Sandalwood Films: ಇತ್ತೀಚಿನ ದಿನಗಳಲ್ಲಿ ಒಂದು ಕನ್ನಡ ಸಿನಿಮಾ 50 ಅಥವಾ 100 ದಿನ ಓಡೋದೆ ಹೆಚ್ಚು. ಹಾಗಿರೋವಾಗ ಕನ್ನಡ ಈ ಸಿನಿಮಾಗಳು ವರ್ಷಕ್ಕೂ ಅಧಿಕ ಸಮಯ ಓಡಿ ದಾಖಲೆ ನಿರ್ಮಿಸಿದ್ದವು. ಅಂರಹ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಇಲ್ಲಿದೆ. ಈ ಸಿನಿಮಾಗಳನ್ನು ನೀವು ನೋಡಲೇಬೇಕು.

ಕನ್ನಡ ಸಿನಿಮಾಗಳು ಓಡೋದೆ ಇಲ್ಲ ಅಂತ ಈಗ ಜನ ಹೇಳ್ತಿದ್ದಾರೆ, ಅದು ನಿಜಾ ಕೂಡ. ಇತ್ತೀಚಿನ ದಿನಗಳಲ್ಲಿ ಸಿನಿಮಾ 50 ಅಥವಾ 100 ದಿನ ಓಡಿದ್ರೇನೆ ಅದು ಸಾಧನೆ. ಆದರೆ ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳು ವರ್ಷಕ್ಕೂ ಅಧಿಕ ಸಮಯ ಥಿಯೇಟರ್‌ನಲ್ಲಿ ಓಡಿ ದಾಖಲೆ ನಿರ್ಮಿಸಿದ್ದವು. ಅಂತಹ ಸಿನಿಮಾಗಳು ಯಾವುವು ನೋಡೋಣ.

1972ರಲ್ಲಿ ಬಿಡುಗಡೆಯಾದ ಡಾ. ರಾಜಕುಮಾರ್ ಮತ್ತು ಭಾರತಿ ವಿಷ್ಣುವರ್ಧನ್ ನಟಿಸಿರುವ ‘ಬಂಗಾರದ ಮನುಷ್ಯ’ ಸಿನಿಮಾ ಬರೋಬ್ಬರಿ 728 ದಿನ ಪ್ರದರ್ಶನ ಕಂಡಿತ್ತು. ಈ ಸಿನಿಮಾ ಹಲವಾರು ಯುವ ಜನರಿಗೆ ಸಿಟಿ ಬಿಟ್ಟು ಮತ್ತೆ ಗ್ರಾಮಕ್ಕೆ ತೆರಳಿ ಕೃಷಿ ಮಾಡುವ ಪ್ರೇರಣೆಯನ್ನು ಸಹ ನೀಡಿತ್ತು.

ಪ್ರೀತಿ ಅಂದ್ರೆ ಕೇವಲ ರೊಮ್ಯಾನ್ಸ್, ಕೊನೆಗೆ ಹ್ಯಾಪಿ ಎಂಡಿಂಗ್ ಎನ್ನುತ್ತಿದ್ದ ಕಾಲದಲ್ಲಿ, ಯೋಗರಾಜ್ ಭಟ್ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ನಟಿಸಿದ ‘ಮುಂಗಾರು ಮಳೆ’ ಸ್ಯಾಡ್ ಎಂಡಿಂಗ್ ಮೂಲಕ ವೀಕ್ಷಕರ ಮನ ಗೆದ್ದಿತು. ಈ ಸಿನಿಮಾ ಬರೋಬ್ಬರಿ 700 ದಿನಗಳ ಕಾಲ ಥಿಯೇಟರ್ ನಲ್ಲಿ ಓಡಿತ್ತು.

ಕಸ್ತೂರಿ ನಿವಾಸ 1971 ರಲ್ಲಿ ಬಿಡುಗಡೆಯಾದ ಡಾ. ರಾಜಕುಮಾರ್ ಅವರ ಚಲನಚಿತ್ರವಾಗಿದ್ದು, ನಿರ್ದೇಶಕ ಜೋಡಿಯಾದ ದೊರೈ-ಭಗವಾನ್ ಬರೆದು ನಿರ್ದೇಶಿಸಿದ್ದಾರೆ. ಈ ಟ್ರಾಜಿಡಿ ಸಿನಿಮಾ 660 ದಿನ ಥಿಯೇಟರ್ ನಲ್ಲಿ ಪ್ರದರ್ಶನ ಕಂಡಿತ್ತು.

ಅಣ್ಣಾವ್ರ ಮತ್ತೊಂದು ಸಿನಿಮಾ ‘ಶಂಕರ್ ಗುರು’ ಸಹ ಈ ಲಿಸ್ಟ್ ನಲ್ಲಿದೆ. ಅಣ್ಣಾವ್ರ ಜೊತೆ ಪದ್ಮಪ್ರಿಯ ನಟಿಸಿದ ವಿ. ಸೋಮಶೇಖರ್ ನಿರ್ದೇಶನ ಮಾಡಿದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾವನ್ನು ಜನ ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಈ ಚಿತ್ರ 520 ದಿನ ಓಡಿ ದಾಖಲೆ ನಿರ್ಮಿಸಿತ್ತು.

ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಆಕ್ಷನ್ ಕಿಂಗ್ ಆಗಿ ನೋಡಿದ್ದ ಜನರಿಗೆ ಹೊಸತನದ ಔತಣ ಬಡಿಸಿದ ಸಿನಿಮಾ ‘ಬಂಧನ’. ವಿಷ್ಣು ಜೊತೆ ಸುಹಾಸಿನಿ ಮತ್ತು ಜೈ ಜಗದೀಶ್ ಕೂಡ ನಟಿಸಿದ್ದರು. ಕಣ್ಣಂಚನ್ನು ಒದ್ದೆ ಮಾಡಿದ್ದ ಈ ಟ್ರಾಜಿಡಿ ಸಿನಿಮಾ 469 ದಿನ ಪ್ರದರ್ಶನ ಕಂಡಿತ್ತು.

ವಿಷ್ಣುವರ್ಧನ್ ಅವರ ಮತ್ತೊಂದು ಸಿನಿಮಾ ಯಜಮಾನ ಸಹ 390 ದಿನ ಓಡಿತ್ತು. ತಮಿಳಿನ ರಿಮೇಕ್ ಆದರೂ ಸಹ ಕನ್ನಡಿಗರು ಈ ಚಿತ್ರವನ್ನು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ಈ ಫ್ಯಾಮಿಲಿ ಡ್ರಾಮವನ್ನು ವರ್ಷಗಳ ಕಾಲ ಜನ ಥಿಯೇಟರ್ ನಲ್ಲಿ ನೋಡಿ ಎಂಜಾಯ್ ಮಾಡಿದ್ದರು.

ಉಪೇಂದ್ರ ನಿರ್ದೇಶನ ಮಾಡಿರುವ ಲವರ್ ಬಾಯ್ ಆಗಿದ್ದ ಶಿವಣ್ಣನ ಕೈಯಲ್ಲಿ ಮಚ್ಚನ್ನು ಹಿಡಿಸಿದ ಸಿನಿಮಾ ‘ಓಂ’. ಈ ಅಂಡರ್ ವರ್ಲ್ಡ್ ಕಥೆ ಆ ಕಾಲದಲ್ಲಿ ಹೊಸ ಕ್ರೇಜ್ ಸೃಷ್ಟಿಸಿತ್ತು. ಈ ಚಿತ್ರ ಚಿತ್ರಮಂದಿರದಲ್ಲಿ 380 ದಿನ ಓಡಿತ್ತು.

ಇನ್ನು ದರ್ಶನ್ ತೂಗುದೀಪ್ ನಟಿಸಿದ್ದ ‘ಕರಿಯ’ ಸಿನಿಮಾ ಒಂದು ವರ್ಷಗಳ ಕಾಲ ಅಂದರೆ 365 ದಿನ ಪ್ರದರ್ಶನ ಕಂಡರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ‘ಮಿಲನ’ ಸಿನಿಮಾ 350 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತ್ತು.

Source link
ಅತಿ ಹೆಚ್ಚು ದಿನ ಥಿಯೇಟರ್‌ನಲ್ಲಿ ಓಡಿ ಇತಿಹಾಸ ನಿರ್ಮಿಸಿದ ಕನ್ನಡ ಸಿನಿಮಾಗಳು