Headlines

ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್

ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್

ದೋಸೆ ಮಾಡೋಕೆ ಹೋದ್ರೆ ರಟ್ಟಿನ ತರ ಗಟ್ಟಿ ಆಗುತ್ತಿದೆಯೇ?, ಪರ್ಫೆಕ್ಟ್ ಆಗಿ ಬರಲು ಇಲ್ಲಿದೆ ಸೀಕ್ರೆಟ್ ಟಿಪ್

Crispy Dosa Recipe: ಮನೆಲೀ ಎಷ್ಟೇ ಪ್ರಯತ್ನಿಸಿದರೂ ದೋಸೆ ಕೆಲವೊಮ್ಮೆ ತವಾ ಅಂಟಿಕೊಳ್ಳುವುದು ಅಥವಾ ಮೆತ್ತಗಾಗಿ ಬಿಡುವುದು ಸಾಮಾನ್ಯ. ಆದರೆ ಶೆಫ್‌ಗಳು ಬಳಸುವ ಆ ಸಣ್ಣ ಸೀಕ್ರೆಟ್ ಟಿಪ್ಸ್ ಮತ್ತು ಅಕ್ಕಿ-ಬೇಳೆಯ ಸರಿಯಾದ ಅಳತೆ ನಿಮಗೆ ಗೊತ್ತಾದರೆ ನೀವೂ ಕೂಡ ಪರ್ಫೆಕ್ಟ್ ಕ್ರಿಸ್ಪಿ ದೋಸೆ ಮಾಡಬಹುದು.

ಮನೆಯಲ್ಲಿ ದೋಸೆ ಮಾಡುವಾಗ ಅದು ರಟ್ಟಿನಂತೆ ಗಟ್ಟಿಯಾಗುತ್ತದೆ ಅಥವಾ ದಪ್ಪಗಾಗುತ್ತದೆ, ಅಂಟಿಕೊಳ್ಳುತ್ತದೆ, ಗರಿಗರಿಯಾಗಿ ಬರುವುದಿಲ್ಲ ಎಂಬ ಚಿಂತೆನಾ?. ನಿಮ್ಮ ಈ ಎಲ್ಲಾ ಸಮಸ್ಯೆಗಳಿಗೆ ಜಮ್‌ಶೆಡ್‌ಪುರದ ಪ್ರಸಿದ್ಧ ದೋಸೆ ತಯಾರಕರು ಕೊಟ್ಟ ಈ ಸಿಂಪಲ್ ಟಿಪ್ಸ್‌ನಲ್ಲಿ ಉತ್ತರವಿದೆ. ಇದನ್ನ ಫಾಲೋ ಮಾಡಿದ್ದೇ ಆದಲ್ಲಿ ನೀವೂ ಕೂಡ ಮನೆಯಲ್ಲೇ ಪರ್ಫೆಕ್ಟ್ ದೋಸೆ ತಯಾರಿಸಬಹುದು.

ಉತ್ತಮ ದೋಸೆ ಬರಬೇಕಾದರೆ ಹಿಟ್ಟಿನ ಮಿಶ್ರಣ ಸರಿಯಾಗಿರಬೇಕು. 1 ಕೆಜಿ ಅಕ್ಕಿಗೆ ಸುಮಾರು 100 ಗ್ರಾಂ ಉದ್ದಿನಬೇಳೆಯನ್ನು ಹಾಕಿ ನೆನೆಸಿ. ಇವುಗಳನ್ನು ಚೆನ್ನಾಗಿ ತೊಳೆದು ನೆನೆಯಲು ಬಿಡಿ. ಕನಿಷ್ಠ 5 ರಿಂದ 8 ಗಂಟೆಗಳ ಕಾಲ ನೆನೆಸಲೇಬೇಕು. ಉತ್ತಮ ಫಲಿತಾಂಶಕ್ಕೆ 8 ಗಂಟೆ ನೆನೆಸುವುದು ಅತ್ಯುತ್ತಮ. 8 ಗಂಟೆಯ ನಂತರ ಮಿಕ್ಸಿ ಅಥವಾ ಗ್ರೈಂಡರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

ರುಬ್ಬಿದ ನಂತರ ಹಿಟ್ಟನ್ನು 8 ರಿಂದ 10 ಗಂಟೆಗಳ ಕಾಲ ಮುಚ್ಚಿಡಿ. ಹಿಟ್ಟು ಚೆನ್ನಾಗಿ ಉಬ್ಬಿ ಬಂದಾಗ ಮಾತ್ರ ದೋಸೆ ಹಗುರವಾಗಿ ಮತ್ತು ರುಚಿಯಾಗಿ ಬರುತ್ತದೆ. ಹಿಟ್ಟಿನಲ್ಲಿ ಲಘು ಹುಳಿ ಅಂಶ ಕಾಣಿಸಿಕೊಂಡರೆ ಅದು ದೋಸೆಗೆ ಸಿದ್ಧವಾಗಿದೆ ಎಂದರ್ಥ. ಹಿಟ್ಟು ಅತಿಯಾಗಿ ನೀರಾಗಿಯೂ ಇರಬಾರದು ಅಥವಾ ಅತಿ ಗಟ್ಟಿಯಾಗಿಯೂ ಇರಬಾರದು.

ದೋಸೆ ಚೆನ್ನಾಗಿ ಬರಲು ತವಾ ಕೂಡ ಅತಿ ಮುಖ್ಯ. ನಾನ್-ಸ್ಟಿಕ್‌ಗಿಂತ ಕಬ್ಬಿಣದ ತವಾ ಬಳಸಿ. ಮೊದಲಿಗೆ ತವಾ ಚೆನ್ನಾಗಿ ಕಾಯಿಸಿ. ನಂತರ ಸ್ವಲ್ಪ ನೀರು ಚಿಮುಕಿಸಿ ತಣಿಸಿ. ನೆನಪಿಡಿ, ತವಾ ಅತಿಯಾಗಿ ಕಾದಿದ್ದರೆ ಹಿಟ್ಟು ಸರಿಯಾಗಿ ಹರಡುವುದಿಲ್ಲ. ತಣ್ಣಗಿದ್ದರೆ ದೋಸೆ ಅಂಟಿಕೊಳ್ಳುತ್ತದೆ. ಹೊಸ ತವಾ ಆಗಿದ್ದರೆ ಸ್ವಲ್ಪ ಎಣ್ಣೆ ಸವರಿ ಈರುಳ್ಳಿ ಅಥವಾ ಬಟ್ಟೆಯಿಂದ ಉಜ್ಜಿ. ಮೇಲ್ಮೈ ನುಣುಪಾಗಿ ಮಾಡಿಕೊಳ್ಳಿ.

ಒಂದು ಸೌಟು ಹಿಟ್ಟನ್ನು ತವಾ ಮಧ್ಯದಲ್ಲಿ ಹಾಕಿ. ಹಗುರವಾದ ಕೈಗಳಿಂದ ಒಳಗಿನಿಂದ ಹೊರಕ್ಕೆ ವೃತ್ತಾಕಾರದಲ್ಲಿ ಹರಡಿ. ದೋಸೆ ಎಷ್ಟು ತೆಳುವಾಗಿರುತ್ತದೆಯೋ ಅಷ್ಟು ಕ್ರಿಸ್ಪಿಯಾಗಿ ಬರುತ್ತದೆ. ನಂತರ ಅಂಚುಗಳಿಗೆ ಸ್ವಲ್ಪ ಎಣ್ಣೆ ಅಥವಾ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.

ದೋಸೆಯ ಬಣ್ಣ ಹದವಾಗಿ ಕೆಂಪಗಾದಾಗ ಅಂಚುಗಳು ತಾನಾಗಿಯೇ ಬಿಟ್ಟುಕೊಳ್ಳುತ್ತವೆ. ಆಗ ಅದನ್ನು ಮಡಚಿ ಪ್ಲೇಟ್‌ಗೆ ಸರ್ವ್ ಮಾಡಿ. ನೆನಪಿಡಿ, ಮೊದಲ 2-3 ದೋಸೆಗಳು ಸರಿಯಾಗಿ ಬರದಿದ್ದರೆ ಬೇಸರ ಮಾಡಿಕೊಳ್ಳಬೇಡಿ. ಸ್ವಲ್ಪ ಅಭ್ಯಾಸವಾದ ನಂತರವೇ ನೀವು ಹೋಟೆಲ್‌ನಂತೆ ಪರ್ಫೆಕ್ಟ್ ದೋಸೆ ಮಾಡಬಹುದು.

Source link

Leave a Reply

Your email address will not be published. Required fields are marked *