Headlines

ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್​​ ಜಾರಕಿಹೊಳಿ

ಅಧಿಕಾರ ಹಂಚಿಕೆ ಜಟಾಪಟಿ: ಅಚ್ಚರಿಯ ಹೇಳಿಕೆ ಕೊಟ್ಟ ಸಚಿವ ಸತೀಶ್​​ ಜಾರಕಿಹೊಳಿ


ದಾವಣಗೆರೆ, ಮಾರ್ಚ್ 02: ಸದ್ಯದ ಸ್ಥಿತಿಯಲ್ಲಿ ಮುಂದುವರೆದರೆ ಮುಂದೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರೋದು ಕಷ್ಟ ಎಂಬ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಸಹಮತ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸ್ಪಷ್ಟತೆಯ ಕೊರತೆಯಿಂದಾಗಿ ಕಾರ್ಯಕರ್ತರು, ಶಾಸಕರು ಮತ್ತು ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ. ಈ ಪರಿಸ್ಥಿತಿ ಶೀಘ್ರವಾಗಿ ತಿಳಿಯಬೇಕು. ಪಕ್ಷದ ಭವಿಷ್ಯದ ಬಗ್ಗೆ ಇರುವ ಅನಿಶ್ಚಿತತೆಯನ್ನು ನಿವಾರಿಸಲು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಬೇಕು. ಅಧಿಕಾರ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ನಿಂದ ಸ್ಪಷ್ಟ ನಿರ್ದೇಶನ ಬಂದರೆ ಮಾತ್ರ ಈ ಗೊಂದಲ ನಿಲ್ಲುತ್ತದೆ. ಹೈಕಮಾಂಡ್ ಒಂದು ದಿನದಲ್ಲಿಯೇ ಈ ಸಮಸ್ಯೆಯನ್ನು ಪರಿಹರಿಸುವ ಶಕ್ತಿ ಇದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *