
ಸಿಹಿಯ ನಿಜವಾದ ಹೆಸರು ರಿತು ಸಿಂಗ್ (Ritu Singh). ವಯಸ್ಸು ಇದೀಗ ಏಳು. ಆದರೂ ವಯಸ್ಸಿಗೆ ಮೀರಿದ ಮಾತನಾಡಿ ಕೆಲವೊಮ್ಮೆ ಅತಿಯಾಯಿತು ಎನ್ನಿಸುವಂತೆ ಅನ್ನಿಸಿಕೊಳ್ಳುತ್ತಿದ್ದರೂ ಇವಳ ಅಭಿನಯಕ್ಕೆ ಬಂದರೆ, ಅಬ್ಬಾ ಎಂಥವರೂ ತಲೆದೂಗಲೇಬೇಕು. ಅದೆಂಥ ನಟನೆ, ನೋವು, ನಲಿವು, ಹಾಸ್ಯ, ಕಣ್ಣೀರು… ಯಾವುದೇ ಸನ್ನಿವೇಶ ಇರಲಿ, ಆ ದೃಶ್ಯಗಳಿಗೆ ತಕ್ಕಂತೆ ನಟನೆ ಮಾಡುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಹಿಂದಿನ ಜನ್ಮದ ಗಿಫ್ಟ್ ಈಕೆಯದ್ದು ಎನ್ನುವಂಥ ನಟನೆಯ ಮೂಲಕ ಮನೆ ಮಾತಾಗಿದ್ದವಳು.