
ಜನವರಿ 26: ಆನ್‌ಲೈನ್‌ನಲ್ಲಿ ಸಾಕಷ್ಟು ವಂಚನೆಗಳಾಗುತ್ತವೆ. ವಾಟ್ಸಾಪ್, ಟೆಲಿಗ್ರಾಮ್ ಇತ್ಯಾದಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಂಚಕ ವೆಬ್ ಸೈಟ್‌ಗಳಿಗೆ ದಾರಿ ಕೊಡುವ ನಕಲಿ ಲಿಂಕ್‌ಗಳನ್ನು ಹಾಕಿ ಯಾಮಾರಿಸುವವರು ಬಹಳ ಇದ್ದಾರೆ. ಬದಲಿಗೆ, ಸರಕುಗಳ ವ್ಯಾಪಾರದ ಮೂಲಕ ಅಬುತವಾಗಿ ಸಂಪಾದನೆ ಮಾಡಬಹುದು ಎಂದು ಪುಸಲಾಯಿಸಿ, ನಕಲಿ ಟ್ರೇಡಿಂಗ್ ಆಯಪ್ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇವಕ್ಕೆ ಕಡಿವಾಣ ಹಾಕಲು ಮತ್ತು ಹೂಡಿಕೆದಾರರನ್ನು ವಂಚಕರಿಂದ ರಕ್ಷಿಸಲು ಸೆಬಿ (SEBI) ಹೊಸ ಉಪಾಯ ಮಾಡಿದೆ. ಷೇರು ಟ್ರೇಡಿಂಗ್ ಆಯಪ್ಗಳನ್ನು ಸುಲಭವಾಗಿ ಗುರುತಿಸಬಲ್ಲಂತಹ ಉಪಾಯ ಇದು.
ಸೆಬಿಯಿಂದ ಮಾನ್ಯತೆ ಹೊಂದಿರುವ ಷೇರು ಟ್ರೇಡಿಂಗ್ ಆಯಪ್‌ಗಳಿಗೆ ಗೂಗಲ್ ಪ್ಲೇಸ್ಟೋರ್‌ನಲ್ಲಿ ವೆರಿಫೈ ಲೇಬಲ್ ಹಾಕುವ ಕ್ರಮವನ್ನು ಸೆಬಿ ಜಾರಿಗೆ ತಂದಿದೆ. ಷೇರು ಮಾರುಕಟ್ಟೆಯ ಬ್ರೋಕರ್ ಎಂದು ಹೇಳಿ ಜನರನ್ನು ವಂಚಿಸುತ್ತಿರುವ ಸಮಸ್ಯೆಯನ್ನು ನಿವಾರಿಸಲು ಈ ಪ್ರಯತ್ನ ನಡೆದಿದೆ.
ಇದನ್ನೂ ಓದಿ: ಪೆಟ್ರೋಲ್ ಡೀಸೆಲ್ ಬೆಲೆಗಳು: ಭಾರತದಲ್ಲಿ ನಯಾರಾ ಪೆಟ್ರೋಲ್ ದರ; ಲೀಟರ್‌ಗೆ 5 ರೂ ಬೆಲೆ ಏರಿಕೆ
ಇತ್ತೀಚಿನ ಪ್ಲೇಸ್ಟೋರ್ನಲ್ಲಿ ನಕಲಿ ಟ್ರೇಡಿಂಗ್ ಆಯಪ್ಗಳ ಸಂಖ್ಯೆ ಬಹಳ ಹೆಚ್ಚಾಗಿದೆ. ಗ್ರೋ, ಝಿರೋಧ ಕೈಟ್, ಏಂಜೆಲ್ ಒನ್ ಇತ್ಯಾದಿ ಅಧಿಕೃತ ಪ್ಲಾಟ್‌ಫಾರ್ಮ್‌ಗಳನ್ನು ಹೋಲುವ ರೀತಿಯ ನಕಲಿ ಆಯಪ್‌ಗಳನ್ನು ತಯಾರಿಸಿ ಅಮಾಯಕ ಜನರನ್ನು ಸೆಳೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಆತಂಕವನ್ನು ಉಂಟುಮಾಡುತ್ತಿವೆ.
ಈ ಕಾರಣಕ್ಕೆ ಸೆಬಿ ನೊಂದಾಯಿತ ಟ್ರೇಡಿಂಗ್ ಆಯಪ್‌ಗಳಿಗೆ ಪ್ಲೇ ಸ್ಟೋರ್‌ನಲ್ಲಿ ವೆರಿಫೈಡ್ ಟ್ಯಾಗ್ ಕಾಣುವಂತೆ ಇಡಲಾಗುತ್ತಿದೆ. ಈ ಕಾರ್ಯಕ್ಕಾಗಿ ಸೆಬಿ ಮತ್ತು ಗೂಗಲ್ ಕೈಜೋಡಿಸಿವೆ.
ಇದನ್ನೂ ಓದಿ: ಆರೋಗ್ಯ ಇನ್ಷೂರೆನ್ಸ್; ಕಾರ್ಪೊರೇಟ್ ಪಾಲಿಸಿ ಜೊತೆಗೆ ವೈಯಕ್ತಿಕ ವಿಮೆಯೂ ಇರಲಿ: ನಿತಿನ್ ಕಾಮತ್ ಸಲಹೆ
ಸೆಬಿ ಸಿವಿವಿ ಸೇಫ್ಟಿ ಫ್ರೇಮ್ ವರ್ಕ್
ಹೂಡಿಕೆದಾರರನ್ನು ರಕ್ಷಿಸಲು ಸೆಬಿ ಸಿವಿವಿ ಅಥವಾ ಚೆಕ್, ವ್ಯಾಲಿಡೇಟ್ ಮತ್ತು ವೆರಿಫೈ, ಈ ಅನುಸರಿಸುವಂತೆ ಸಲಹೆ ನೀಡಿದೆ. ಈ ಸಿವಿವಿ ವಿಧಾನಗಳು ಹೀಗಿವೆ:
- ಚೆಕ್ (ಪರಿಶೀಲನೆ): ಸಾರಥಿ ಆಯಪ್‌ನಲ್ಲಿ (ಸಾ₹ಥಿ) ಸೆಬಿ ಚೆಕ್ ಫೀಚರ್ ಬಳಸಿ ಬ್ಯಾಂಕ್ ಅಕೌಂಟ್‌ಗಳನ್ನು ಪರಿಶೀಲಿಸಿ.
- ವ್ಯಾಲಿಡೇಟ್: ಯುಪಿಐ ಐಡಿಗಳು ಸೆಬಿ ಟೂಲ್‌ಗಳಲ್ಲಿ ‘ವ್ಯಾಲಿಡ್’ ಪದವು ಹೊಂದಿದೆ.
- ವೆರಿಫೈ: ಟ್ರೇಡಿಂಗ್ ಆಯಪ್‌ಗಳಲ್ಲಿ ವೆರಿಫೈಡ್ ಲೇಬಲ್ ಇದೆಯಾ ಗಮನಿಸಿ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ