
ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯನ್ನು ಪ್ರೇಕ್ಷಕರು ತುಂಬಾ ಇಷ್ಟಪಟ್ಟಿದ್ದಾರೆ. ಬ್ರಿಟಿಷ್ ಮೂಲದ ಈ ನಟಿ ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’, ‘ಟೈಗರ್ 3’, ‘ಭಾರತ್’, ‘ಪಾರ್ಟ್ನರ್’, ‘ಮೈನೆ ಪ್ಯಾರ್ ಕ್ಯೂನ್ ಕಿಯಾ’ ಮುಂತಾದ ಚಿತ್ರಗಳಲ್ಲಿ ಸಲ್ಮಾನ್ ಎದುರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ‘ಬಾಡಿಗಾರ್ಡ್’ ನಂತಹ ಅನೇಕ ಚಿತ್ರಗಳಲ್ಲಿ ವಿಶೇಷ ಪಾತ್ರ/ಕ್ಯಾಮಿಯೋ ಕೂಡ ಮಾಡಿದ್ದಾರೆ.