ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಭಾಗವಹಿಸಿದ್ದರು. ಈ ಸೀಸನ್ ಬಳಿಕ ಅವರು ಸಿಂಹಿಣಿ ಎಂದೆಂದಿಗೂ ಫೇಮಸ್ ಆದರು. ಇದಾದ ಬಳಿಕ ಅವರು ಒಪ್ಪಿಕೊಂಡರು ಮೊದಲ ಸಿನಿಮಾ ಸೆಟ್ಟೇರಿದೆ.
ಸಂಗೀತಾ ಶೃಂಗೇರಿ ಅವರು ಬಿಗ್ ಬಾಸ್ ನಿಂದ ಹೊರ ಬಂದ ಬಳಿಕ ‘ಮಾರಿಗೋಲ್ಡ್’ ಸಿನಿಮಾ ರಿಲೀಸ್ ಆಯಿತು. ಆದರೆ, ಈ ಚಿತ್ರ ಬಿಗ್ ಬಾಸ್ ಗೂ ಮೊದಲು ಶೂಟ್ ಆಗಿದೆ. ಈಗ ಹೊಸ ಸಿನಿಮಾ ಒಪ್ಪಿರೋದು ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ.
‘ಪದ್ಮನಾಭ ಆಯಂಡ್ ಫ್ಯಾಮಿಲಿ’ ಹೆಸರಿನ ಹೊಸ ಸಿನಿಮಾ ಸೆಟ್ಟೇರಿದೆ. ಇಸ್ಮಾಯಿಲ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ತುಳು ಹಾಗೂ ಕನ್ನಡ ಚಿತ್ರರಂಗದಲ್ಲಿ ಅವರು ಆ್ಯಕ್ಟೀವ್ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ.
ಸದಾಶಿವ ಶೆಟ್ಟಿ ಅವರು ‘ಪದ್ಮನಾಭ ಆಯಂಡ್ ಫ್ಯಾಮಿಲಿ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹುಟ್ಟುಹಾಕಿದೆ. ಬಿಗ್ ಬಾಸ್ ಬಳಿಕ ಒಪ್ಪಿದ ಮೊದಲ ಸಿನಿಮಾ ಇದಾಗಿದೆ.
ಸಂಗೀತಾ ಶೃಂಗೇರಿ ಅವರ ಕಿರುತೆರೆ ಮೂಲಕ ಗಮನ ಸೆಳೆದವರು. ಆ ಬಳಿಕ ಅವರು ಹಿರಿತೆರೆಗೆ ಕಾಲಿಟ್ಟರು. ಬಿಗ್ ಬಾಸ್ ಅವರಿಗೆ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತು.




