
ಬೆಂಗಳೂರು, ಮಾರ್ಚ್ 26: ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಜನಗಣತಿ ಸಂಪೂರ್ಣ. ಅದರಂತಯೇ ಕರ್ನಾಟಕದಲ್ಲಿ 2027ರ ಜನಗಣತಿಯ (ಸ್ವಯಂ ಎಣಿಕೆ) ಮೊದಲ ಹಂತದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ ಸ್ವಯಂ ಗಣತಿಯನ್ನು ಏಪ್ರಿಲ್ 1 ರಿಂದ 15 ರವರೆಗೆ ಅಂದರೆ 15 ದಿನ ನಡೆಸಲು ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.
ಆದೇಶದಲ್ಲಿ ಏನಿದೆ?
2027 ರ ಭಾರತದ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸ್ವಯಂ-ಗಣತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಲು ಸುಗಮಗೊಳಿಸಲು ಭಾರತ ಸರ್ಕಾರವು se.census.gov.in ವೆಬ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.
ಇದನ್ನೂ ಓದಿ: ಜಾತಿ ಗಣತಿ: ಮನೆ ಮನೆ ಸರ್ವೇ ಅಂತ್ಯ, ಒಟ್ಟು 6.13 ಕೋಟಿ ಜನರ ಸಮೀಕ್ಷೆ
ಪ್ರಚುರ ಪಡಿಸಲಾದ ಬಳಕೆದಾರರ ಮಾರ್ಗದರ್ಶಿಯ ಬಗ್ಗೆ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಸರ್ಕಾರದ ಅಧೀನಕ್ಕೆ ಒಳಪಡುವ ಎಲ್ಲಾ ನಿಗಮ, ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ನಾಗರಿಕರು, ಗಣತಿದಾರರಿಗೆ ಅರಿವು ಮೂಡಿಸುವ ನಾಗರಿಕರು, ಉದ್ಯೋಗಿಗಳು, ಗಣತಿದಾರರಿಗೆ ಅರಿವು ಮೂಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಏಪ್ರಿಲ್ 1 ರಿಂದ 15 ರವರೆಗೆ ಒಟ್ಟು 15 ದಿನಗಳ ಕಾಲ ಕರ್ನಾಟಕದಲ್ಲಿ ನಡೆಯುವ ಮನೆಗಳ ಸ್ವಯಂ ಗಣತಿಯು ಯಶಸ್ವಿಯಾಯಿತು.
ಸ್ವಯಂ ಗಣತಿ ಮಾಡುವುದು ಹೇಗೆ?
ಕೇಂದ್ರ ಗೃಹ ಸಚಿವಾಲಯ 2027ರ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ. ಮೊದಲ ಹಂತದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯಲ್ಲಿ ಮೊದಲ 15 ದಿನ se.census.gov.in ವೆಬ್ ಸೈಟ್ ಮೂಲಕ ಸ್ವಯಂ-ಗಣತಿಗೆ ಅವಕಾಶವಿದೆ.
ಇದನ್ನೂ ಓದಿ: ಎ. 31 ಜಾತಿ ಗಣತಿ ಅವಧಿ ವಿಸ್ತರಣೆ: ಸಮೀಕ್ಷೆ ಕಾರ್ಯದಿಂದ ಶಿಕ್ಷಕರ ಕೈಬಿಟ್ಟ ಸರ್ಕಾರ
ಅದರಂತೆ ಮನೆಯ ಯಾವುದೇ ಒಬ್ಬ ಸದಸ್ಯರು ಸುಮಾರು 15 ರಿಂದ 20 ನಿಮಿಷಗಳ ಅವಧಿಯಲ್ಲಿ ಸ್ವಯಂ-ಗಣತಿ ಮಾಡಿ ಮನೆಯ ವಿವರಗಳನ್ನು ಒದಗಿಸಬಹುದು ಮತ್ತು ಮೊಬೈಲ್, ಇಮೇಲ್‌ನಲ್ಲಿ ಸ್ವಯಂ-ಗಣತಿ ಐಡಿ ಪಡೆಯಲಾಗುತ್ತದೆ. ಗಣತಿದಾರರು ಮನೆಗೆ ಭೇಟಿ ನೀಡಿದಾಗ, ದೃಢೀಕರಣ ಮತ್ತು ಸ್ವಯಂ ಗಣತಿ ದಂತಾಂಶದ ಅಂತಿಮ ಸಲ್ಲಿಕೆಗಾಗಿ ಗಣತಿ ಐಡಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.