ಹಾವೇರಿ, (ಅಕ್ಟೋಬರ್ 16): ನಿಂತಿದ್ದ ಟ್ರ್ಯಾಕ್ಟರ್ ಟ್ರ್ಯಾಕ್ಟರ್ ಟ್ರೈಲರ್ ಗೆ ಟಾಟಾ ಎಸ್ ವಾಹನ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾವೇರಿ (ಹಾವೇರಿ) ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರ್ಘಟನೆ ನಡೆದಿದೆ. ಚಮನಸಾಬ್ ಕೆರಿಮತ್ತಿಹಳ್ಳಿ 65 ವರ್ಷ, ಮಾಬುಸಾಬ್ ದೊಡ್ಡಗುಬ್ಬಿ 65 ವರ್ಷ, ನಿಂಗಮ್ಮ ಜಿಗಳೇರ್ (70) ಮೃತ ದುರ್ವೈವಿಗಳು.
ಮೃತರು ದಾವಣಗೆರೆ ಜಿಲ್ಲೆ ಮಲೆಬೆನ್ನೂರಿನ ನಿವಾಸಿಗಳು. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದು, ಆಂಬ್ಯುಲೆನ್ಸ್ ಮೂಲಕ ಗಾಯಾಳನ್ನು ರಾಣೇಬೆನ್ನೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ಹೋಗುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಟ್ರಾಕ್ಟರ್ ಟ್ರೈಲರ್ ಗೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಟ್ರಾಕ್ಟರ್ ಟ್ರೈಲರ್ ಹಿಂಬದಿ ಯಾವುದೇ ಲೈಟ್ ಇರುವುದಿಲ್ಲ. ಹೀಗಾಗಿ ಕತ್ತಲಲ್ಲಿ ಬೇಗ ಅದು ಕಾಣಿಸಲ್ಲ. ಪರಿಣಾಮ ವೇಗವಾಗಿ ಬಂದ ಟಾಟಾ ಏಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ರೈಲರ್ ಗೆ ಗುದ್ದಿದೆ ಎಂದು ಸೂಚಿಸಲಾಗಿದೆ.
ವರದಿ: ಅಣ್ಣಪ್ಪ ಬಾರ್ಕಿ ಹಾವೇರಿ