![]()
ಡಾ.ಶಿವರಾಜ್ ಕುಮಾರ್ ಅವರು ಅದ್ಭುತ ನಟ ಮಾತ್ರವಲ್ಲದೆ, ಒಳ್ಳೆಯ ಡ್ಯಾನ್ಸರ್ ಆಗಿದ್ದು, ತಮ್ಮದೇ ಆದ ಸ್ಟೈಲ್‌ಗೆ ಜನಪ್ರಿಯ. ಇವರ ಅನುಭವ, ಜ್ಞಾನ ಸ್ಪರ್ಧಿಗಳಿಗೆ ಉತ್ತೇಜನ ನೀಡಲಿದೆ. ನಟಿ ಮಾತ್ರವಲ್ಲದೆ, ಶಾಸ್ತ್ರೀಯ ನೃತ್ಯಗಾರ್ತಿಯೂ ಆಗಿರುವ ರಚಿತಾರಾಮ್ ಅವರು ಸಹ ಬಹುಮುಖ ಪ್ರತಿಭೆ. ರಾಷ್ಟ್ರಪ್ರಶಸ್ತಿ ವಿಜೇತ ವಿಜಯ ರಾಘವೇಂದ್ರ ಅವರ ನಟನೆ, ಸಂಗೀತ ಪ್ಲಸ್ ಡಾನ್ಸ್ ಬಗೆಗಿನ ಜ್ಞಾನ, ಅರ್ಜುನ್ ಜನ್ಯ ಅವರಿಗಿರುವ ಸಂಗೀತದ ಅರಿವಿನಿಂದಾಗಿ ಈ ಶೋ ಹೆಚ್ಚು ಸದ್ದು ಮಾಡುತ್ತಿದೆ.