
ಬೆಂಗಳೂರು, (ಏಪ್ರಿಲ್ 03): ಕಾರ್ಯಕ್ರಮದ ಭಾಷಣ ಮಾಡುವಾಗ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ (ಸಂತೋಷ್ ಹೆಗ್ಡೆ) ಅವರು ಅಸ್ವಸ್ಥಗೊಂಡು ವೇದಿಕೆಯಲ್ಲೇ ಕುಸಿದುಬಿದ್ದಿದ್ದಾರೆ. ಬೆಂಗಳೂರು (ಬೆಂಗಳೂರು) ಮಹಾರಾಣಿ ಕಾಲೇಜಿನ ಸಮೀಪವಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ವತಿಯಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸಂತೋಷ್ ಹೆಗ್ಡೆ ಅವರನ್ನು ಆಹ್ವಾನಿಸಲಾಯಿತು. ವೇದಿಕೆಯ ಮೇಲೆ ಡಯಾಸ್ ಬಳಿ ನಿಂತು ನೆರೆದಿದ್ದವರನ್ನು ಉದ್ದೇಶಿಸಿ ಮಾತಾಡುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದಾರೆ. ಬಳಿಕ ಭಾಷಣ ಮುಗಿಸಿ ಕುಳಿತಿದ್ದಾರೆ. ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೂ ಸಂತೋಷ್ ಹೆಗ್ಡೆ ಅವರನ್ನು ಸ್ಫೀಕರ್ ಯುಟಿ ಖಾದರ್ ತಮ್ಮ ಕಾರಿನಲ್ಲಿ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯ ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಇನ್ನು ಸಂತೋಷ್ ಹೆಗ್ಡೆ ಅವರಿಗೆ ಏಕಾಏಕಿ ಏನಾಯ್ತು? ಎಂಬ ಬಗ್ಗೆ ಖಾದರ್ ಅವರು ಮಾಹಿತಿ ನೀಡಿದ್ದಾರೆ.