Headlines

ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರ ಬಗ್ಗೆ ನಟಿ ಸಮಂತಾ ಮಾತು

ಗ್ಲಾಮರಸ್ ಪಾತ್ರಗಳಲ್ಲಿ ನಟಿಸಿದ್ದರ ಬಗ್ಗೆ ನಟಿ ಸಮಂತಾ ಮಾತು


ಸಮಂತಾ ಋತ್ ಪ್ರಭು (Samantha Ruth Prabhu) ದಕ್ಷಿಣ ಭಾರತದ ಬಲು ಜನಪ್ರಿಯ ನಟಿ. ತಮಿಳು, ತೆಲುಗಿನ ಹಲವಾರು ಸಿನಿಮಾಗಳಲ್ಲಿ ಸಮಂತಾ ನಟಿಸಿದ್ದಾರೆ. ಜೂ ಎನ್ ಟಿಆರ್, ಅಲ್ಲು ಅರ್ಜುನ್, ವಿಜಯ್ ಇನ್ನೂ ಹಲವಾರು ಮಂದಿ ಸ್ಟಾರ್ ನಟರುಗಳೊಂದಿಗೆ ಸಮಂತಾ ನಟಿಸಿದ್ದು, ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕೆಲವು ನೆನಪುಳಿವ ಪಾತ್ರಗಳಲ್ಲಿ ಸಮಂತಾ ಕಾಣಿಸಿಕೊಂಡಿದ್ದಾರೆ. ಸಮಂತಾ ಚಿತ್ರರಂಗಕ್ಕೆ ಕಾಲಿರಿಸಿ 15 ವರ್ಷ ಚೆನ್ನಾಗಿದೆ. ಇತ್ತೀಚೆಗೆ ಸಮಂತಾ ತಮ್ಮ ಹಳೆಯ ಸಿನಿಮಾಗಳ ಬಗ್ಗೆ ಮಾತನಾಡಿದ್ದು, ಅವರನ್ನು ನೋಡಿದರೆ ‘ನನ್ನ ಬಗ್ಗೆ ನನಗೆ ಬೇಸರವಾಗುತ್ತದೆ, ಮುಜುಗರಕ್ಕಾಗಿ’ ಇದೆ.

ಚಿತ್ರರಂಗಕ್ಕೆ ಕಾಲಿಟ್ಟಾಗ ಕೆಲವು ಗ್ಲಾಮರಸ್ ಪಾತ್ರಗಳಲ್ಲಿ ನಾನು ನಟಿಸಿದ್ದೇನೆ. ಅದು ನನಗೆ ಆಗಲೇ ಮುಜುಗರ ತಂದಿದ್ದವು. ಆ ಗ್ಲಾಮರಸ್ ಪಾತ್ರಗಳನ್ನು ಅವಕಾಶಕ್ಕಾಗಿ ಒಪ್ಪಿಕೊಂಡೆ ಅಷ್ಟೆ, ನಟಿಸಲು ಸಹ ನಾನು ಕಷ್ಟಪಟ್ಟಿದ್ದೆ. ಅವು ನಿಜವಾಗಿಯೂ ನನ್ನಂತೆ ಇಲ್ಲ. ನಾನು ಆ ಪಾತ್ರಗಳಂತೆ ಇರಲಿಲ್ಲ. ಆ ಪಾತ್ರಗಳಿಗೆ ಜೀವ ತುಂಬಲು ನಾನು ಬಹಳ ಶ್ರಮಪಟ್ಟಿದ್ದರೂ ಸಾಧ್ಯವಾಗಿಲ್ಲ. ಈಗ ನೋಡಿದರೆ ನನಗೆ ಬೇಸರವಾಗುತ್ತದೆ, ಮುಜುಗರವಾಗುತ್ತದೆ’ ನಟಿ.

‘ಹದಿನೈದು ವರ್ಷ ಕಡಿಮೆ ಸಮಯವಲ್ಲ. ಈ ಕೆಲವು ಹದಿನೈದು ವರ್ಷಗಳ ಸಮಯದಲ್ಲಿ ಘಟನೆಗಳು ಜೀವನಪರ್ಯಂತ ಉಳಿಯುವ ಘಟನೆ, ಇನ್ನು ಕೆಲವು ಮಸುಕು-ಮಸುಕಾಗಿವೆ. ನನ್ನ ಕೆಲವು ಸಿನಿಮಾಗಳಿವೆ, ನೋಡಿದರೆ ನನಗೆ ನಾಚಿಕೆ ಆಗುತ್ತದೆ, ಎಷ್ಟು ಕೆಟ್ಟದಾಗಿ ನಟಿಸಿದ್ದೇನೆ ಎನಿಸುತ್ತದೆ. ಆದರೆ ಏನೂ ಮಾಡಲಾಗುವುದಿಲ್ಲ, ಅದು ಕಲಿಕೆಯ ದಾರಿ, ತಪ್ಪು ಮಾಡಿಯೇ ಕಲಿಯಬೇಕು’ ಎಂದು ಸಮಂತಾ.

ಇದನ್ನೂ ಓದಿ:ಬಾಯ್ ಫ್ರೆಂಡ್ ಕುಟುಂಬದ ಜೊತೆಗೆ ದೀಪಾವಳಿ ಆಚರಿಸಿದ ಸಮಂತಾ

ಸಮಂತಾ, 2010 ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ ‘ಏ ಮಾಯ ಚೇಸಾವೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಆ ನಂತರ ಸಮಂತಾ ನಿಂತಿದ್ದೇ ಇಲ್ಲ. ತಮಿಳು ಮತ್ತು ತೆಲುಗು ಚಿತ್ರರಂಗದ ಟಾಪ್ ನಟಿಯಾಗಿ ಮೆರೆದರು. ನಾಗ ಚೈತನ್ಯ ಜೊತೆಗೆ ಮದುವೆ ಆದರು ಆದರೆ ಕೆಲವು ವರ್ಷಗಳ ಹಿಂದಷ್ಟೆ ವಿಚ್ಛೇದನ ಹೊಂದಿದ್ದರು. ಇದೀಗ ರಾಜ್ ನಿಧಿಮೋರು ಜೊತೆ ಸುತ್ತಾಡುತ್ತಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ಸಹ ಪ್ರಾರಂಭಿಸಿದ್ದಾರೆ. ಆದರೆ ಸಮಂತಾ ಕೈಯಲ್ಲಿ ಈಗ ಸಿನಿಮಾಗಳಿಲ್ಲ. ಅವರ ಬೇಡಿಕೆ ಬಹುವಾಗಿ ಕುಸಿದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 3:25 pm, ಮಂಗಳವಾರ, 28 ಅಕ್ಟೋಬರ್ 25



Source link

Leave a Reply

Your email address will not be published. Required fields are marked *