ರಿಯಾಧ್, ಫೆಬ್ರುವರಿ 26: ಭಾರತ ಸೇರಿದಂತೆ 40 ದೇಶಗಳಿಂದ ಕೋಳಿ ಮಾಂಸ ಮತ್ತು ಮೊಟ್ಟೆ (ಕೋಳಿ ಮಾಂಸ ಮತ್ತು ಮೊಟ್ಟೆಗಳು) ಆಮದು ಮಾಡಿಕೊಳ್ಳುವುದನ್ನು ಸೌದಿ ಆಡಳಿತ (ಸೌದಿ ಅರೇಬಿಯಾ) ನಿಷೇಧಿಸಲಾಗಿದೆ. ಹಕ್ಕು ಜ್ವರ ಹರಡುವುದನ್ನು ಪ್ರಾಣಿಜನ್ಯ ಕಾಯಿಲೆಗಳು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೌದಿಯ ಆಹಾರ ಪ್ರಾಧಿಕಾರವಾದ ಎಸ್‌ಎಫ್‌ಡಿ ಈ ನಿಷೇಧ ಕ್ರಮ ಜರುಗಿಸಿದೆ.
‘ಸ್ಥಳೀಯ ಆಹಾರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಿಸುವ ಗುರಿಯನ್ನು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಎಸ್‌ಎಫ್‌ಡಿ ಹೇಳಿಕೆ ನೀಡಿದೆ.
ಭಾರತವಲ್ಲದೆ, ಚೀನಾ, ಬಾಂಗ್ಲಾದೇಶ, ಇಂಡೋನೇಷ್ಯ, ಇರಾನ್, ಯುಕೆ ಮತ್ತು ಆಹಾರಗಳಿಂದ ದೇಶಕ್ಕೆ ಪೂರೈಕೆಯಾಗುವ ಕೋಳಿ ಮಾಂಸ ಮೊಟ್ಟೆಗಳಿಗೆ ಸೌದಿ ಪ್ರವೇಶ ಸಿಗುವುದಿಲ್ಲ.
ಇದನ್ನೂ ಓದಿ: ಭಾರತ-ಇಸ್ರೇಲ್ ನಡುವೆ ಹಲವು ಒಪ್ಪಂದಗಳಿಗೆ ಸಹಿ; ಶೀಘ್ರದಲ್ಲೇ ಎಫ್ಟಿಎ ಏರ್ಪಡುವ ಸಾಧ್ಯತೆಯಿದೆ
ಜಾಗತಿಕವಾಗಿ ಹಕ್ಕಿ ಜ್ವರ ಇತ್ಯಾದಿ ಪ್ರಾಣಿಜನ್ಯ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಜೊತೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 40 ದೇಶಗಳ ಈ ಆಮದುಗಳ ಮೇಲೆ ಪೂರ್ಣ ನಿಷೇಧ ಹಾಕಲಾಗದಿದ್ದರೆ, ಅಮೆರಿಕ, ಆಸ್ಟ್ರೇಲಿಯಾ, ಫ್ರಾನ್ಸ್ ಮೊದಲಾದ 16 ದೇಶಗಳ ಮೇಲೆ ಪಾಕ್ಷಿಕವಾದ ನಿರ್ಬಂಧಗಳನ್ನು ತರಲಾಗಿದೆ. ಅಂದರೆ, ಈ ದೇಶದಲ್ಲಿರುವ ನಿರ್ದಿಷ್ಟ ಪ್ರದೇಶಗಳಿಂದ ಬರುವ ಕೋಳಿ ಮಾಂಸ ಮತ್ತು ಮೊಟ್ಟೆಗಳಿಗೆ ನಿಷೇಧ ಇರುತ್ತದೆ.
ಅನುಮೋದಿತ ವಿಧಾನಗಳನ್ನು ಅನುಸರಿಸುವ ಉತ್ಪನ್ನಗಳಿಗೆ ತಡೆ ಇಲ್ಲ…
ವೈರಸ್‌ಗಳನ್ನು ಹರಡದಂತೆ ನಿಯಂತ್ರಿಸಬಲ್ಲ ಹೀಟ್ ಟ್ರೀಟ್‌ಮೆಂಟ್ ಅನುಮೋದಿತ ವಿಧಾನಗಳನ್ನು ಬಳಸುವಂತಹ ಪೌಲ್ಟ್ರಿ ಫಾರ್ಮ್‌ಗಳಲ್ಲಿ ತಯಾರಾದ ಕೋಳಿ ಮಾಂಸ, ಮೊಟ್ಟೆ ಉತ್ಪನ್ನಗಳಿಗೆ ನಿಷೇಧ ಇರುವುದಿಲ್ಲ. ಈ ರೀತಿಯ ಪೌಲ್ಟ್ರಿ ಫಾರ್ಮ್ಗಳು ತಮ್ಮ ದೇಶದ ಪ್ರಾಧಿಕಾರಗಳಿಂದ ಮಾನ್ಯಗೊಂಡಿರಬೇಕು. ಎಲ್ಲಾ ಆರೋಗ್ಯ ನಿಯಮಾವಳಿಗಳನ್ನು ಪಾಲಿಸಬೇಕು ಎಂಬ ನಿಯಮವಿದೆ.
ಇದನ್ನೂ ಓದಿ: ಪಿಎಂ ಕಿಸಾನ್ ಯೋಜನೆಗೆ 7 ವರ್ಷ; 22ನೇ ಕಂತಿನ ಹಣ ಸದ್ಯದಲ್ಲೇ
ಸೌದಿ ನಿಷೇಧದಿಂದ ಭಾರತಕ್ಕೆಷ್ಟು ನಷ್ಟ?
ಭಾರತದಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಸೌದಿ ಅರೇಬಿಯಾಗೆ ಬಹಳ ಹೆಚ್ಚು ರಫ್ತಾಗುವುದಿಲ್ಲ. ಡೈರಿ ಉತ್ಪನ್ನಗಳು, ಮೊಟ್ಟೆ, ಜೇನು ಉತ್ಪನ್ನಗಳು 2024 ರಲ್ಲಿ ಭಾರತದಿಂದ ಸೌದಿಗೆ ರಫ್ತಾಗಿತ್ತು 64 ಮಿಲಿಯನ್ ಡಾಲರ್. ಅಂದರೆ ಸುಮಾರು 500 ಕೋಟಿ ರೂ. ಇದರಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆಯ ರಫ್ತು ಪ್ರಮಾಣ ಇನ್ನೂ ಕಡಿಮೆ. ಹೀಗಾಗಿ, ಸೌದಿಯ ಈ ನಿಷೇಧ ಕ್ರಮದಿಂದ ಭಾರತಕ್ಕೆ ಕೆಲವೇ ಕೋಟಿ ರೂನಷ್ಟು ರಫ್ತು ಅವಕಾಶ ಕೈತಪ್ಪಬಹುದು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ