ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda: ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!

ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda: ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!

ತಮ್ಮ ತಾಳಕ್ಕೆ ತಕ್ಕಂತೆ ಗಂಡನನ್ನು ಕುಣಿಸಿದ Vaishnavi Gowda: ನಟಿಯ ಹೊಟ್ಟೆ ಮೇಲೆ ನೆಟ್ಟಿಗರ ಕಣ್ಣು!
‘ಅಗ್ನಿಸಾಕ್ಷಿ’ ಖ್ಯಾತಿಯ ನಟಿ ವೈಷ್ಣವಿ ಗೌಡ, ಪತಿ ಅನುಕೂಲ್‌ ಮಿಶ್ರಾ ಜೊತೆಗಿನ ದಾಂಪತ್ಯ ಜೀವನವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಪತಿಯೊಂದಿಗೆ ಡ್ಯಾನ್ಸ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದೆ.
ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾರಾಮದ ಸೀತೆಯಾಗಿ ಮಿಂಚಿರೋ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್‌ ಮಿಶ್ರಾ ಜೊತೆ ಮದುವೆಯಾಗಿ ಜಾಲಿ ಮೂಡ್​ನಲ್ಲಿದ್ದಾರೆ. ಕಳೆದ ಜೂನ್​ ತಿಂಗಳಿನಲ್ಲಿ ಇವರ ಮದುವೆ ನಡೆದಿದೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್‌ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್‌ ಆಗಿತ್ತು. ಆದ್ರೆ ಸೀಕ್ರೇಟ್​ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್​ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.

ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್‌ ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್‌ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಇದರ ನಡುವೆಯೇ ಸೋಷಿಯಲ್​ ಮೀಡಿಯಾದಲ್ಲಿಯೂ ಇವರ ಸಕತ್​ ಫೇಮಸ್​ ಆಗಿರೋದು ಗೊತ್ತಿರುವ ವಿಷಯವೇ. ಇದೀಗ ನಟಿ, Uncha Lamba Kad ಹಾಡಿಗೆ ಗಂಡನ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಕುಣಿಯೋದು ಬಿಟ್ಟು ಮಗು ಮಾಡ್ಕೋಮ್ಮಾ ಎಂದು ಕೆಲವರು ಹೇಳ್ತಿದ್ರೆ, ಅಯ್ಯೋ ಪಾಪ ಹಿಂದಿವಾಲಾನ್ನ ನೆನೆಸಿಕೊಂಡ್ರೆ ಬೇಜಾರು ಆಗ್ತಿದೆ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಏರ್​ಫೋರ್ಸ್​ ಕೆಲ್ಸ ಬಿಟ್ಟುಬಿಟ್ಟರಾ ಪತಿ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತೆ ಕೆಲವರು ಹೊಟ್ಟೆ ದೊಡ್ಡದಾದ ಹಾಗಿದೆ, ಗುಡ್​ನ್ಯೂಸಾ ಕೇಳ್ತಿದ್ದಾರೆ.

ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್​ನ ಸನ್ನಿಧಿ ಮೂಲಕ ಸಕತ್​ ಫೇಮಸ್​ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.

ಜೀ ಕನ್ನಡದ `ದೇವಿ’ ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ’ದಲ್ಲಿ ನಟಿಸಿ `ಅಗ್ನಿಸಾಕ್ಷಿ’ ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ. `ಗಿರಿಗಿಟ್ಲೆ’ ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ’ ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ’ ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್​ಬಾಸ್​ ಸೀಸನ್​ 8ನಲ್ಲಿ ಭಾಗವಹಿಸಿದ್ದಾರೆ.

ಈ ಹಿಂದೆ ಅವರು ಬಾಲಿವುಡ್​ನಲ್ಲಿ ನಟಿಸುವ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದರು. ಕಿರುತೆರೆಯಲ್ಲಿ ಮಿಂಚುತ್ತಿರುವ ಹಲವು ನಟಿಯರು ಇದಾಗಲೇ ಬೆಳ್ಳಿ ಪರದೆಯ ಮೇಲೂ ಕಾಣಿಸಿಕೊಂಡಿದ್ದಾರೆ. ಆಯಾ ಭಾಷೆಗಳ ಚಿತ್ರಗಳ ಜೊತೆಗೆ ಪರ ಭಾಷೆಗಳಲ್ಲಿಯೂ ನಟಿಸುವ ಅವಕಾಶ ಕೆಲವರಿಗೆ ಸಿಕ್ಕಿದ್ದೂ ಇದೆ. ಆದರೆ ಹಲವು ನಟಿಯರ ಕನಸು ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎನ್ನುವುದೇ ಆಗಿರುತ್ತದೆ. ಬಾಲಿವುಡ್‌ ಎಂಬ ಸಮುದ್ರದಲ್ಲಿ ಈಜುವ ಬಯಕೆ ಅವರದ್ದಾಗಿರುತ್ತದೆ. ಆದರೆ ಈ ಅದೃಷ್ಟ ಸಿಗುವುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ.

Source link

Leave a Reply

Your email address will not be published. Required fields are marked *