Sanya Iyer: ನಟನೆಯಲ್ಲಿ ಅಷ್ಟಾಗಿ ಸದ್ದು ಮಾಡದೇ ಇದ್ದರೂ ಸಹ ಸಾನ್ಯಾ ಅಯ್ಯರ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬೆಂಕಿ ಲುಕ್ ಮೂಲಕ ಸಖತ್ ಸೌಂಡ್ ಮಾಡುತ್ತಲೇ ಇರುತ್ತಾರೆ. ಇದೀಗ ಸಖತ್ ಹಾಟ್ ಆಗಿರುವ ಫೋಟೊಗಳ ಮೂಲಕ ಸುದ್ದಿಯಲ್ಲಿದ್ದಾರೆ ನಟಿ.

ಬಿಗ್ ಬಾಸ್ ಸೀಸನ್ 9ರ ಮೂಲಕ ಮನೆಮಾತಾದ ನಟಿ ಸಾನ್ಯಾ ಅಯ್ಯರ್ ನಟನೆಯಿಂದ ಕೊಂಚ ದೂರವೇ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಂತೂ ನಟಿಯ ಹವಾ ಜೋರಾಗಿಯೇ ಇದೆ.

ಸಾನ್ಯಾ ಅಯ್ಯರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೆಚ್ಚಾಗಿ ತಮ್ಮ ಫೋಟೊ ಶೂಟ್, ಟ್ರಾವೆಲ್ ಫೋಟೊಗ್ರಫಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಸಾನ್ಯಾ ಗ್ರೇ ಬಣ್ಣದ ಡೀಪ್ ನೆಕ್, ಹೈ ಸ್ಲಿಟ್ ಗೌನ್ ಧರಿಸಿದ್ದು, ತಲೆ ಮೇಲೆ ಅದೇ ಬಣ್ಣದ ಕ್ಯಾಪ್ ನಂತಹ ಆಕ್ಸೆಸರಿ ಧರಿಸಿದ್ದು, ಪರ್ಷಿಯನ್ ಬ್ಯೂಟಿ ಥರ ಬೋಲ್ಡ್ ಮತ್ತು ಬ್ಯೂಟಿ ಫುಲ್ ಆಗಿ ಕಾಣಿಸುತ್ತಿದ್ದಾರೆ.

ನಟಿಯ ಬೋಲ್ಡ್ ಲುಕ್ ನೋಡಿ ಪಡ್ಡೆಗಳು ಫಿದಾ ಆಗಿದ್ದಾರೆ. ಕಾಮೆಂಟ್ ಸೆಕ್ಷನ್ ಪೂರ್ತಿ ಬೆಂಕಿ ಇಮೋಜಿಗಳೇ ತುಂಬಿವೆ. ಜೊತೆಗೆ ಬ್ಯೂಟಿಫುಲ್, ಭವಿಷ್ಯದ ಮಿಂಚು ಸಾನ್ಯಾ ಎಂದು ಜನ ಹೊಗಳುತ್ತಿದ್ದಾರೆ.

ಇನ್ನೂ ಕೆಲವು ಅಭಿಮಾನಿಗಳಂತೂ ಸಾನ್ಯಾ ಅಂದವನ್ನು ಹೊಗಳುತ್ತಾ, ಸಾನ್ಯಾ ಐಯ್ಯರ್ ಮುಂದೆ ರುಕ್ಮಿಣಿ ವಸಂತ್ ಏನೂ ಇಲ್ಲ ಎನ್ನುವಂತೆ, ರುಕ್ಮಿಣಿ ವಸಂತ್ X ಸಾನ್ಯಾ ಐಯ್ಯರ್ ✔ ಎಂದು ಕಾಮೆಂಟ್ ಬೇರೆ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಆವಾಗವಾಗ ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ವೇದಿಕೆಗಳಲ್ಲಿ ಡ್ಯಾನ್ಸ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಾನ್ಯಾ ಅಯ್ಯರ್, ಸಿನಿಮಾ ನಟನೆಯಿಂದ ಮಾತ್ರ ದೂರ ಉಳಿದಿದ್ದಾರೆ. ಯಾವಾಗ ಸಿನಿಮಾಗೆ ಬರುತ್ತಾರೆ ಎನ್ನುವ ಮಾಹಿತಿ ಇಲ್ಲ.

ಪುಟ್ಟಗೌರಿಯ ಮದುವೆ ಧಾರಾವಾಹಿಯಲ್ಲಿ ಪುಟ್ಟ ಗೌರಿಯಾಗಿ ನಟಿಸಿದ್ದ ಸಾನ್ಯಾ, ಬಳಿಕ ಒಂದೆರಡು ಆಲ್ಬಂ ಹಾಡುಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಓಟಿಟಿ ಮತ್ತು ಲೈವ್ ನಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ರು, ಬಳಿಕ ಗೌರಿ ಎನ್ನುವ ಸಿನಿಮಾದಲ್ಲೂ ನಟಿಸಿದ್ದರು ಸಾನ್ಯಾ ಅಯ್ಯರ್.

Source link
Sanya Iyer: ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಅಯ್ಯರ್ ಬೋಲ್ಡ್ ಫೋಟೋಸ್ ವೈರಲ್