Headlines

ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ

ಐಡಿಯಾ ಯಾರದು ಅನ್ನೋದು ಮುಖ್ಯ ಅಲ್ಲ, ಅದನ್ನು ಜಾರಿಗೆ ತರೋನೇ ಜಾಣ: ಚ್ಯಾಟ್​ಜಿಪಿಟಿ ರೂವಾರಿ ಸ್ಯಾಮ್ ಆಲ್ಟ್​ಮ್ಯಾನ್ ಸಲಹೆ ಕೇಳಿ


ನವದೆಹಲಿ, ಫೆಬ್ರುವರಿ 23: ಇವತ್ತು ಬೆಳೆಯುತ್ತಿರುವ ಪ್ರಪಂಚದಲ್ಲಿ ಹೊಸ ಹೊಸ ಆಲೋಚನೆಗಳು, ಬ್ಯುಸಿನೆಸ್ ಐಡಿಯಾಗಳು ನಿರಂತರವಾಗಿ ಇರುತ್ತವೆ. ಯಾರಿಗೋ ಬಂದ ಐಡಿಯಾವನ್ನು ಇನ್ಯಾರೋ ಸಮರ್ಪಕವಾಗಿ ಜಾರಿಗೆ ತಂದು ಯಶಸ್ವಿಯಾಗಿರುವ ಹಲವು ನಿದರ್ಶನಗಳಿವೆ. ಮೊದಲು ಐಡಿಯಾ ಹೊಂದಿದ್ದವರು ಅದನ್ನು ಜಾರಿಗೆ ತರಲು ವಿಫಲರಾಗಿದ್ದಾರೆ ನಿದರ್ಶನಗಳೂ ಬಹಳ ಇವೆ. ಓಪನ್ ಎಐ ಸಿಐಒ ಸ್ಯಾಮ್ ಆಲ್ಟ್ಮ್ಯಾನ್ (ಸ್ಯಾಮ್ ಆಲ್ಟ್ಮನ್) ಈ ವಿಚಾರದ ಬಗ್ಗೆ ಕಡ್ಡಿ ತುಂಡು ಮಾಡಿದಂತೆ ಮಾತನಾಡಿದ್ದಾರೆ. ನಿಮ್ಮಲ್ಲಿ ಐಡಿಯಾ ಇದೆಯಾ ಅನ್ನೋದು ಯಾರಿಗೂ ಬೇಕಾಗಿಲ್ಲ. ಐಡಿಯಾವನ್ನು ಹೇಗೆ ಜಾರಿಗೆ ತರುತ್ತೀರಿ ಎಂದು ಮುಖ್ಯ ಎಂದು ಚಾಟ್ಜಿಪಿಟಿ ರೂವಾರಿ ಹೇಳಿದ್ದಾರೆ.

‘ಹೊಸ ಐಡಿಯಾಗಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಾರೆ ಎಂದು ಭಾವಿಸುವವರು ಅನೇಕರಿದ್ದಾರೆ. ಮೂಲ ಯಾರದ್ದೇ ಇರಲಿ, ಅದನ್ನು ಸರಿಯಾಗಿ ಎಕ್ಸಿಕ್ಯೂಟ್ ಮಾಡುವುದು ಹೆಚ್ಚು ಮುಖ್ಯ. ನಿಮ್ಮ ಐಡಿಯಾ ಎಷ್ಟೇ ಗ್ರೇಟ್ ಆಗಿರಲಿ, ಯಾರಿಗೂ ಆಗಬೇಕಾದ್ದೇನಿಲ್ಲ’ ಎಂದು ಹಳೆಯ ವಿಡಿಯೋದಲ್ಲಿ ಸ್ಯಾಮ್ ಆಲ್ಟ್ ಮ್ಯಾನ್ ಹೇಳುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿ ಬೆಲೆಗಳು ಅತಿಯಾಗಿ ಏರಿದ್ದು ಯಾಕೆಂದು ಬಿಚ್ಚಿಟ್ಟ ನಿರ್ಮಲಾ ಸೀತಾರಾಮನ್

ಹೊಸ ಐಡಿಯಾ ಅನುಷ್ಠಾನಕ್ಕೆ ಏನು ಮಾಡಬೇಕು?

‘ನೀವು ಹೊಸ ಕಾನ್ಸೆಪ್ಟ್ನ ಪೂರ್ಣ ಯೋಜನೆಯನ್ನು ದೊಡ್ಡ ಕಂಪನಿಗೆ ನೇರವಾಗಿ ಕೊಟ್ಟು ನೋಡಿ. ಅವರು ಅದನ್ನು ಸರಿಯಾಗಿ ನಕಲು ಮಾಡುವ ಸಾಧ್ಯತೆ ಕಡಿಮೆ ಇರುತ್ತದೆ. ಏಕೆಂದರೆ, ಹೊಸ ಐಡಿಯಾವನ್ನು ಯಶಸ್ವಿಯಾಗಿ ಜಾರಿಗೆ ತರಲು ಗಮನ, ಛಲ ಮತ್ತು ಪ್ರಾಬ್ಲಮ್ ಸಾಲ್ವಿಂಗ್ ಚಾತುರ್ಯ’ ಎಂದು ಸ್ಯಾಮ್ ಆಲ್ಟ್‌ಮ್ಯಾನ್ ಹೇಳುತ್ತಾರೆ.

ರಹಸ್ಯವಾಗಿಡುವುದು ತಪ್ಪು

ಹೊಸ ಸ್ಟಾರ್ಟಪ್‌ಗಳು ತಮ್ಮ ಬ್ಯುಸಿನೆಸ್ ಐಡಿಯಾವನ್ನು ರಹಸ್ಯವಾಗಿ ಇಡುವುದನ್ನು ಸ್ಯಾಮ್ ಆಲ್ಟ್ ಮ್ಯಾನ್ ಅಲ್ಲಗಳೆಯುತ್ತಾರೆ. ‘ಸಂಸ್ಥಾಪಕರು ತಾವು ಏನು ನಿರ್ಮಿಸಿದರೆ ಮುಕ್ತವಾಗಿ ಹೇಳಬೇಕು. ಹಾಗಾದಾಗ ಉದ್ಯೋಗಿಗಳನ್ನು ಆಕರ್ಷಿಸಬಹುದು, ಹೂಡಿಕೆದಾರರನ್ನು ಸಮಾಧಾನಗೊಳಿಸಬಹುದು, ಗ್ರಾಹಕರನ್ನು ಪಡೆಯಬಹುದು. ಮತ್ತು ಉತ್ಪನ್ನದ ಗುಣಮಟ್ಟ ಸುಧಾರಿಸಲು ಬೇಕಾದ ಸಲಹೆ ಸೂಚನೆಗಳನ್ನು ಪಡೆಯಬಹುದು’ ಎಂದು ಓಪನ್‌ಎಐ ಸಿಐಒ ಸಲಹೆ.

ಇದನ್ನೂ ಓದಿ: ಐಡಿಎಫ್ಸಿ ಫಸ್ಟ್ ಬ್ಯಾಂಕ್‌ನಲ್ಲಿ ನೂರಾರು ಕೋಟಿ ರೂ ಲೂಟಿ; ಹೂಡಿಕೆದಾರರಿಗೆ 14,000 ಕೋಟಿ ರೂ ನಷ್ಟ; ಏನಿದು ಹಗರಣ?

ಕಂಪನಿಗಳು ತಮ್ಮ ಹೊಸ ಐಡಿಯಾವನ್ನು ಮುಚ್ಚಿಟ್ಟುಕೊಂಡರೆ ಪ್ರಯೋಜನವಿಲ್ಲ. ಬೇಕೆಂದರೆ, ಅದನ್ನು ಎಕ್ಸಿಕ್ಯೂಟ್ ಮಾಡುವ ಕಾರ್ಯವಿಧಾನಗಳ ವಿವರವನ್ನು ರಹಸ್ಯವಾಗಿಟ್ಟುಕೊಳ್ಳಬಹುದು ಎಂದೂ ಹೇಳಿದ ಸ್ಯಾಮ್ ಆಲ್ಟ್ ಮ್ಯಾನ್, ತಾನು ಹಿಂದೆ ಕೆಲಸ ಮಾಡುತ್ತಿರುವ ವೈ ಕಾಂಬಿನೇಟರ್ ಎಂಬ ಹೂಡಿಕೆ ಸಂಸ್ಥೆಯಲ್ಲಿನ ಅನುಭವಗಳನ್ನು ಮೆಲುಕು ಹಾಕಲಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *