1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ

1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ

1988ರಲ್ಲಿ ಮಿಸ್ ಆದ ಕ್ಷಣವನ್ನು ಸೆರೆ ಹಿಡಿದುಕೊಂಡ ಸುಧಾರಾಣಿ; ಆಮೀರ್ ಖಾನ್ ಜೊತೆ ಫೋಟೋ

ನಟಿ ಸುಧಾರಾಣಿ ಅವರು ನಟ ಆಮೀರ್ ಖಾನ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 1988ರಲ್ಲಿ ‘ಖಯಾಮತ್ ಸೇ ಖಯಾಮತ್ ತಕ್’ ಚಿತ್ರೀಕರಣದ ವೇಳೆ ಮೊದಲ ಬಾರಿಗೆ ಭೇಟಿಯಾಗಿದ್ದರೂ ಫೋಟೋ ತೆಗೆಸಿಕೊಳ್ಳಲು ಸಾಧ್ಯವಾಗಿರಲಿಲ್ಲ.

ನಟಿ ಸುಧಾರಾಣಿ ಸೋಶಿಯಲ್ ಮೀಡಿಯಾದಲ್ಲಿ ನಟ ಆಮೀರ್ ಖಾನ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಜೊತೆಗೆ ಕೆಲ ವಿಷಯವನ್ನು ಸಹ ನಟಿ ಸುಧಾರಾಣಿ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು, ನೀವು ಹಿಂದಿ ಸಿನಿಮಾಗಳಲ್ಲಿ ನಟಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕಲಾವಿದರು ಸಭೆ, ಸಮಾರಂಭಗಳಲ್ಲಿ ಆಗಾಗ್ಗೆ ಭೇಟಿಯಾಗುತ್ತಿರುತ್ತಾರೆ. ಹಾಗೆಯೇ ಕೆಲವೊಮ್ಮೆ ಶೂಟಿಂಗ್ ಸ್ಥಳಗಳಲ್ಲಿಯೂ ಕಲಾವಿದರು ಆಕಸ್ಮಿಕವಾಗಿ ಭೇಟಿಯಾಗುತ್ತಾರೆ. ಇಂದು ಯಾರೇ ಭೇಟಿಯಾದರೂ ಅವರೊಂದಿಗೆ ಚೆಂದದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಈ ಹಿಂದೆ ಭೇಟಿಯ ನೆನಪುಗಳು ಮಾತ್ರ ಇರುತ್ತಿದ್ದವು. ಈ ಹಿಂದೆ ಮಿಸ್ ಮಾಡಿಕೊಂಡಿದ್ದ ಸುಂದರ ಕ್ಷಣವನ್ನು ಸುಧಾರಾಣಿ ಈ ಬಾರಿ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

1988ರಲ್ಲಿ ಬಿಡುಗಡೆಯಾದ ಖಯಾಮತ್ ಸೇ ಖಯಾಮತ್ ತಕ್ (Qayamat Se Qayamat Tak) ಸಿನಿಮಾದ ಚಿತ್ರೀಕರಣ ವೇಳೆ ಆಮೀರ್ ಖಾನ್ ಅವರನ್ನು ಸುಧಾರಾಣಿ ಭೇಟಿಯಾಗಿದ್ದರು. ಆದರೆ ಅಂದು ಎಲ್ಲರ ಬಳಿಯಲ್ಲಿಯೂ ಕ್ಯಾಮೆರಾ ಇರಲಿಲ್ಲ. ಕ್ಯಾಮೆರಾ ಅನ್ನೋದು ಐಷಾರಾಮಿ ಜೀವನದ ಒಂದು ಭಾಗವಾಗಿತ್ತು. ಅಂದು ನಟಿಯಾಗಿದ್ದರೂ ಸುಧಾರಾಣಿ ಬಳಿಯಲ್ಲಿ ಸ್ವಂತ ಕ್ಯಾಮೆರಾ ಇರಲಿಲ್ಲ.

ಖಯಾಮತ್ ಸೇ ಖಯಾಮತ್ ತಕ್ ಚಿತ್ರೀಕರಣ ವೇಳೆ ಚೆನ್ನೈನಲ್ಲಿ ಭೇಟಿಯಾಗಿದ್ರೂ ಆಮೀರ್ ಖಾನ್ ಜೊತೆ ಸುಧಾರಾಣಿ ಅವರಿಗೆ ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದ್ರೆ ಇದೀಗ ಮತ್ತೊಮ್ಮೆ ಅಮೀರ್ ಖಾನ್ ಅವರನ್ನು ವಿಮಾನ ಪ್ರಯಾಣದ ವೇಳೆ ಸುಧಾರಾಣಿ ಭೇಟಿಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸುಧಾರಾಣಿ ಬಂದ ಬಳಿಕ 60 ಕೋಟಿ ಲಾಭ ಮಾಡಿದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ: ರೈತರಿಗೆ ಭರ್ಜರಿ ಯುಗಾದಿ ಬೋನಸ್‌!

ಇಂದು ದಿನಗಳು ಬದಲಾಗಿದ್ದು, ಇಂದು ಮತ್ತೆ ಆಮೀರ್ ಖಾನ್ ಅವರನ್ನು ಭೇಟಿಯಾದೆ. ಈ ಬಾರಿ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳೋದನ್ನು ಮಿಸ್ ಮಾಡಿಕೊಳ್ಳಲು ಸಾಧ್ಯವೇ ಇರಲಿಲ್ಲ ಎಂದು ಖುಷಿಯಿಂದ ಸುಧಾರಾಣಿ ಬರೆದುಕೊಂಡಿದ್ದಾರೆ. ಸದ್ಯ ಆಮೀರ್ ಖಾನ್ ಜೊತೆಗಿನ ಸುಧಾರಾಣಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಇದನ್ನೂ  ಓದಿ: ಶಿವಣ್ಣ ಜೊತೆ ಮದುವೆಯಾಗುವ ಆಸೆ… ಫೇಕ್ ಸುದ್ದಿಗಳಿಗೆ ಮೀಮ್ಸ್ ಮೂಲಕ ಬಿಸಿ ಮುಟ್ಟಿಸಿದ ಸುಧಾರಾಣಿ

Source link

Leave a Reply

Your email address will not be published. Required fields are marked *