ ಗ್ರಹಗತಿಗಳನ್ನು ಗಮನಿಸಿದಾಗ, ಧನು ರಾಶಿಯವರಿಗೆ ಅಂದರೆ ಮೂಲ, ಪೂರ್ವಾಷಾಢ, ಉತ್ತರಾಷಾಢ 1ನೇ ಪಾದದ ನಕ್ಷತ್ರದವರಿಗೆ ಈ ತಿಂಗಳ ಮಿಶ್ರಫಲಗಳಿಂದ ಕೂಡಿದೆ. ರಾಶ್ಯಾಧಿಪತಿ ಗುರು ಮಿಥುನ ರಾಶಿಯಲ್ಲಿ, ಶನಿ ಕುಂಭದಲ್ಲಿ ಹಾಗೂ ರಾಹು-ಕೇತುಗಳು ಕುಂಭ ಮತ್ತು ಸಿಂಹ ರಾಶಿಯಲ್ಲಿದ್ದಾರೆ. ನಿಮ್ಮ ಜಾತಕದ ದಶೆ ಮತ್ತು ಗೋಚಾರ ಫಲಗಳು
ಅಧಿಕಾರ ಮತ್ತು ಉದ್ಯೋಗ:
ನಿಮ್ಮ ರಾಶಿಯನ್ನು ನೋಡಿದರೆ ನಿಮ್ಮ ರಾಶಿಯನ್ನು ಏಳನೇ ಮನೆಯಲ್ಲಿ ಇಟ್ಟುಕೊಂಡು ದೊಡ್ಡ ಬಲ. ಇದು ನಿಮಗೆ ಸಮಾಜದಲ್ಲಿ ಗೌರವ ಮತ್ತು ಕೆಲಸದಲ್ಲಿ ಅಧಿಕಾರ ತಂದುಕೊಡಲಿದೆ. ನಿಮ್ಮ ರಾಶಿಯ ಹಿಂದಿನ ಮನೆಯಲ್ಲಿ (ವೃಶ್ಚಿಕ) ಮಂಗಳ-ಚಂದ್ರ ಕೆಲಸದಲ್ಲಿ ಸ್ವಲ್ಪ ಒತ್ತಡ ಅಥವಾ ಮಾನಸಿಕ ಆತಂಕ ಇರಬಹುದು, ಆದರೆ ಯಶಸ್ಸು ನಿಮ್ಮದಾಗುತ್ತದೆ.
ಆರ್ಥಿಕತೆ ಮತ್ತು ಆದಾಯ :
ಮೂರನೇ ಮನೆಯಲ್ಲಿ ರಾಹು ಮತ್ತು ಬುಧ ಭವಿಷ್ಯ ನಿಮ್ಮ ಬುದ್ಧಿವಂತಿಕೆಯಿಂದ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಠಾತ್ ಧನಲಾಭದ ಯೋಗವಿದೆ. ಆದರೆ ನಾಲ್ಕನೇ ಮನೆಯಲ್ಲಿ ಶನಿ-ರವಿ ಎಂದು ಮನೆ ಅಥವಾ ವಾಹನದ ಮೇಲೆ ಖರ್ಚು ಮಾಡಬಹುದು.
ಗೃಹ ನಿರ್ಮಾಣ ಮತ್ತು ಕೃಷಿ :
ನಾಲ್ಕನೇ ಮನೆಯಲ್ಲಿ ಶನಿ ಮತ್ತು ರವಿಯ ಯುತಿ ಗೃಹ ನಿರ್ಮಾಣ ಕಾರ್ಯಗಳಲ್ಲಿ ವಿಳಂಬ ಅಥವಾ ತಾಂತ್ರಿಕ ಅಡೆತಡೆಗಳು ಎದುರಾಗಬಹುದು. ಎಚ್ಚರಿಕೆಯಿಂದ ಮುಂದುವರಿಯಿರಿ. ಕೃಷಿಯಲ್ಲಿ, ವಿಶೇಷವಾಗಿ ಅಡಿಕೆ ಅಥವಾ ತೋಟಗಾರಿಕೆಯಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಮಣ್ಣಿನ ಸತ್ವವನ್ನು ನೀವು ಮಾಡುತ್ತಿರುವ ನೈಸರ್ಗಿಕ ವಿಧಾನಗಳು ದೀರ್ಘಕಾಲದ ಲಾಭ ನೀಡಲಿವೆ.
ಸಾಲ ಮತ್ತು ಸಮಾಜ ಸೇವೆ:
ಒಂಭತ್ತನೇ ಮನೆಯಲ್ಲಿ ಕೇತು ಆಧ್ಯಾತ್ಮಿಕ ಚಿಂತನೆ ಹೆಚ್ಚಲಿದೆ. ಸಮಾಜ ಸೇವೆಗೆ ಇದು ಸಕಾಲ. ಅನಗತ್ಯ ಸಾಲ ಮಾಡುವುದರಿಂದ ದೂರವಿರಿ, ಏಕೆಂದರೆ 4ನೇ ಮನೆಯ ಶನಿಯು ಮಾನಸಿಕ ನೆಮ್ಮದಿಯನ್ನು ಸ್ವಲ್ಪ ಕಡಿಮೆ ಮಾಡಬಹುದು.
ವಿದ್ಯಾಭ್ಯಾಸ ಮತ್ತು ವಿದೇಶ ಪ್ರವೇಶ:
ಹೆಚ್ಚಿನ ಜ್ಞಾನಿಯಾಗಲಿದೆ. ಮೂರನೇ ಮನೆಯ ರಾಹುವು ಧೈರ್ಯವನ್ನು ನೀಡುವುದರಿಂದ ವಿದೇಶ ಪ್ರವೇಶ ಅಥವಾ ದೂರದ ಪ್ರಯಾಣದ ಪ್ರಯತ್ನಗಳು ಫಲಪ್ರದವಾಗಲಿವೆ.
ಆಹಾರ ಉದ್ಯಮ ಮತ್ತು ಸಂಬಂಧ:
ಏಳನೇ ಮನೆಯ ಗುರುವು ಆಹಾರ ಉದ್ಯಮದಲ್ಲಿರುವವರಿಗೆ ಮತ್ತು ವ್ಯಾಪಾರಸ್ಥರಿಗೆ ಅತ್ಯಂತ ಶುಭಕರ. ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯವಿರಲಿದೆ, ಹೊಸ ಒಪ್ಪಂದಗಳಿಗೆ ಇದು ಸರಿಯಾದ ಸಮಯ.
– ಲೋಹಿತ ಹೆಬ್ಬಾರ್