
ಮಾರ್ಚ್ 2026 ರ ಈ ಅವಧಿಯಲ್ಲಿ ಮೀನ ರಾಶಿಯಲ್ಲಿ ಶನಿ ಮತ್ತು ಸೂರ್ಯ ಸಂಯೋಗ ನಡೆಯುತ್ತಿದೆ. ಕಾಲಜ್ಞಾನ ಶಾಸ್ತ್ರದ ಪ್ರಕಾರ ಸೂರ್ಯ ತಂದೆ ಮತ್ತು ಶನಿ ಮಗ. ಪರಸ್ಪರ ಶತ್ರು ಗ್ರಹಗಳು. ಈ ಇಬ್ಬರೂ ಒಂದೇ ರಾಶಿಯಲ್ಲಿದ್ದಾಗ ಸಂಘರ್ಷ, ಶಿಸ್ತು ಮತ್ತು ಪರಿವರ್ತನೆಯ ಕಾಲಘಟ್ಟ ನಿರ್ಮಾಣವಾಗುತ್ತದೆ.
ಈ ಸಂಯೋಗದಿಂದ ಯಾವ ರಾಶಿಯವರಿಗೆ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ ಎಂಬ ವಿವರ ಇಲ್ಲಿದೆ.
ಮೀನ ರಾಶಿ:
ಈ ಸಂಯೋಗ ನಿಮ್ಮ ಸ್ವಂತ ರಾಶಿಯಲ್ಲೇ ಇರುವುದರಿಂದ ನೀವು ಹೆಚ್ಚಿನ ಮಿಶ್ರಫಲ ಅನುಭವಿಸುವಿರಿ. ವೃತ್ತಿಜೀವನದಲ್ಲಿ ದೊಡ್ಡ ಜವಾಬ್ದಾರಿಗಳು ಅರಸಿ ಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗಬಹುದು. ಮಾನಸಿಕ ಒತ್ತಡ, ಅನಗತ್ಯ ಭಯ ಮತ್ತು ಆರೋಗ್ಯದಲ್ಲಿ ಏರುಪೇರಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು.
ಕನ್ಯಾ ರಾಶಿ :
ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಅಂದರೆ ಸಪ್ತಮ ಭಾವ ಈ ಯುತಿ ನಡೆಯುತ್ತಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಹಳೆಯ ಬಾಕಿ ಕೆಲಸಗಳು ಪೂರ್ಣಗೊಳ್ಳಬಹುದು. ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳನ್ನು ಎದುರಿಸಬೇಕಾಗಬಹುದು.
ಸಿಂಹ ರಾಶಿ :
ನಿಮ್ಮ ರಾಶ್ಯಾಧಿಪತಿ ಸೂರ್ಯ ಎಂಟನೇ ರಾಶಿಯಲ್ಲಿ ಶನಿಯು ಖಚಿತವಾಗಿ ಜಾಗರೂಕರಾಗಿರಬೇಕು. ನಿಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಹೆಚ್ಚುವುದು. ಪಿತ್ರಾರ್ಜಿತ ಆಸ್ತಿಯಿಂದ ಅನಿರೀಕ್ಷಿತ ಲಾಭವಾಗಬಹುದು. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಆರೋಗ್ಯದ ದೃಷ್ಟಿಯಿಂದ ಇದು ಸ್ವಲ್ಪ ಕಠಿಣ ಸಮಯ. ವಾಹನ ಚಾಲನೆಯಲ್ಲಿ ಎಚ್ಚರವಿರಲಿ.
ಕುಂಭ ರಾಶಿ:
ನಿಮ್ಮ ರಾಶಿಯಿಂದ ಎರಡನೇ ರಾಶಿಯಲ್ಲಿ ಈ ಸಂಯೋಗ ಆಗಲಿದೆ. ಸ್ಥಿರ ಆಸ್ತಿಯಲ್ಲಿ ಹೂಡಿಕೆ ಮಾಡಲು ಅವಕಾಶ ಸಿಗಲಿದೆ. ಹಿರಿಯ ಕುಟುಂಬದಿಂದ ಮಾರ್ಗದರ್ಶನ ದೊರೆಯುತ್ತದೆ. ಹಣಕಾಸಿನ ಹರಿವು ಉಳಿತಾಯ ಮಾಡುವುದು ಕಷ್ಟವಾಗುತ್ತದೆ. ಮಾತಿನಿಂದಾಗಿ ಆಪ್ತರೊಂದಿಗೆ ಕಹಿಯಾದ ಸಂಬಂಧ ಉಂಟಾಗುವ ಸಾಧ್ಯತೆಯಿದೆ.
ಈ ಅವಧಿಯಲ್ಲಿ ಸೂರ್ಯ ಮತ್ತು ಶನಿಯ ಅಶುಭ ಪ್ರಭಾವವನ್ನು ತಗ್ಗಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಬಹುದು. ಶನಿ ಚಾಲೀಸಾ ಅಥವಾ ಹನುಮಾನ್ ಚಾಲೀಸಾ ಪಠಿಸುವುದು. ಪ್ರತಿ ದಿನ ಬೆಳಗ್ಗೆ ಸೂರ್ಯನಿಗೆ ನಮಸ್ಕಾರ ಅರ್ಪಿಸುವುದು. ಶನಿವಾರದಂದು ಕಪ್ಪು ಎಳ್ಳನ್ನು ಸಂಕಲ್ಪ ಪೂರ್ವಕ ದಾನ ಮಾಡುವುದು.
– ಲೋಹಿತ ಹೆಬ್ಬಾರ್