ಫೆಬ್ರವರಿ ತಿಂಗಳು ಎಂದರೆ ಪ್ರೇಮಿಗಳಿಗೆ ಸಖತ್ ಸ್ಪಶಲ್. ವ್ಯಾಲೆಂಟೈನ್ಸ್ ಡೇ ಇರುವ ಕಾರಣ ಯುವ ಮನಸ್ಸುಗಳು ಪ್ರೀತಿಯ ಗುಂಗಿನಲ್ಲಿ ಇರುತ್ತವೆ. ಈ ತಿಂಗಳ ರೊಮ್ಯಾಂಟಿಕ್ ಸಿನಿಮಾ ನೋಡುವ ವರ್ಗ ಕೂಡ ದೊಡ್ಡದಾಗಿರುತ್ತದೆ. ಅಂತಹ ಚಿತ್ರವನ್ನು ಗಮನದಲ್ಲಿ ಇಟ್ಟುಕೊಂಡು ‘ತೇರೆ ನಾಮ್’ (ತೇರೆ ನಾಮ್) ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಸಲ್ಮಾನ್ ಖಾನ್ (ಸಲ್ಮಾನ್ ಖಾನ್) ಅವರು ಈ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸಿದ್ದಾರೆ. ಫೆಬ್ರವರಿ 27 ರಂದು ಈ ಸಿನಿಮಾ ಮರು ಬಿಡುಗಡೆ ಆಗಲಿದೆ.
‘ತೇರೆ ನಾಮ್’ ಸಿನಿಮಾದಲ್ಲಿ ಕಾಡುವ ಒಂದು ಪ್ರೇಮ್ ಕಹಾನಿ ಇದೆ. ಈ ಚಿತ್ರಕ್ಕೆ ಸತೀಶ್ ಕೌಶಿಕ್ ಅವರು ನಿರ್ದೇಶನ ಮಾಡಿದ್ದಾರೆ. 2003ರ ಆಗಸ್ಟ್ 15ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಆಗ ನೋಡು ಬಹಳ ಮೆಚ್ಚಿಕೊಂಡಿದ್ದರು. ಈ ಚಿತ್ರದಿಂದ ಸಲ್ಮಾನ್ ಖಾನ್ ಅವರ ಖ್ಯಾತಿ ಹೆಚ್ಚಾಗಿತ್ತು. ಈಗ ಮತ್ತೆ ‘ತೇರೆ ನಾಮ್’ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡುವ ಅವಕಾಶ ಸಿಗುತ್ತಿದೆ.
ಅಭಿಮಾನಿಗಳು ‘ತೇರೆ ನಾಮ್’ ಸಿನಿಮಾವನ್ನು ಹಿಮದಿಂದ ನೆನಪಿಸಿಕೊಳ್ಳುವುದು ಸಲ್ಮಾನ್ ಖಾನ್ ಅವರ ನಟನೆ ಮತ್ತುೇಶ್ ರೇಷಮಿಯಾ ಅವರ ಹಾಡುಗಳಿಗೆ ಕಾರಣ. ಸಲ್ಮಾನ್ ಖಾನ್ ಅವರ ವೃತ್ತಿಜೀವನದ ಅತ್ಯುತ್ತಮ ನಟನೆ ಈ ಸಿನಿಮಾದಲ್ಲಿದೆ ಎಂಬುದು ಅಭಿಮಾನಿಗಳ ಅಭಿಪ್ರಾಯ. ಅದೇ ರೀತಿ, ಹಿಮೇಶ್ ರೇಷಮಿಯಾ ಅವರು ಸಂಗೀತ ನೀಡಿದ ಹಾಡುಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ.
23 ವರ್ಷಗಳ ಬಳಿಕ ‘ತೇರೆ ನಾಮ್’ ಸಿನಿಮಾ ಮರು ಬಿಡುಗಡೆ ಆಗುತ್ತಿದೆ. 2003ರಲ್ಲಿ ರಿಲೀಸ್ ಆದಾಗ ಈ ಸಿನಿಮಾವನ್ನು ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಂಡವರು ಈಗ ಕಣ್ತುಂಬಿಕೊಳ್ಳುವ ಚಾನ್ಸ್ ಸಿಗುತ್ತಿದೆ. ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಇದರಿಂದ ಖುಷಿಯಾಗಿದೆ. ಹೊಸ ತಲೆಮಾರಿನ ಪ್ರತಿಕ್ರಿಯೆಯಿಂದ ಈ ಚಿತ್ರಕ್ಕೆ ಯಾವ ರೀತಿ ಸಿಗುತ್ತದೆ ಕಾದುನೋಡಬೇಕು.
ಇದನ್ನೂ ಓದಿ: ‘ಧುರಂಧರ 2’ ಸಿನಿಮಾದಲ್ಲಿ ಸಲ್ಮಾನ್ ಖಾನ್? ವೈರಲ್ ಆಗಿದೆ ಫೋಟೋ
ಇದು ತಮಿಳಿನ ‘ಸೇತು’ ಸಿನಿಮಾದ ರಿಮೇಕ್. ‘ಸೇತು’ ಚಿತ್ರ 1999ರಲ್ಲಿ ಬಿಡುಗಡೆಯಾಗಿದೆ. ಆ ಸಿನಿಮಾದಲ್ಲಿ ವಿಕ್ರಮ್ ಅವರು ಹೀರೋ ಆಗಿ ನಟಿಸಿದ್ದರು. ಬಳಿಕ 2001ರಲ್ಲಿ ಆ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ (ಹುಚ್ಚ) ಚಿತ್ರ. ಸುದೀಪ್ ಅವರು ಮುಖ್ಯ ಪಾತ್ರ ವಹಿಸಿದ್ದರು. ಅವರ ನಟನೆಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.