ಶಾರುಖ್ ಖಾನ್ (ಶಾರುಖ್ ಖಾನ್), ಕಮಲ್ ಹಾಸನ್ ಅವರ ಅತಿ ದೊಡ್ಡ ಅಭಿಮಾನಿ, ಆದರೆ ರಜನೀಕಾಂತ್ ಅವರ ಬಗ್ಗೆ ಅಷ್ಟೇ ಗೌರವ ಇರುವಂಥಹ ನಟ. ಕಮಲ್ ಹಾಸನ್ ಕರೆದರೆಂದು ಅವರ ನಿರ್ದೇಶನದ ‘ಹೇ ರಾಮ್’ ಸಿನಿಮಾದಲ್ಲಿ ಒಂದು ರೂಪಾಯಿ ಸಹ ಸಂಭಾವನೆ ಪಡೆಯದೆ ನಟಿಸಿದ್ದರು. ಆ ಬಳಿಕ ರಜನೀಕಾಂತ್ ಅವರು ಶಾರುಖ್ ಖಾನ್ ನಿರ್ಮಿಸಿ, ನಟಿಸಿದ್ದ ‘ರಾ ಓನ್’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಇದೀಗ ಆ ಋಣವನ್ನು ಶಾರುಖ್ ಖಾನ್ ತೀರಿಸಿದ್ದಾರೆ.
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ‘ಜೈಲರ್’ ಭಾರಿ ಹಿಟ್ ಆಗಿದ್ದು ಗೊತ್ತೇ ಇದೆ. ಆ ಸಿನಿಮಾದಲ್ಲಿ ಶಿವಣ್ಣ, ಮೋಹನ್ ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವು ಕಲಾವಿದರು ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ‘ಜೈಲರ್ 2’ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ, ಈ ಬಾರಿ ‘ಜೈಲರ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. 15 ವರ್ಷಗಳ ಬಳಿಕ ರಜನೀಕಾಂತ್ ಋಣ ತೀರಿಸಿದ್ದಾರೆ ಶಾರುಖ್ ಖಾನ್.
ಈ ಕುರಿತು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ವೈಯಕ್ತಿಕ ಸ್ಟೈಲಿಸ್ಟ್ ಜಿಶಾದ್ ಶಂಸುದ್ದೀನ್ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಐ ಫೋಟೋ ಜಿಶಾದ್ ಹಂಚಿಕೊಂಡಿದ್ದು, ಅದರಲ್ಲಿ ಶಾರುಖ್ ಖಾನ್ ಕಾರು ಚಲಾಯಿಸುತ್ತಿದ್ದಾರೆ, ಅವರ ಪಕ್ಕದಲ್ಲಿ ಮೋಹನ್ ಲಾಲ್ ಹಾಗೂ ಹಿಂಬದಿಯ ಸೀಟಿನಲ್ಲಿ ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕುಳಿತಿದ್ದಾರೆ. ಈ ಪೋಸ್ಟ್ಗೆ ‘ಖಂಡಿತವಾಗಿಯೂ ಇದು ಸಂಭವಿಸಲಿದೆ’ ಎಂದು ಬರೆಯುವ ಮೂಲಕ ಚಿತ್ರಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ:ಸಿನಿಮಾ ಬಿಡುಗಡೆ ಪ್ರಕಟಿಸಿದ ಶಾರುಖ್ ಖಾನ್, ಅಭಿಮಾನಿಗಳಿಗೆ ನಿರಾಸೆ
ಕಳೆದ ಡಿಸೆಂಬರ್ನಲ್ಲಿ ಹಿರಿಯ ನಟ ಮಿಥುನ್ ಚಕ್ರವರ್ತಿ ಕೂಡ ಈ ಬಗ್ಗೆ ಮಾತನಾಡುತ್ತಾ, ‘ಜೈಲರ್ 2’ ಚಿತ್ರದಲ್ಲಿ ತಾವು ವಿಲನ್ ಪಾತ್ರ ನಿರ್ವಹಿಸುತ್ತಿದ್ದಾರೆ ಹಾಗೂ ರಜನಿಕಾಂತ್, ಮೋಹನ್ ಲಾಲ್, ಶಾರುಖ್ ಖಾನ್, ಶಿವರಾಜ್ ಕುಮಾರ್ ಮತ್ತು ರಮ್ಯಾ ಅವರ ಪಾತ್ರಗಳು ತಮ್ಮ ವಿರುದ್ಧ ಹೋರಾಡಲಿವೆ ಎಂದು ಸುಳಿವು ನೀಡಿದರು. ಈಗ ಮತ್ತೊಮ್ಮೆ ಈ ಸುದ್ದಿ ಖಾತ್ರಿ ಆಗಿದೆ.
ಶಾರುಖ್ ಖಾನ್ ಪಾತ್ರ ರಜನೀಕಾಂತ್ ಅವರೊಟ್ಟಿಗೆ ಮಾತ್ರ ಇರಲಿದೆಯೇ ಅಥವಾ ಶಿವರಾಜ್ ಕುಮಾರ್ ಅವರೊಟ್ಟಿಗೂ ಇರಲಿದೆಯೇ ಎಂಬ ಕುತೂಹಲವಿದೆ. ಇದೇ ರಜನೀಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ಅಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಉಪೇಂದ್ರ ಸಹ ಆಮಿರ್ ಖಾನ್ ಅವರೊಟ್ಟಿಗೆ ಕೆಲ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈಗ ರಜನೀಕಾಂತ್ ಅವರದ್ದೇ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಸಹ ನಟಿಸುತ್ತಿದ್ದಾರೆ. ಶಾರುಖ್ ಖಾನ್ ಹಿಂದಿಯ ‘ಎಸ್ ಆರ್ಕೆ’ ಆದರೆ ಶಿವರಾಜ್ ಕುಮಾರ್ ಕನ್ನಡದ ‘ಎಸ್ ಆರ್ಕೆ’.
2023 ರಲ್ಲಿ ಬಿಡುಗಡೆ ಆಗಿದ್ದ ‘ಜೈಲರ್’ ಮೊದಲ ಭಾಗದಲ್ಲಿ ಶಿವಣ್ಣ ಅವರ ಅತಿಥಿ ಪಾತ್ರ ಸಖತ್ ಟ್ರೆಂಡ್ ಆಗಿದೆ. ಸಿನಿಮಾದ ನಾಯಕನ ಪಾತ್ರಕ್ಕೆ ಸಿಕ್ಕಷ್ಟೇ ಜನಪ್ರೀತಿ ಶಿವಣ್ಣನ ನರಸಿಂಹ ಪಾತ್ರಕ್ಕೆ ಸಿಕ್ಕಿತ್ತು. ‘ಜೈಲರ್ 2’ ನಲ್ಲಿಯೂ ಶಿವಣ್ಣ, ನರಸಿಂಹ ಪಾತ್ರದಲ್ಲಿ ನಟಿಸಲಿದ್ದಾರೆ, ಈ ಬಾರಿಯೂ ಸಹ ಪವರ್ ಫುಲ್ ಆಗಿ ಅವರ ಮೂಡಿಬರಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ