Headlines

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ; ಮುಂದೇನು?

‘ಶ್ರೀ ಗಂಧದ ಗುಡಿ’ ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ; ಮುಂದೇನು?


'ಶ್ರೀ ಗಂಧದ ಗುಡಿ' ಧಾರಾವಾಹಿಯಿಂದ ಹೊರ ನಡೆದ ಸಂಜನಾ ಬುರ್ಲಿ; ಮುಂದೇನು?

ಸಂಜನಾ ಬುರ್ಲಿ (ಸಂಜನಾ ಬುರ್ಲಿ) ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯನ್ನು ಅರ್ಧಕ್ಕೆ ತೊರೆದು ಶಾಕ್ ಕೊಟ್ಟಿದ್ದರು. ಆ ಬಳಿಕ ‘ಶ್ರೀ ಗಂಧದ ಗುಡಿ’ ಧಾರಾವಾಹಿಯ ಭಾಗವಾಗಿದ್ದರು. ಶಾಕಿಂಗ್ ವಿಷಯ ಏನೆಂದರೆ, ಈಗ ಅವರು ಈ ಸೀರಿಯಲ್ ನಿಂದಲೂ ಹೊರ ನಡೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ಧಾರಾವಾಹಿಯ ಕಥೆ ಏನು ಎಂಬ ಆತಂಕ ಮೂಡಿದ್ದು, ಅದಕ್ಕೆ ಉತ್ತರವೂ ಸಿಕ್ಕಿದೆ.

‘ಶ್ರೀ ಗಂಧದ ಗುಡಿ’ ಧಾರಾವಾಹಿ ತಮಿಳು ಸೀರಿಯಲ್ ನ ರಿಮೇಕ್. ಈ ಸೀರಿಯಲ್ ನಲ್ಲಿ ಶಿಶಿರ್, ಸಂಜನಾ ಮೊದಲಾದವರು ನಟಿಸಿದ್ದಾರೆ. ಈ ಸೀರಿಯಲ್ ವೀಕ್ಷಕರ ಮನ ಗೆದ್ದಿದೆ. ಒಳ್ಳೆಯ ಟಿಆರ್ ಪಿ ಪಡೆಯುತ್ತಲೂ ಇತ್ತು. ಆದರೆ, ಧಾರಾವಾಹಿಯಲ್ಲಿ ಈಗ ನಡೆದ ಹೊಸ ಬೆಳವಣಿಗೆಯಿಂದ ವೀಕ್ಷಕರು ಬೇಸರಗೊಂಡಿದ್ದಾರೆ.

ಸಂಜನಾ ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹ ಹೆಸರಿನ ಪಾತ್ರ ಮಾಡಿದರು. ಈ ಪಾತ್ರವನ್ನು ಸಂಜನಾ ಅರ್ಧಕ್ಕೆ ತೊರೆದರು. ಶಿಕ್ಷಣದ ಕಾರಣ ನೀಡಿ ಅವರು ಧಾರಾವಾಹಿ ಬಿಟ್ಟರು. ಈಗ ಸಂಜನಾ ಬುರ್ಲಿ ಅವರ ಮದುವೆಗೆ ಕಾರಣ ನೀಡಿ, ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದರು ಎಂದು ವರದಿಯಾಗಿದೆ. ಈ ಜಾಗಕ್ಕೆ ಹೊಸ ಪಾತ್ರಧಾರಿಯ ಆಯ್ಕೆ ಕೂಡ ಆಗಿದೆ.

ಸ್ನೇಹಾ ಮಂಜುನಾಥ್ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಜೀ ಪವರ್‌ನಲ್ಲಿ ಪ್ರಸಾರ ಕಾಣುತ್ತಿದ್ದ ‘ಶುಭಸ್ಯ ಶೀಘ್ರಂ’ ಸೀರಿಯಲ್‌ನಲ್ಲಿ ಸ್ನೇಹಾ ನಟಿಸಿದ್ದಾರೆ. ಈ ಧಾರಾವಾಹಿಗಳನ್ನು ನಿಲ್ಲಿಸಲಾಗಿದೆ. ಈಗ ಅವರು ಈ ಧಾರಾವಾಹಿ ಆಫರ್ ಪಡೆದು ನಟಿಸೋಕೆ ಶುರು ಮಾಡಿದ್ದಾರೆ. ಇಂದಿನ (ಮಾರ್ಚ್ 13) ಎಪಿಸೋಡ್ ಅಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಿದೆ.

ಇದನ್ನೂ ಓದಿ: ಬಿಗ್ ಬಾಸ್ ಆಫರ್ ಬಂದ್ರೆ ಸಂಜನಾ ಬುರ್ಲಿ ಏನು ಮಾಡ್ತಾರೆ? ಉತ್ತರಿಸಿದ ನಟಿ

ಸಂಜನಾ ಬುರ್ಲಿ ಅವರು ಈ ರೀತಿ ಮಾಡುತ್ತಿದ್ದಾರೆ ಇದು ಎರಡನೇ ಬಾರಿ. ಈ ಮೊದಲು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಸಂದರ್ಭದಲ್ಲಿ ಇತ್ತು. ಈಗ ಮತ್ತೆ ಅದೇ ರೀತಿಯ ಘಟನೆ ರಿಪೀಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *