‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಬಿಕೆ 12) ಶೋ ಫಿನಾಲೆ ಬಳಿಕ ಸ್ಪರ್ಧಿಗಳೆಲ್ಲರೂ ಕಿಚ್ಚ ಸುದೀಪ್ ಜೊತೆ ಪಾರ್ಟಿ ಮಾಡಿದರು. ಅಲ್ಲಿ ನಡೆದ ಮಾತುಕಥೆ ಬಗ್ಗೆ ಸತೀಶ್ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಸತೀಶ್ ಧರಿಸುವ ಬಟ್ಟೆ, ಕೂಲಿಂಗ್ ಗ್ಲಾಸ್ ಇತ್ಯಾದಿಗಳ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗುತ್ತದೆ. ಅವರ ಬೆಲೆ ದುಬಾರಿ ಎಂದು ಅವರೇ ಹೇಳಿಕೊಳ್ಳುತ್ತಾರೆ. ’18 ಸಲ ನನ್ನ ಗ್ಲಾಸ್ ಬಗ್ಗೆ ಚರ್ಚೆ ಆಯಿತು. ಈ ಕೂಲಿಂಗ್ ಗ್ಲಾಸ್ ಅನ್ನು ತುಕಾಲಿ ಸಂತುಗೆ ಗಿಫ್ಟ್ ಕೊಡು ಅಂತ ಸುದೀಪ್ ಸರ್ (ಕಿಚ್ಚ ಸುದೀಪ್) ಹೇಳಿದರು. ಆದರೆ ನಾನು ಕೊಡಲ್ಲ ಅಂದೆ. ಇದು ಹೊಸ ಗ್ಲಾಸ್, ಇಲ್ಲ ಕೊಡಲ್ಲ ಅಂತ ಹೇಳಿದೆ’ ಸತೀಶ್. ತಮ್ಮಿಂದಾಗಿ ಎಲ್ಲರೂ ಫೇಮಸ್ ಆಗಿದ್ದಾರೆ ಎಂಬುದು ಸತೀಶ್ (ಸತೀಶ್ ಕಾಡಬೊಮ್ಸ್) ಅಭಿಪ್ರಾಯ. ಆ ಬಗ್ಗೆ ಕೂಡ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.