ಮಂಗಳೂರು, ಫೆಬ್ರವರಿ 15: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿರುವ ಅರಳ ಗರುಡ ಮಹಾಕಾಳಿ ದೇಗುಲದಲ್ಲಿ ಫೆ.22ರಂದು ನಡೆಯುವ ಹಿಂದೂ ರಾಷ್ಟ್ರ ಜಾಗೃತಿ ಸಭೆ (ಹಿಂದೂ ರಾಷ್ಟ್ರ ಜಾಗೃತಿ ಸಭೆ) SDPIನಿಂದನೆ ವಿರೋಧವಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು, ಆಯೋಜಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಫೆ.22ರಂದು ನಡೆಯಲಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಗೆ ಸದ್ಯ ವಿರೋಧ ವ್ಯಕ್ತವಾಗಿದೆ. ಎಸ್‌ಡಿಪಿಐ ಮುಖಂಡ ಎಸ್.ಎಚ್.ಶಾಹುಲ್, ಕಬೀರ್ ಅಕ್ಕರಂಗಡಿ, ಅಕ್ಬರ್ ಅಲಿ ಪೊನ್ನೋಡಿ, ಇಮ್ರಾನ್ ಬಂಟ್ವಾಳ, ಉಬೈದ್‌ರಿಂದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು.
ದೂರಿನಲ್ಲೇನಿದೆ?
ಹಿಂದೂ ಜನಜಾಗೃತಿ ಸಮಿತಿ ಇದರ ವತಿಯಿಂದ ಹಿಂದೂ ರಾಷ್ಟ್ರ ನಿರ್ಮಾಣ ಎಂಬ ಸಂವಿಧಾನ ವಿರೋದಿ ದೇಶದ್ರೋಹಿ ಚಟುವಟಿಕೆಗಳಿಗೆ ಕರೆನೀಡುವ ಮತ್ತು ಸಮಾಜದಲ್ಲಿ ಆತಂಕ ಸೃಷ್ಟಿಸುವ ಕಾರ್ಯಕ್ರಮವನ್ನು ನಿರಾಕರಿಸಬೇಕು ಹಾಗೂ ಕಾರ್ಯಕ್ರಮ ಆಯೋಜಕರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ದೂರು ನೀಡಲಾಗಿದೆ.
ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಬೇಕಿದ್ದ ದಫ್ ಕಾರ್ಯಕ್ರಮ ರದ್ದು
ಇತ್ತೀಚೆಗಷ್ಟೇ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಆಯೋಜಿಸಲು ಉದ್ದೇಶಿಸಿರುವ ಪ್ರದರ್ಶನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು.
ಇದನ್ನೂ ಓದಿ: ಮಂಗಳೂರಿನಲ್ಲಿ ಬೋಟ್ ಆಂಬ್ಯುಲೆನ್ಸ್ ಲೋಕಾರ್ಪಣೆ: ಏನೆಲ್ಲಾ ಸೌಲಭ್ಯ, ಹೇಗೆ ಕಾರ್ಯನಿರ್ವಹಿಸುತ್ತದೆ?
ಕೆವಿಜಿ ಸುಳ್ಯ ಹಬ್ಬ ಸಮಾಜ ಸಂಘದ ವತಿಯಿಂದ “ಕೆವಿಜಿ ಸುಳ್ಯ ಹಬ್ಬ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮಂಗಳೂರು ಇವರ ಸಾಂಸ್ಕೃತಿಕ ಕಾರ್ಯಕ್ರಮವಾಗಿ ದಫ್ ಪ್ರದರ್ಶನವನ್ನು ಏರ್ಪಡಿಸಲು ಸಿದ್ಧತೆ ನಡೆಸಲಾಯಿತು. ಆದರೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಒತ್ತಡ ಹೇರಿದ ಪರಿಣಾಮ, ಆಯೋಜಕರು ದಫ್ ಪ್ರದರ್ಶನವನ್ನು ಕಾರ್ಯಕ್ರಮ ಪಟ್ಟಿಯಿಂದ ಕೈಬಿಡಲಾಯಿತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.