Headlines

ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು?

ಋಣ ತೀರಿಸಲು ತಮಿಳಿಗೆ ಬರುತ್ತಿದ್ದಾರೆ ಶಾರುಖ್ ಖಾನ್: ಸಿನಿಮಾ ಯಾವುದು?


ಶಾರುಖ್ ಖಾನ್ (ಶಾರುಖ್ ಖಾನ್) ಬಾಲಿವುಡ್ ಸೂಪರ್ ಸ್ಟಾರ್ ನಟ. ‘ಪಠಾಣ್’, ‘ಜವಾನ್’, ‘ಡಂಕಿ’ ಮೂಲಕ ಸತತ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಶಾರುಖ್ ಖಾನ್ ಇದೀಗ ‘ಕಿಂಗ್’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಶಾರುಖ್ ಖಾನ್ ಅತಿಥಿ ಪಾತ್ರಗಳಲ್ಲಿ ನಟಿಸುವುದು ಬಹಳ ಅಪರೂಪ. ಅದರಲ್ಲೂ ಪರದಲ್ಲಿ ಅತಿಥಿ ಪಾತ್ರಗಳಲ್ಲಿ ಶಾರುಖ್ ಖಾನ್ ನಟಿಸುವುದೆಂದರೆ ಅದಕ್ಕೆ ವಿಶೇಷ ಕಾರಣವೇ ಇರಬೇಕು. ಇದೀಗ ಶಾರುಖ್ ಖಾನ್, ತಮಿಳಿನ ಒಂದು ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಇದಕ್ಕೆ ಕಾರಣ ಋಣಭಾರ.

ರಜನೀಕಾಂತ್ ನಟಿಸುತ್ತಿರುವ ‘ಜೈಲರ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿಯೇ ಹರಿದಾಡುತ್ತಿದೆ. ‘ಜೈಲರ್’ ಸಿನಿಮಾ ತನ್ನ ವಿಶೇಷ ಕ್ಯಾಮಿಯೋ ಪಾತ್ರಗಳಿಂದಲೇ ದೊಡ್ಡ ಹಿಟ್ ಆಗುತ್ತಿದೆ. ಶಿವರಾಜ್ ಕುಮಾರ್, ಮೋಹನ್ ಲಾಲ್, ಜಾಕಿ ಶ್ರಾಫ್, ತಮನ್ನಾ, ಸುನಿಲ್ ಇನ್ನೂ ಕೆಲವು ಅತಿಥಿ ಪಾತ್ರಗಳಲ್ಲಿ ನಟಿಸಿದ್ದ ‘ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಆಗುತ್ತಿದೆ. ಇದೀಗ ‘ಜೈಲರ್ 2’ ನಿರ್ಮಾಣ ಆಗುತ್ತಿದೆ, ಈ ‘ಕ್ಯಾಮಿಯೋ ಗೇಮ್’ ಇನ್ನೂ ದೊಡ್ಡದಕ್ಕೆ ಕೊಂಡೊಯ್ಯುವ ನಿರ್ದೇಶಕ ನೆಲ್ಸನ್ ಯೋಜನೆ.

ಇದನ್ನೂ ಓದಿ:ಹೃತಿಕ್ ಆಯ್ತು ಈಗ ಶಾರುಖ್ ಖಾನ್ ಜೊತೆ ನಟಿಸಲಿದ್ದಾರಾ ಜೂ ಎನ್ ಟಿಆರ್?

ಇದೇ ಕಾರಣಕ್ಕೆ ‘ಜೈಲರ್ 2’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರನ್ನೇ ಕರೆತರಲು ನೆಲ್ಸನ್ ಸಜ್ಜಾಗಿದ್ದಾರೆ. ಆದರೆ ಶಾರುಖ್ ಖಾನ್ ಈ ಆಫರ್ ಒಪ್ಪಿಕೊಳ್ಳಲು ಕಾರಣವೂ ಇದೆ. ಈ ಹಿಂದೆ 2011 ರಲ್ಲಿ ಶಾರುಖ್ ಖಾನ್ ‘ರಾ ಒನ್’ ಹೆಸರಿನ ಭಾರಿ ಅದ್ಧೂರಿ ಸಿನಿಮಾ ಮಾಡಿತ್ತು. ಆ ಸಿನಿಮಾಕ್ಕೆ ಭಾರಿ ದೊಡ್ಡ ಬಂಡವಾಳ ಹಾಕಿ, ಅದ್ಧೂರಿ ಪ್ರಚಾರ ಮಾಡಿದ್ದರು, ಅದ್ಧೂರಿ ಸೆಟ್‌ಗಳು, ಹಾಲಿವುಡ್ ಲೆವೆಲ್ ವಿಎಫ್‌ಎಕ್ಸ್ ಬಳಸಿದ್ದರು. ಆ ಸಿನಿಮಾದಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಈಗ ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಆಋಣ ತೀರಿಸುತ್ತಿದ್ದಾರೆ ಶಾರುಖ್ ಖಾನ್.

ಜೊತೆಗೆ ಶಾರುಖ್ ಖಾನ್ ಅವರಿಗೆ ತಮಿಳು ಚಿತ್ರರಂಗದೊಂದಿಗೆ ಆಪ್ತ ನಂಟಿದೆ. 2000 ರಲ್ಲಿ ಬಿಡುಗಡೆಯಾದ ತಮಿಳು ಸಿನಿಮಾ ‘ಹೇ ರಾಮ್’ನಲ್ಲಿ ಕಮಲ್ ಹಾಸನ್ ಜೊತೆಗೆ ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಅವರ ‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿ ತಮಿಳು ಚಿತ್ರರಂಗಕ್ಕೆ ವಿಶೇಷ ಉಲ್ಲೇಖಗಳನ್ನು ಮಾಡಿದ್ದರು. ಸಾಕಷ್ಟು ತಮಿಳು ನಟರು ಅದರಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾ ನಿರ್ದೇಶಿಸಿದ್ದು ಸಹ ತಮಿಳು ನಿರ್ದೇಶಕ ಅಟ್ಲಿ. ಈಗ ಮತ್ತೊಮ್ಮೆ ತಮಿಳು ಸಿನಿಮಾದಲ್ಲಿ ನಟಿಸಲು ಬರುತ್ತಿದ್ದಾರೆ ಶಾರುಖ್ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *