Headlines

Sankashti Chaturthi 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿ; ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ

Sankashti Chaturthi 2025: ಇಂದು ವರ್ಷದ ಕೊನೆಯ ಸಂಕಷ್ಟ ಚತುರ್ಥಿ; ಪೂಜಾ ವಿಧಾನ ಮತ್ತು ಮಹತ್ವ ತಿಳಿಯಿರಿ


ಗಣೇಶನ ಆರಾಧನೆಗೆ ಇರುವ ವಿಶೇಷ ದಿನ ಸಂಕಷ್ಟ ಚತುರ್ಥಿ. ತಿಂಗಳಿಗೆ ಎರಡು ಚತುರ್ಥಿಗಳು ಬರುತ್ತವೆ. ಅಭ್ಯಾಸ ಹುಣ್ಣಿಮೆಯ ನಂತರ ಬರುವುದನ್ನು ‘ಸಂಕಷ್ಟಹರ ಚತುರ್ಥಿ’ ಎಂತಲೂ ಹಾಗೂ ಅಮಾವಾಸ್ಯೆ ನಂತರ ಬರುವುದನ್ನು ‘ವಿನಾಯಕ ಚತುರ್ಥಿ’ ಎಂದೂ ಕರೆಯಲಾಗುತ್ತದೆ. ಈ ವರ್ಷದ ಕೊನೆಯ ಸಂಕಷ್ಟ ಚತುರ್ಥಿ ಇಂದು(ಡಿಸೆಂಬರ್ 07ರಂದು)ಬಂದಿದೆ. ಈ ಸಂಕಷ್ಟ ಚತುರ್ಥಿಯನ್ನು ಅಖುರಥ ಸಂಕಷ್ಟ ಚತುರ್ಥಿ ಎಂದು ಕರೆಯುತ್ತಾರೆ.

ಶುಭ ಸಮಯಗಳ ವಿವರ:

  • ತಿಥಿ ಪ್ರಾರಂಭ: ಡಿಸೆಂಬರ್ 7, ಸಂಜೆ 06:24ಕ್ಕೆ .
  • ತಿಥಿ ಮುಕ್ತಾಯ: ಡಿಸೆಂಬರ್ 8, 2025, ಸಂಜೆ 04:03ಕ್ಕೆ.
  • ಚಂದ್ರೋದಯ ಸಮಯ: ಡಿಸೆಂಬರ್ 7, 2025, ರಾತ್ರಿ 08:30 ಗಂಟೆಗೆ (ಈ ಸಮಯವು ಸ್ಥಳದಿಂದ ಸ್ವಲ್ಪ ಬದಲಾಗಬಹುದು).

ಸಂಕಷ್ಟ ಚತುರ್ಥಿಯ ಮಹತ್ವ ಮತ್ತು ಆಚರಣೆ:

ಸಂಕಷ್ಟ ಚತುರ್ಥಿಯು ಗಣೇಶನಿಗೆ ಮಂಗಳಕರ ದಿನವಾಗಿದ್ದು, ಜೀವನದ ಎಲ್ಲಾ ತೊಂದರೆಗಳು, ಅಡೆತಡೆಗಳನ್ನು ನಿವಾರಿಸಿ, ಜ್ಞಾನ, ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಗಣೇಶನಿಗೆ ಉಪವಾಸ ಮಾಡಿ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ.

ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿಲ್ಲ

ವ್ರತಾಚರಣೆಯ ವಿಧಾನ:

  • ಸೂರ್ಯೋದಯಕ್ಕೆ ಮುನ್ನ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿ.
  • ಪೂಜಾ ಕೋಣೆಯಲ್ಲಿ ಗಣೇಶನ ವಿಗ್ರಹ ಅಥವಾ ಚಿತ್ರವನ್ನು ಇರಿಸಿ ಪೂಜೆ ಮಾಡಿ.
  • ದೀಪ, ಧೂಪ, ಹೂವು, ಗರಿಕೆ, ಮೋದಕ ಅಥವಾ ಲಡ್ಡುಗಳನ್ನು ಅರ್ಪಿಸಿ.
  • ಗಣೇಶ ಮಂತ್ರಗಳು ಮತ್ತು ಸಂಕಷ್ಟನಾಶನ ಗಣೇಶ ಸ್ತೋತ್ರವನ್ನು ಪಠಿಸಿ.
  • ದಿನವಿಡೀ ಉಪವಾಸವಿದ್ದು, ರಾತ್ರಿ ಚಂದ್ರೋದಯವಾದ ನಂತರ ಚಂದ್ರನಿಗೆ ಅರ್ಘ್ಯ ಅರ್ಪಿಸಿ, ಪೂಜೆ ಮುಗಿಸಿ ವ್ರತವನ್ನು ಮುರಿಯಿರಿ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *