ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ಬಾರಿಯ ಉಮ್ರಾ ಯಾತ್ರೆಗೆ ಸಂಬಂಧಿಸಿದಂತೆ ಹೊಸ ದಿನಾಂಕಗಳನ್ನು ಪ್ರಕಟಿಸಿದೆ. ವೀಸಾ ನೀಡಿಕೆ, ಯಾತ್ರಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಹೊಸ ಗಡುವನ್ನು ನಿಗದಿಪಡಿಸಿದ್ದು, ಹಜ್ ಯಾತ್ರೆಗೆ ಅಧಿಕೃತ ಹಜ್ ವೀಸಾ ಕಡ್ಡಾಯವೆಂದು ಪುನರುಚ್ಚರಿಸಿದೆ.

ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯವು ಈ ಬಾರಿಯ ಉಮ್ರಾ ಯಾತ್ರೆಗೆ ಸಂಬಂಧಿಸಿದಂತೆ ಪ್ರಮುಖ ದಿನಾಂಕಗಳನ್ನು ಪ್ರಕಟಿಸಿದೆ. ವೀಸಾ ನೀಡಿಕೆ, ಯಾತ್ರಿಗಳ ಪ್ರವೇಶ ಮತ್ತು ನಿರ್ಗಮನಕ್ಕೆ ಸಚಿವಾಲಯವು ಹೊಸ ಗಡುವನ್ನು ನಿಗದಿಪಡಿಸಿದೆ.

ಉಮ್ರಾ ವೀಸಾ ನೀಡಲು ಶವ್ವಾಲ್ 1, ಅಂದರೆ ಮಾರ್ಚ್ 20 ಕೊನೆಯ ದಿನಾಂಕವಾಗಿದೆ. ಯಾತ್ರಿಗಳು ಸೌದಿ ಅರೇಬಿಯಾ ಪ್ರವೇಶಿಸಲು ಶವ್ವಾಲ್ 15, ಅಂದರೆ ಏಪ್ರಿಲ್ 3 ಕೊನೆಯ ದಿನ. ಹಾಗೆಯೇ, ಯಾತ್ರಿಗಳು ದೇಶವನ್ನು ತೊರೆಯಲು ದುಲ್ ಖಅದ್ 1, ಅಂದರೆ ಏಪ್ರಿಲ್ 18 ಕೊನೆಯ ದಿನಾಂಕವಾಗಿದೆ. ಉಮ್ರಾ ಯಾತ್ರೆ ಆಯೋಜಿಸುವ ಕಂಪನಿಗಳೊಂದಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ನಡೆಸಿದ 17ನೇ ವರ್ಚುವಲ್ ಸಭೆಯಲ್ಲಿ ಈ ಘೋಷಣೆ ಮಾಡಲಾಗಿದೆ.

ದೇಶಕ್ಕೆ ಬರುವ ಎಲ್ಲಾ ಯಾತ್ರಿಗಳು ಹಜ್ ಮತ್ತು ಉಮ್ರಾ ಸೀಸನ್ನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಹಜ್ ಯಾತ್ರೆ ಮಾಡಲು ಅಧಿಕೃತ ಹಜ್ ವೀಸಾ ಹೊಂದಿರುವುದು ಕಡ್ಡಾಯ. ಉಮ್ರಾ ವೀಸಾ ಬಳಸಿ ಹಜ್ ಮಾಡಲು ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಎಂದು ಸಚಿವಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಂಜಾನ್ ತಿಂಗಳಲ್ಲಿ ಯಾತ್ರಿಗಳಿಗೆ ನೀಡಿದ ಉತ್ತಮ ಸೇವೆಗಳಿಗಾಗಿ ಮತ್ತು ಪ್ರಯಾಣದಲ್ಲಿ ಅಡಚಣೆ ಎದುರಿಸಿದವರಿಗೆ ಸಹಾಯ ಮಾಡಿದ್ದಕ್ಕಾಗಿ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫೀಖ್ ಅಲ್ ರಬಿಯಾ ಅವರು ಉಮ್ರಾ ಕಂಪನಿಗಳನ್ನು ಶ್ಲಾಘಿಸಿದರು.

ಸಂಕಷ್ಟಕ್ಕೆ ಸಿಲುಕಿದ ಯಾತ್ರಿಗಳಿಗೆ ಸಹಾಯ ಮಾಡಿ, ಅವರನ್ನು ಸುರಕ್ಷಿತವಾಗಿ ತಮ್ಮ ದೇಶಗಳಿಗೆ ತಲುಪಿಸುವಲ್ಲಿ ಕಂಪನಿಗಳು ವಹಿಸಿದ ಪಾತ್ರವನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು.

ವಿಮಾನ ನಿಲ್ದಾಣಗಳಲ್ಲಿ ಜನದಟ್ಟಣೆ ತಪ್ಪಿಸಲು ಯಾತ್ರಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಯಾಣಿಸಬೇಕು ಎಂದು ಸಚಿವರು ಸೂಚಿಸಿದರು. ಅಲ್ಲದೆ, ಯಾತ್ರಿಗಳ ವಾಪಸ್ ಪ್ರಯಾಣದ ವಿವರಗಳನ್ನು ‘ನುಸುಕ್ ಮಸಾರ್’ (Nusuk Masar) ಪ್ಲಾಟ್ಫಾರ್ಮ್ನಲ್ಲಿ ನಿಖರವಾಗಿ ಅಪ್ಡೇಟ್ ಮಾಡುವಂತೆ ನಿರ್ದೇಶನ ನೀಡಿದರು.

ಇದನ್ನೂ ಓದಿ: ಮಧ್ಯಪ್ರಾಚ್ಯದಲ್ಲೀಗ ಜಲಯುದ್ಧ: ಇಸ್ರೇಲ್ಗೆ 20000 ಅಮೆರಿಕ ಬಾಂಬ್: ಸೌದಿಯಲ್ಲಿ ಇರಾನ್ ದಾಳಿಗೆ ಭಾರತೀಯ ಬಲಿ

ಯಾತ್ರಿಗಳಿಗೆ ನೀಡುವ ಸೇವೆಗಳ ಗುಣಮಟ್ಟವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ 2026ರಲ್ಲಿ ನಡೆಯಲಿರುವ ಮೂರನೇ ‘ಉಮ್ರಾ ಮತ್ತು ವಿಸಿಟ್ ಫೋರಂ’ಗೆ ಸಿದ್ಧತೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸೌದಿ ಅರೇಬಿಯಾದ ‘ವಿಷನ್ 2030’ ಗುರಿಗಳಿಗೆ ಅನುಗುಣವಾಗಿ, ಯಾತ್ರಿಗಳು ಮತ್ತು ಪ್ರವಾಸಿಗರ ಅನುಭವವನ್ನು ಉತ್ತಮಪಡಿಸಲು ಸಚಿವಾಲಯವು ಕಂಪನಿಗಳೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ಲಕ್ಕುಂಡಿಗೂ ಮೊದಲು ಶುರುವಾಗಿತ್ತು ನಿಧಿ ಶೋಧ, 5 ವರ್ಷ ಬಳಿಕ ಸೌದಿಗೆ ಸಿಕ್ತು $2.5 ಟ್ರಿಲಿಯನ್ ಸಂಪತ್ತು

Source link
ಉಮ್ರಾ ಯಾತ್ರಿಗಳಿಗೆ ಹೊಸ ಡೆಡ್ಲೈನ್! ಸೌದಿ ಅರೇಬಿಯಾದಿಂದ ಬಂತು ಕಟ್ಟುನಿಟ್ಟಿನ ಆದೇಶ