Headlines

‘ನಾನು ಸಾವಿಗಾಗಿ ಕೋರಿದೆ’; ಡಾರ್ಲಿಂಗ್ ಕೃಷ್ಣ ಸಿನಿಮಾ ನಟಿಯ ತಿಹಾರ್ ಜೈಲು ಅನುಭವ

‘ನಾನು ಸಾವಿಗಾಗಿ ಕೋರಿದೆ’; ಡಾರ್ಲಿಂಗ್ ಕೃಷ್ಣ ಸಿನಿಮಾ ನಟಿಯ ತಿಹಾರ್ ಜೈಲು ಅನುಭವ


ನಟಿ ಹಾಗೂ ಸೋಶಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಂದೀಪಾ ವಿರ್ಕ್ ಅವರು ಇತ್ತೀಚೆಗೆ ನಾಲ್ಕು ತಿಂಗಳ ತಿಹಾರ್ ಜೈಲಿನಲ್ಲಿ ಕಳೆದು ಬಂದಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಅವರಿಗೆ ಸಾಕಷ್ಟು ತೊಂದರೆಯಾಗಿದೆ. ದೆಹಲಿಯಲ್ಲಿ 2025ರ ಡಿಸೆಂಬರ್ ಅಲ್ಲಿ ಜಾಮೀನು ನೀಡಿತು. ಈಗ ಅವರು ತಿಹಾರ್ ಜೈಲಿನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.

‘ನನ್ನ ಶತ್ರುವಿಗೂ ತಿಹಾರ್ ಜೈಲಿಗೆ ಹೋಗಲಿ ಎಂದು ನಾನು ಬಯಸುವುದಿಲ್ಲ. ನಾನು ಮೊದಲ ಬಾರಿಗೆ ಅಲ್ಲಿಗೆ ಹೋದಾಗ, ನಾನು ಈ ಸ್ಥಳಕ್ಕೆ ಅರ್ಹನಲ್ಲ ಎಂದು ಹೇಳಿಕೊಂಡೆ. ಜೀವನದಲ್ಲಿ ಏನಾದರೂ ಸಂಭವಿಸಿದರೆ ಕರ್ಮ ಎನ್ನುತ್ತಾರೆ. ಬಹುಶಃ ನಾನು ಹಿಂದಿನ ಜನ್ಮದಲ್ಲಿ ತಿಳಿದಿದ್ದೇನೆ ಅಥವಾ ತಿಳಿಯದೆಯೋ ಕೆಲವು ತಪ್ಪುಗಳನ್ನು ಮಾಡಿರಬಹುದು. ಅದಕ್ಕೆ ಹೀಗೆ ಆಗುತ್ತಿದೆ ಎಂದು ಮೊದಲ ದಿನ ನಾನು ಶೌಚಾಲಯಕ್ಕೆ ಹೋದಾಗ ನನಗೆ ಅನಿಸಿತು’ ಎಂದು ಅವರು ಹೇಳಿದರು.

‘ಸಾವು ಬಂದು ನನ್ನನ್ನು ಕರೆದುಕೊಂಡು ಹೋಗಲಿ ಎಂದು ನಾನು ಪ್ರಾರ್ಥಿಸುತ್ತಿದ್ದೆ. ನಾನು ಜೈಲಿನಲ್ಲಿರುವಾಗ ಪಾಲಕರು ನಮ್ಮನ್ನು ನೋಡಲು ಬರೋದು ನಿಜಕ್ಕೂ ಕೆಟ್ಟ ಭಾವನೆ . ನನ್ನಿಂದಾಗಿ ಅವರು ಅಲ್ಲಿಗೆ ಬರಬೇಕಾಗಿ ಬಂದಿದ್ದಕ್ಕಾಗಿ ನಾನು ಅವರಲ್ಲಿ ಕ್ಷಮೆಯಾಚಿಸಿದೆ. ನಾನು ಹೇಗೆ ಎಂದು ಅವರಿಗೆ ತಿಳಿದಿರಲಿಲ್ಲ ಮತ್ತು ಒಡಹುಟ್ಟಿದವರು ನನ್ನ ಬೆಂಬಲಕ್ಕೆ ನಿಂತರು’ ಎಂದು ಅವರು ಹೇಳಿದರು.

ಸೆರೆವಾಸದ ಸಮಯದಲ್ಲಿ ಎದುರಿಸಿದ ದೈಹಿಕ ಮತ್ತು ಮಾನಸಿಕ ಒತ್ತಡದ ಬಗ್ಗೆ ಅವರು ವಿವರಿಸಿದರು. ‘ತಿಹಾರ್ ಜೈಲಿನ ಒಳಗೆ 500 ಜನರೊಂದಿಗೆ ವಾಸಿಸುವುದು ಎಷ್ಟು ಕಷ್ಟ ಎಂದು ಕೇಳಿದೆ. ಅದು ದೇಶದ ಒಳಗಿನ ರಾಜಕೀಯದಂತೆ. ನನ್ನ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ಒತ್ತಡದಿಂದಾಗಿ ನಾನು ಸೊರಗಿಹೋದೆ. ಮತ್ತೊಬ್ಬರ ಸಹಾಯವಿಲ್ಲದೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ. ನಾನು ಅದರ ಬಗ್ಗೆ ಯೋಚಿಸಿದಾಗ, ನಾನು ಅಳುತ್ತೇನೆ’ ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

ಲೋಕಲ್ ಟ್ರೇನ್ ಹೆಸರಿನ ಸಿನಿಮಾ 2022ರಲ್ಲಿ ಬಂತು. ಡಾರ್ಲಿಂಗ್ ಕೃಷ್ಣ ಇದಕ್ಕೆ ಹೀರೋ. ಈ ಚಿತ್ರದಲ್ಲಿ ಸಂದೀಪಾ ನಟಿಸಿದ್ದರು. ‘ಅಂಬಾಸಿಡರ್’ ಹೆಸರಿನ ಕನ್ನಡ ಸಿನಿಮಾದಲ್ಲಿಯೂ ಅವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *