ತೆಲಂಗಾಣದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಸಲ್ಮಾನ್ ಖಾನ್

ತೆಲಂಗಾಣದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಸಲ್ಮಾನ್ ಖಾನ್


ಬಾಲಿವುಡ್ (ಬಾಲಿವುಡ್) ಸ್ಟಾರ್ ನಟ, ನಿರ್ಮಾಪಕರ ಕಣ್ಣು ದಕ್ಷಿಣ ಭಾರತದ ಮೇಲೆ ಬಿದ್ದಿದೆ. ದಕ್ಷಿಣ ಭಾರತವನ್ನು ಗುರಿಯಾಗಿರಿಸಿಕೊಂಡು ಸಿನಿಮಾ ನಿರ್ಮಿಸಲಾಗುತ್ತಿದೆ, ಪ್ರಚಾರಕ್ಕೆ ಕಡ್ಡಾಯವಾಗಿ ದಕ್ಷಿಣ ಭಾರತಕ್ಕೆ ಬಾಲಿವುಡ್ ಮಂದಿ ಬರುತ್ತಿದ್ದಾರೆ. ದಕ್ಷಿಣ ಸಿನಿಮಾ ನಿರ್ದೇಶಕರನ್ನು ಎರವಲು ಪಡೆದು ಭಾರತದ ಬಾಲಿವುಡ್ ಸ್ಟಾರ್ ನಟರು ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ದಕ್ಷಿಣ ಭಾರತದಲ್ಲಿ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸಹ ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಅವರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿ ಸ್ಟುಡಿಯೋ ನಿರ್ಮಾಣಕ್ಕೆ ಮೆಮೊರಾಂಡಮ್ ಮಾಡಿಕೊಂಡಿದ್ದರು. ಅಜಯ್ ದೇವಗನ್ ಅವರು ಹೈದರಾಬಾದ್‌ನಲ್ಲಿ ವಿಎಫ್‌ಎಕ್ಸ್ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದ್ದರು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಹಣವನ್ನು ಹೈದರಾಬಾದ್‌ನಲ್ಲಿ ಹೂಡಿಕೆ ಮಾಡಲು ಮುಂದಾಗಿದ್ದಾರೆ.

ಸಲ್ಮಾನ್ ಖಾನ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಹೈದರಾಬಾದ್‌ನಲ್ಲಿ ಭಾರಿ ಹೂಡಿಕೆ ಆಗಲಿದೆ. ಹೈದರಾಬಾದ್ ಹೊರವಲಯದಲ್ಲಿ ಭಾರಿ ದೊಡ್ಡ ಟೌನ್ ಶಿಪ್ ನಿರ್ಮಾಣಕ್ಕೆ ಸಲ್ಮಾನ್ ಖಾನ್ ಮುಂದಾಗಿದ್ದಾರೆ. ಈ ಟೌನ್ ಶಿಪ್ ಗಾಲ್ಫ್ ಕೋರ್ಸ್, ರೇಸ್ ಕೋರ್ಸ್, ಹೈ ಎಂಡ್ ಸೌಲಭ್ಯಗಳು, ಕೃತಕ ಅರಣ್ಯ, ಹೈ ಎಂಡ್ ಪಾರ್ಕ್‌ಗಳು ಇನ್ನೂ ಹಲವು ಸೌಲಭ್ಯಗಳನ್ನು ಒಳಗೊಂಡಿವೆ. ಐಶಾರಾಮಿ ಟೌನ್ ಶಿಪ್ ಜೊತೆಗೆ ಭಾರಿ ದೊಡ್ಡ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೂ ಸಹ ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಗ್ಯಾಂಗ್ ಸೇರಿದ ತಮನ್ನಾ ಭಾಟಿಯಾ, ಸೋನಾಕ್ಷಿ ಸಿನ್ಹಾ ಔಟ್

ಹೈದರಾಬಾದ್ ನಲ್ಲಿ ಕೆಲವಾರು ದೊಡ್ಡ ಸಿನಿಮಾ ಸ್ಟುಡಿಯೋಗಳಿವೆ. ಇದರ ನಡುವೆ ಸಲ್ಮಾನ್ ಖಾನ್ ಇನ್ನೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ, ಸೌಕರ್ಯಗಳುಳ್ಳ ಸಿನಿಮಾ ಸ್ಟುಡಿಯೋ ನಿರ್ಮಾಣಕ್ಕೆ ಮುಂದಾಗಿದೆ. ಚಿತ್ರಕ್ಕೆ ಬೇಕಾದ ಸೌಕರ್ಯಗಳ ಜೊತೆಗೆ ಪೋಸ್ಟ್ ಪ್ರೊಡಕ್ಷನ್, ಪ್ರೀ ಪ್ರೊಡಕ್ಷನ್‌ಗಳ ಜೊತೆಗೆ ತರಬೇತಿ ಕಾರ್ಯಗಾರರಿಗೂ ಸಹ ಈ ಸ್ಟುಡಿಯೋನಲ್ಲಿ ವ್ಯವಸ್ಥೆ ಇರುತ್ತದೆ. ಸಿನಿಮಾ ತಂಡವೊಂದು ಸ್ಟುಡಿಯೋದ ಒಳಹೊಕ್ಕರೆ ಇಡೀ ಸಿನಿಮಾವನ್ನು ಇಲ್ಲಿಯೇ ಮುಗಿಸಿಕೊಂಡು ಹೊರಬರಬಹುದು.

ತೆಲಂಗಾಣ ಸರ್ಕಾರ ಸಹ, ಹೈದರಾಬಾದ್ ಅನ್ನು ವಿಶ್ವಫಿಲಂ ಸಿಟಿಯನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಇದೇ ಕಾರಣಕ್ಕೆ ಸಿನಿಮಾ ಸಂಬಂಧಿ ಹೂಡಿಕೆಗಳನ್ನು ಸ್ವಾಗತಿಸುತ್ತಿದೆ. ವಿಶ್ವ ಗುಣಮಟ್ಟದ ತಂತ್ರಜ್ಞಾನವನ್ನು, ಸವಲತ್ತುಗಳನ್ನು ಹೈದರಾಬಾದ್‌ಗೆ ತರಬೇಕಾದ ಗುರಿಯನ್ನು ತೆಲಂಗಾಣ ಸರ್ಕಾರ ಹೊಂದಿದ್ದು, ಇದೀಗ ಹೈದರಾಬಾದ್‌ನಲ್ಲಿ ‘ಹೈದರಾಬಾದ್ ವಿಷನ್ 2047’ ನಲ್ಲಿ ಈ ಕುರಿತು ಚರ್ಚೆ ನಡೆದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *