ಗಿಲ್ಲಿ ನಟ ಅವರು ಹೋದಲ್ಲಿ ಬಂದಲ್ಲಿ ಜನರು ಸೇರುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಈಗ ಅವರು ಬಂಗಾರದ ಅಂಗಡಿ ಉದ್ಘಾಟನೆಗೆ ಆಗಮಿಸಿದ್ದರು. ಆ ವೇಳೆ ಅವರಿಗೆ ಬಂಗಾರದ ಆಭರಣ ಹಾಕಲಾಗಿದೆ.

ಬಂಗಾರದ ಆಭರಣಗಳ ಉದ್ಘಾಟನೆಗೆ ಅತಿಥಿಗಳು ಬರುತ್ತಾರೆ. ಆಗ ಅತಿಥಿಗಳ ಕೊರಳಿಗೆ ಬಂಗಾರದ ಆಭರಣ ಹಾಕಲಾಗುವುದು. ಆ ಕಾರ್ಯಕ್ರಮ ಮುಗಿದಕೂಡಲೇ ಆಭರಣವನ್ನು ಮರಳಿ ನೀಡಬೇಕು.

ಗಿಲ್ಲಿ ನಟ ಅವರು ಮಾತನಾಡಿ, “ಟಿ ಎ ಶರವಣ ಅವರು ನನಗೆ ಮೊದಲಿನಿಂದಲೂ ಪರಿಚಯ ಇತ್ತು. ಇಂದು ಎಂಟನೇ ಸ್ಟೋರ್ ಉದ್ಘಾಟನೆಯಾಗಿರೋದು ಖುಷಿಯಾಗಿದೆ. ಬಂಗಾರ ಅಂದರೆ ಎಲ್ಲರಿಗೂ ಇಷ್ಟ, ದುಡ್ಡು ಇದ್ದವರು ಬಂಗಾರ ತಗೊಳ್ತಾರೆ. ದುಡ್ಡು ಇಲ್ಲದವರು ತಗೊಳೋದಿಲ್ಲ” ಎಂದಿದ್ದಾರೆ.

ನಿಮಗೆ ಬಂಗಾರ ಇಷ್ಟವಾ? ಬಂಗಾರ ತಗೋತೀರಾ? ಎಂದು ಪ್ರಶ್ನೆ ಮಾಡಲಾಗಿದೆ. ಆಗ ಗಿಲ್ಲಿ ನಟ ಅವರು ಬಂಗಾರಕ್ಕಿಂತ ಜನರು ಇಷ್ಟ, ಇಲ್ಲಿಗೆ ಬಂದಮೇಲೆ ಜನರನ್ನು ನೋಡಿ ಖುಷಿಯಾಗುತ್ತಿದೆ ಎಂದು ಹೇಳಿದ್ದಾರೆ.

ಗಿಲ್ಲಿಗಿಂತ ದೊಡ್ಡದು ಯಾವುದೂ ಇಲ್ಲ. ಗಿಲ್ಲಿಯೇ ಬಂಗಾರ. ಗಿಲ್ಲಿ ಹೇಳಿದ ಹಾಗೆ ಎಂದು ಶರವಣ ಹೇಳಿದ್ದಾರೆ. ಒಟ್ಟಿನಲ್ಲಿ ಗಿಲ್ಲಿ ನಟನ ಕ್ರೇಜ್‌ಗೆ ಸಾಟಿಯೇ ಇಲ್ಲ ಎಂದು ಹೇಳಬಹುದು.

ಟಿ ಎಸ್ ಶರವಣ ಅವರೇ ಗಿಲ್ಲಿ ನಟನಿಗೆ ದೊಡ್ಡದಾದ ಸರವನ್ನು ತಮ್ಮ ಕೈಯಾರೆ ಹಾಕಿದ್ದಾರೆ. ಬಹುಶಃ ಅರ್ಧ ಕೆಜಿಯಷ್ಟು ಬಂಗಾರದ ಸರವನ್ನು ಗಿಲ್ಲಿ ಕೊರಳಿಗೆ ಹಾಕಿದ್ದಾರೆ. ರುಕ್ಮಿಣಿ ವಸಂತ್ ಸೇರಿ ಅನೇಕ ಬಿಗ್ ಬಾಸ್ ಸ್ಪರ್ಧಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಶರವಣ ಅವರು ಬಂಗಾರದ ಸರವನ್ನು ಕೊಟ್ಟರೂ ಕೂಡ ಅದನ್ನು ಮರಳಿ ನೀಡಬೇಕು.

Source link
ಗಿಲ್ಲಿ ನಟನಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಕೊರಳಿಗೆ ಕೆಜಿಗಟ್ಟಲೇ ಬಂಗಾರ ಹಾಕಿದ ಶರವಣ!