ನವದೆಹಲಿ, ಫೆಬ್ರುವರಿ 22: ಭಾರತ ಸಾಕಷ್ಟು ಯುವ ಪ್ರತಿಭೆಗಳನ್ನು ಸೃಷ್ಟಿಸಿದೆ. ಆದರೆ, ಅವರು ಇತರರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಒಂದೇ ಒಂದು ಜಾಗತಿಕ ಮಟ್ಟದ ತಂತ್ರಜ್ಞಾನ ಭಾರತೀಯರು ಸೃಷ್ಟಿಸಲಿಲ್ಲ. 150 ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಇದು ನಾಚಿಕೆಗೇಡಿತನದ ಸಂಗತಿ. ಹೀಗಂದವರು ಕಾಂಗ್ರೆಸ್ ನ ವಿದೇಶೀ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (ಸ್ಯಾಮ್ ಪಿತ್ರೋಡಾ). ಯೂಟ್ಯೂಬ್ ವಾಹಿನಿಯೊಂದರಲ್ಲಿ ಸಂದರ್ಶನದಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.
‘ನಾವು ಬಹಳ ಯುವ ಪ್ರತಿಭೆಗಳನ್ನು ಸೃಷ್ಟಿಸಿದ್ದೇವೆ. ಆದರೆ ಅವರ ಎಲ್ಲಾ ಕಚ್ಚಾ ಪ್ರತಿಭೆಗಳು. ಬಹುರಾಷ್ಟ್ರೀಯ ಕಂಪನಿಗಳ ಪ್ರೋಗ್ರಾಮಿಂಗ್, ಬ್ಯಾಂಕಿಂಗ್, ಲೀಗಲ್ ಸಿಸ್ಟಂ, ಕೈಗಾರಿಕೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್ಗಳಿಗೆ ಈ ಪ್ರತಿಭೆಗಳಿಂದ ಸಹಾಯವಾಗಿದೆ’ ಎಂದು ಹಿರಿಯ ಕಾಂಗ್ರೆಸ್ಸಿಗರಾದ ಸ್ಯಾಮ್ ಅಭಿಪ್ರಾಯಪಟ್ಟಿದ್ದಾರೆ. ಆದಾಗ್ಯೂ, ಜಾಗತಿಕ ಮಟ್ಟದ ತಂತ್ರಜ್ಞಾನ ಸೃಷ್ಟಿಸಲು ಭಾರತೀಯರು ವಿಫಲರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ನೀವೀಗಾಗಲೇ ಬೆತ್ತಲಾಗಿದ್ದಿರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್ ಗೆ ಪ್ರಧಾನಿ ಮೋದಿ ತರಾಟೆಗೆ
‘ನಮ್ಮದೇ ಸ್ವಂತ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ನಿರ್ಮಿಸಲಿಲ್ಲ. ಮೈಕ್ರೋಸಾಫ್ಟ್ನಂತಹ ದೊಡ್ಡ ಕಂಪನಿಯನ್ನೂ ಹುಟ್ಟುಹಾಕಲಿಲ್ಲ. ನಮ್ಮದೇ ಸ್ವಂತ ಆಪರೇಟಿಂಗ್ ಸಿಸ್ಟಂ ಕಟ್ಟಲಿಲ್ಲ. 150 ಕೋಟಿ ಜನ ಸಂಖ್ಯೆ ಇರುವ ದೇಶಕ್ಕೆ ಅದರದ್ದೇ ಸ್ವಂತ ಆಪರೇಟಿಂಗ್ ಸಿಸ್ಟಂ ಇಲ್ಲ ನಾಚಿಕೆಗೇಡಿತನದ ಸಂಗತಿ. ಮೊಬೈಲ್ ಫೋನ್‌ಗಳಿಗೆ ಒಂದು ಆಪರೇಟಿಂಗ್ ಸಿಸ್ಟಂ ನಿರ್ಮಿಸಲು ನಮ್ಮಿಂದ ಆಗಿಲ್ಲ. ನಮ್ಮ ಪ್ರತಿಭೆಯನ್ನು ಬೇರೆಯವರಿಗೆ ಸಲ್ಲಿಸಲು ಬಳಸಬೇಕು’ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ ಈ ಅಭಿಪ್ರಾಯಗಳು ವಿವಾದಕ್ಕೆ ಗ್ರಾಸವಾಗಿದೆ. ಬಿಜೆಪಿ ಪಕ್ಷ ಅವರ ಅನಿಸಿಕೆಯನ್ನು ಟೀಕಿಸಿದೆ. ಸ್ಯಾಮ್ ಪಿತ್ರೋಡಾ ಅವರನ್ನು ಲಷ್ಕರೆ ಕಾಂಗ್ರೆಸ್‌ನವರ ಸಲಹೆ ಎಂದು ವ್ಯಂಗ್ಯ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು ಭಾರತೀಯರು ಸ್ಥಾಪಿಸಿದ ಆಪರೇಟಿಂಗ್ ಸಿಸ್ಟಂಗಳ ಪಟ್ಟಿಯನ್ನೇ ನೀಡಿ ಸ್ಯಾಮ್ ಪಿತ್ರೋಡಾ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತದ ಅತಿವೇಗದ ಮೆಟ್ರೋ ಮತ್ತು ನಮೋ ಭಾರತ್ ಕಾರಿಡಾರ್ ಉದ್ಘಾಟಿಸಿದ ಪಿಎಂ ಮೋದಿ
ಬಾಸ್ ಲಿನಕ್ಸ್, ಮಾಯಾ ಆಪರೇಟಿಂಗ್ ಸಿಸ್ಟಂ, ಪ್ರೈಮ್ ಓಎಸ್, ಭಾರತ್ ಓಎಸ್, ನೆಕ್ಸ್ಟ್ ಕ್ವಾಂಟಂ ಓಎಸ್ ಇತ್ಯಾದಿ ಆಪರೇಟಿಂಗ್ ಸಿಸ್ಟಂಗಳು ಭಾರತೀಯರಿಂದ ಅಭಿವೃದ್ಧಿಗೊಂಡಿವೆ ಎಂದು ಪಟ್ಟಿ ಮಾಡಿದ ಬಿಜೆಪಿ ವಕ್ತಾರರು, ಯುಪಿಐ ಡಿಜಿಟಲ್ ಪೇಮೆಂಟ್ ಸಿಸ್ಟಂ, ವ್ಯಾಕ್ಸಿನ್ ತಯಾರಿಕೆ, ದೇಶದ ಆರ್ಥಿಕ ಇತ್ಯಾದಿ ಅಭಿವೃದ್ಧಿ ಸಾಧನೆಗಳನ್ನು ಉಲ್ಲೇಖಿಸಲಾಗಿದೆ.
ಸ್ಯಾಮ್ ಪಿತ್ರೋಡಾ ಈ ಹಿಂದೆ ಹಲವು ಬಾರಿ ವಿವಾದಾಸ್ಪದ ಹೇಳಿಕೆಗಳು ಮತ್ತು ಅಭಿಪ್ರಾಯಗಳನ್ನು ನೀಡುತ್ತಿರುವುದು. ಪಾಕಿಸ್ತಾನ ಸೇರಿದಂತೆ ದೇಶಕ್ಕೆ ಸಂಬಂಧ ಗಟ್ಟಿಗೊಳಿಸುವ ವಿದೇಶ ನೀತಿ ಭಾರತದ್ದಕ್ಕಾಗಿ ಎಂದೊಮ್ಮೆ ಹೇಳಿದ್ದರು. ಪಾಕಿಸ್ತಾನಕ್ಕೆ ಹೋದಾಗ ಸ್ವಂತ ದೇಶದಲ್ಲಿದ್ದಂತೆ ಭಾಸವಾಗುತ್ತದೆ. ಬಾಂಗ್ಲಾದೇಶ, ನೇಪಾಳಕ್ಕೂ ಹೋಗಿದ್ದೇನೆ. ಬೇರೆ ದೇಶ ಎಂದನಿಸುವುದಿಲ್ಲ ಎಂದೂ ಅವರು ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ