Headlines

ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ನೀನಾಸಂ

ದಿ ರೈಸ್ ಆಫ್ ಅಶೋಕ: ಇಂಗ್ಲಿಷ್ ಶೀರ್ಷಿಕೆ ಇಟ್ಟಿದ್ದಕ್ಕೆ ಕಾರಣ ತಿಳಿಸಿದ ಸತೀಶ್ ನೀನಾಸಂ


ಸತೀಶ್ ನೀನಾಸಂ ಅಭಿನಯಿಸಿದ ‘ದಿ ರೈಸ್ ಆಫ್ ಅಶೋಕ’ (ಅಶೋಕನ ಉದಯ) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದ ಶೀರ್ಷಿಕೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದರು. ಕನ್ನಡದ ಸಿನಿಮಾಗೆ ಇಂಗ್ಲಿಷ್ ಶೀರ್ಷಿಕೆ ಯಾಕೆ ಎಂಬುದು ಪ್ರಶ್ನೆ. ಅದಕ್ಕೆ ‘ಟಿವಿ9’ ವಿಶೇಷ ಸಂದರ್ಶನದಲ್ಲಿ ಸತೀಶ್ ನೀನಾಸಂ (ಸತೀಶ್ ನೀನಾಸಂ) ಅವರು ಉತ್ತರ ನೀಡಿದ್ದಾರೆ. ‘ಅಶೋಕನ ಬೆಳವಣಿಗೆ ಅಂತ ಇಡೋಕೆ ಆಗಲ್ಲ. ಅಶೋಕ ಎದ್ದ ಅನ್ನೋಕೆ ಅಲ್ಲ. ದಿ ರೈಸ್ ಆಫ್ ಅಶೋಕ ಎಂದರೆ ಅದರಲ್ಲಿ ಒಂದು ಫೋರ್ಸ್ ಇದೆ. ಕೆಜಿಎಫ್ ಅಂತ ಶೀರ್ಷಿಕೆ ಇಟ್ಟಿದ್ದರು. ಕೋಲಾರದ ಚಿನ್ನದ ಗಣಿ ಅಂತ ಶೀರ್ಷಿಕೆ ಇಟ್ಟರೆ ಯಾವುದೋ ಕಲಾತ್ಮಕ ಸಿನಿಮಾ ಅಂದುಕೊಂಡು ಯಾರೂ ಬರಲ್ಲ’ ಎಂದು ಸತೀಶ್ ನೀನಾಸಂ ಅವರು ನಕ್ಕಿದ್ದಾರೆ. ಈ ಸಂದರ್ಶನದಲ್ಲಿ ಚಿತ್ರದ ನಾಯಕಿ ಸಪ್ತಮಿ ಗೌಡ (ಸಪ್ತಮಿ ಗೌಡ) ಕೂಡ ಭಾಗವಹಿಸಿದ್ದಾರೆ. ತಮ್ಮ ಪಾತ್ರದ ಬಗ್ಗೆ ಅವರು ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *