ಸಲ್ಮಾನ್ ಖಾನ್ ಅವರು ‘ಬಿಗ್ ಬಾಸ್ ಹಿಂದಿ ಸೀಸನ್ 19’ ನಡೆಸಿಕೊಡುತ್ತಾ ಇದ್ದಾರೆ. ಅವರಿಂದ ಶೋಗೆ ಹೊಸ ಕಳೆ ಬಂದಿದೆ ಎಂದರೂ ತಪ್ಪಾಗಲಾರದು. ಅವರು ಸ್ಪರ್ಧಿಗಳನ್ನು ಹೊಗಳಿದಾಗ, ಅವರ ಬಗ್ಗೆ ಕೂಲ್ ಆಗಿ ಮಾತನಾಡುವಾಗ ಕಡಿಮೆ. ಈಗ ತಾನ್ಯಾ ಮಿತ್ತಲ್ ಬಗ್ಗೆ ಸಲ್ಮಾನ್ ಖಾನ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅವರ ಬಾಯಿಯಿಂದ ಪದ ಬಳಕೆ ಆಗಿಲ್ಲ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಹೊಗಳಿಕೆಯಿಂದ ತಾನ್ಯ ಕೂಡ ಖುಷಿಯಾದರು.
ತಾನ್ಯಾ ಮಿತ್ತಲ್ ಅವರು ಬಿಗ್ ಬಾಸ್‌ಗೆ ಬಂದಾಗಿನಿಂದಲೂ ಗಮನ ಸೆಳೆಯುತ್ತಿದ್ದಾರೆ. ಅವರು ತಮ್ಮ ಹೆಸರಲ್ಲಿ ಸಾಕಷ್ಟು ಕಂಪನಿ ಇದೆ, ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಹೇಳಲಾಗಿದೆ. ಇದನ್ನು ನಂಬಿದ್ದಾರೆ. ಬಿಗ್ ಬಾಸ್ ಮನೆಯಲ್ಲೇ ಇದರ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಈಗ ತಾನ್ಯಾ ಬಗ್ಗೆ ಸಲ್ಮಾನ್ ಖಾನ್ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಇದನ್ನೂ ಓದಿ
‘ನೀಲಂ ಹಾಗೂ ತಾನ್ಯಾ ಕೆಟ್ಟ ಶಬ್ದ ಬಂದಿಲ್ಲ. ತಾನ್ಯಾ ವಿರುದ್ಧ ಯಾರಾದರೂ ಜಗಳ ಮಾಡಿದರೆ ಅವರು ರಾಮ್, ರಾಮ್ ರಾಮ್ ಎನ್ನುತ್ತಾರೆ. ಶಕ್ತಿ ಸಿಗಲಿ ಎಂದು ಅವರು ಆ ರೀತಿ ಮಾಡುತ್ತಾರೆ’ ಎಂದು ಸಲ್ಮಾನ್ ಖಾನ್ ಅವರು ಮೆಚ್ಚುಗೆ ಸೂಚಿಸಿದರು. ಸಲ್ಮಾನ್ ಖಾನ್ ಅವರ ಮಾತನ್ನು ಅನೇಕರು ಒಪ್ಪಿಕೊಂಡಿದ್ದಾರೆ. ತಾನ್ಯಾ ಅವರು ಬ್ಯುಟಿ ಮತ್ತು ಬ್ರಿಲಿಯನ್ಸಿ ಒಟ್ಟಿಗೆ ಇದೆ ಎಂದು ಅನೇಕರು ಹೇಳಿದ್ದು ಇದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿದ್ದ ತಾನ್ಯಾ ಮಿತ್ತಲ್ ಶೀಘ್ರವೇ ಬಂಧನ?
ತಾನ್ಯಾ ಅವರು ವಿವಾದಗಳ ಮೂಲಕವೂ ಸುದ್ದಿಯಲ್ಲಿದ್ದಾರೆ. ಅವರು ಅನೇಕ ಸುಳ್ಳುಗಳನ್ನು ಹೇಳಿದ್ದಾರೆ ಮತ್ತು ತಮಗೆ ಮೋಸ ಮಾಡಿದ್ದಾರೆ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದಾನೆ. ಹೀಗಾಗಿ, ಅವರ ವಿರುದ್ಧ ಕೇಸ್ ದಾಖಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಅವರನ್ನು ಬಂಧಿಸಿ ಕರೆದುಕೊಂಡು ಹೋಗಬೇಡಿ ಎಂಬ ಪ್ರಶ್ನೆಯೂ ಮೂಡಿದೆ. ಅವರು ಫಿನಾಲೆವರೆಗೂ ಇರುತ್ತಾರೆ ಎಂಬುದು ಅನೇಕರ ಅಭಿಪ್ರಾಯ. ಈ ವಿಚಾರ ವೀಕೆಂಡ್‌ನಲ್ಲಿ ಚರ್ಚೆ ಆಗುತ್ತದೆಯಾ ನೋಡಬೇಕಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.