ಪಾಕಿಸ್ತಾನದಿಂದ ಗಡಿ ದಾಟಿ ಭಾರತೀಯ ಪ್ರಿಯಕರ ಸಚಿನ್ ಮೀನಾನನ್ನು ಸೇರಿದ ಸೀಮಾ ಹೈದರ್ ಮತ್ತೊಮ್ಮೆ ತಾಯಿಯಾಗಿದ್ದಾರೆ. ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇದು ಸಚಿನ್ ಜೊತೆಗಿನ ಅವರ ಎರಡನೇ ಮಗುವಾಗಿದೆ. ಈ ಮೂಲಕ ಸೀಮಾ ಹೈದರ್ ಈಗ ಒಟ್ಟು ಆರು ಮಕ್ಕಳ ತಾಯಿಯಾಗಿದ್ದಾರೆ.
ಭಾರತೀಯ ಮೂಲದ ಸಚಿನ್ ಮೀನಾ ಎಂಬಾತನನ್ನು ಮದುವೆಯಾಗಲು ಗಡಿ ದಾಟಿ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಈಗ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಾರೆ. ಕೇವಲ 11 ತಿಂಗಳ ಹಿಂದಷ್ಟೇ ಸೀಮಾ ಹೈದರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಭಾರತಕ್ಕೆ ಬಂದ ಮೇಲೆ ಸೀಮಾ 2ನೇ ಮಗುವಿಗೆ ಜನ್ಮ ನೀಡಿದ್ದು, ಸಚಿನ್ ಮೀನಾ ಹಾಗೂ ಸೀಮಾ ಹೈದರ್ ಈಗ ಮತ್ತೊಮ್ಮೆ ಪೋಷಕರಾಗಿದ್ದಾರೆ.

ಪಾಕಿಸ್ತಾನಿ ಮೂಲದ ಸೀಮಾ ಹೈದರ್ ಹಾಗೂ ಸಚಿನ್ ಮೀನಾ ಆನ್ಲೈನ್ನಲ್ಲಿ ಪಬ್ಜಿ ಗೇಮ್ ಆಡುತ್ತಾ ಪರಸ್ಪರ ಪರಿಚಿತರಾಗಿ ಪ್ರೀತಿ ಮಾಡಲು ಶುರು ಮಾಡಿದ್ದು, ಪ್ರಿಯಕರ ಸಚಿನ್ಗಾಗಿ ಅವರು ನೇಪಾಳ ಮೂಲ ಅಕ್ರಮವಾಗಿ ಗಡಿದಾಟಿ ಬಂದಿದ್ದರು. ಸೀಮಾ ಹೈದರ್ಗೆ ಪಾಕಿಸ್ತಾನದಲ್ಲಿ ಆಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು. 2023ರ ಮೇ ತಿಂಗಳಲ್ಲಿ ಆ ಮಕ್ಕಳ ಜೊತೆಗೆ ಸೀಮಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು.

ಮೂಲತಃ ಸೀಮಾ ಪಾಕಿಸ್ತಾನದ ಜಾಕೋಬಾದ್ ನಿವಾಸಿಯಾಗಿದ್ದು, ಆಕೆಯ ಮೂಲ ಹೆಸರು ಸೀಮಾ ಗುಲಾಮ್ ಹೈದರ್ ಎಂಬುದಾಗಿತ್ತು. ಆದರೆ ಈಗ ಆಕೆ ಮತ್ತೆ ಒಂದು ಮಗುವಿಗೆ ಜನ್ಮ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಆರನೇ ಬಾರಿ ತಾಯಿಯಾಗುತ್ತಿರುವ ಸೀಮಾ ಗ್ರೇಟರ್ ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸಚಿನ್ ಜೊತೆ ಇದು ಅವರ 2ನೇ ಮಗುವಾಗಿದೆ. ಖಾಸಗಿ ಆಸ್ಪತ್ರೆ ನೀಡಿದ ಮಾಹಿತಿ ಪ್ರಕಾರ, ಇದು ಸಹಜ ಹೆರಿಗೆ ಆಗಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ, ಸೀಮಾ ತಮ್ಮ ಆಗಷ್ಟೇ ಜನಿಸಿದ ಮಗನೊಂದಿಗೆ ಗೌತಮ್ ಬುದ್ಧ ನಗರದ ರಬುಪುರದಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. 2ನೇ ಮಗು ಜನಿಸಿದ್ದರಿಂದ ಖುಷಿಯಾಗಿರುವ ಸಚಿನ್ ಮತ್ತು ಅವರ ಕುಟುಂಬ ನೆರೆಹೊರೆಯವರಿಗೆ ಸಿಹಿತಿಂಡಿ ಹಚ್ಚಿ ಸಂಭ್ರಮಿಸಿದೆ. 2019ರಲ್ಲಿ ಪಬ್ಜಿ ಆಡುತ್ತಾ ಸೀಮಾ ಹಾಗೂ ಸಚಿನ್ಗೆ ಪರಿಚಯವಾಗಿತ್ತು. ಕ್ರಮೇಣ ಅವರು ಪ್ರೀತಿಯಲ್ಲಿ ಬಿದ್ದಿದ್ದರು.

ಆದರೆ ಸಚಿನ್ಗಾಗಿ ಸೀಮಾ ಹೈದರ್ 2023ರಲ್ಲಿ ಭಾರತಕ್ಕೆ ಬಂದ ನಂತರ ಅವರು ಗ್ರೇಟರ್ ನೋಯ್ಡಾದ ರಬುಪುರ ಪ್ರದೇಶದಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದರು. ಅವರ ಲವ್ ಸ್ಟೋರಿ ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೂ ಮೊದಲು ಸೀಮಾ ಹೈದರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿದ್ದರು.

ಭಾರತಕ್ಕೆ ಬಂದ ಸಮಯದಲ್ಲಿ ಆಕೆ ಹಾಗೂ ಸಚಿನ್ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಆದರೆ ನಂತರ ಅವರಿಗೆ ಜಾಮೀನು ನೀಡಲಾಯ್ತು. ಜಾಮೀನಿನ ನಂತರ ಸೀಮಾ ತಮ್ಮ ಸೋಶಿಯಮ್ ಮೀಡಿಯಾಗಳ ಮೂಲಕ, ತಾನುನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿ, ಆನ್ಲೈನ್ನಲ್ಲಿ ಭೇಟಿಯಾದ ಸಚಿನ್ ಅವರೊಂದಿಗೆ ಇರಲು ಬಸ್ನಲ್ಲಿ ನೋಯ್ಡಾಗೆ ಪ್ರಯಾಣ ಬೆಳೆಸಿದ್ದಾಗಿ ಹೇಳಿದ್ದಾರೆ. 2025 ರ ಆರಂಭದಲ್ಲಿ, ಅವರ ಮೊದಲ ಪತಿ ಗುಲಾಮ್ ಹೈದರ್, ತನ್ನ ಮಕ್ಕಳನ್ನು ಭೇಟಿ ಮಾಡಿ ಅವರ ಪಾಲನೆಯನ್ನು ಪಡೆಯುವುದಕ್ಕೆ ಅವಕಾಶ ನೀಡುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದರು.

Source link
5ನೇ ಮಗುವಿಗೆ 11 ತಿಂಗಳು ತುಂಬುತ್ತಲೇ ಮತ್ತೊಂದು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್