
ಧೂಳು, ಮಾಲಿನ್ಯ, ಒತ್ತಡ, ಬದಲಾಗುತ್ತಿರುವ ಜೀವನಶೈಲಿ, ಪೋಷಕಾಂಶಗಳ ಕೊರತೆಯ ಕಾರಣದಿಂದ ಈ ಮಧ್ಯೆ ಬಹಳಷ್ಟು ಜನರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಅನೇಕರು ಮಾರುಕಟ್ಟೆಯಲ್ಲಿ ಸಿಗುವ ‘ಹೇರ್ ಡೈ’ಗಳನ್ನು ಬಳಸುತ್ತಿರುತ್ತಾರೆ. ಆದರೆ ಇದು ಇನ್‌ಸ್ಟೆಂಟ್ ಆಗಿ ಕೂದಲನ್ನು ಕಪ್ಪಾಗಿಸಿದರೂ, ಭವಿಷ್ಯದಲ್ಲಿ ಇದು ಇತರ ಕೂದಲುಗಳನ್ನೂ ಸಹ ಬಿಳಿಯಾಗುವಂತೆ ಮಾಡಬಹುದು.