Headlines

ಗೌರಿಯನ್ನು ಮದ್ವೆಯಾಗಲು ಜೀತೇಂದ್ರ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ Shah rukh Khan!

ಗೌರಿಯನ್ನು ಮದ್ವೆಯಾಗಲು ಜೀತೇಂದ್ರ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ Shah rukh Khan!

ಗೌರಿಯನ್ನು ಮದ್ವೆಯಾಗಲು ಜೀತೇಂದ್ರ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ Shah rukh Khan!

32 ವರ್ಷಗಳ ದಾಂಪತ್ಯ ಜೀವನದಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಪ್ರೀತಿ, ಅಂತರ್ಧರ್ಮೀಯ ವಿವಾಹದ ಸವಾಲುಗಳು ಮತ್ತು ಯಶಸ್ವಿ ಕುಟುಂಬ ಜೀವನದ ಒಂದು ಕಿರುನೋಟ. ಗೌರಿಯನ್ನು ಮದುವೆಯಾಗಲು ಹೆಸರು ಬದಲಿಸಿಕೊಂಡದ್ದೇಕೆ ಶಾರುಖ್​?

ನಟ ಶಾರುಖ್​ ಖಾನ್​ (Shah rukh Khan) ಮತ್ತು ಅವರ ಪತ್ನಿ ಗೌರಿ ಖಾನ್​ ಅವರ ದಾಂಪತ್ಯ ಜೀವನಕ್ಕೆ 32 ವರ್ಷಗಳಾಗುತ್ತಾ ಬಂದಿವೆ. ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಬ್ಬಳ ಜೊತೆ ಮದುವೆಯಾಗುವ ಬಗ್ಗೆ ಹಲವಾರು ತರಕಾರುಗಳು ಇರುವ ನಡುವೆಯೂ ಈ ದಂಪತಿ ಮೂರು ದಶಕಗಳಿಂದ ಸುಖಿ ದಾಂಪತ್ಯ ನಡೆಸುತ್ತಿದ್ದಾರೆ.

ಅಂದಹಾಗೆ ಮುಸ್ಲಿಂ ಯುವಕನಾಗಿದ್ದ ಶಾರುಖ್ ಖಾನ್​ ಹಾಗೂ ಹಿಂದೂ ಯುವತಿಯಾಗಿದ್ದ ಗೌರಿ ಅವರ ಲವ್​ ಸ್ಟೋರಿಯೇ ತುಂಬಾ ಇಂಟರೆಸ್ಟಿಂಗ್​ ಆಗಿದೆ. ಅಷ್ಟಕ್ಕೂ ಇವರ ಲವ್​ ಸ್ಟೋರಿ (Love story) ಶುರುವಾದಾಗ ಶಾರುಖ್ ಅವರಿಗೆ 18 ವರ್ಷ ಹಾಗೂ ಗೌರಿ ಅವರಿಗೆ 14 ವರ್ಷ! 1984ರಲ್ಲಿ ಶಾರುಖ್ ಖಾನ್ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗೌರಿ ಅವರನ್ನು ನೋಡಿದ್ದ ಶಾರುಖ್​ ಅವರಿಗೆ ಲವ್​ ಆ್ಯಟ್​ ಫಸ್ಟ್​ ಸೈಟ್​ ಆಗಿತ್ತು. ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು.

ಆದರೆ ಅಂತರ್​ಧರ್ಮೀಯ ವಿವಾಹಕ್ಕೆ (Inter Religion marriage) ಸಾಕಷ್ಟು ವಿರೋಧ ಬಂದಿದ್ದವು. ಕೊನೆಗೆ ಎಲ್ಲ ಅಡೆತಡೆಗಳನ್ನು ದಾಟಿ ಈ ಜೋಡಿ ಮದುವೆಯಾಗಿದೆ. ಅದಕ್ಕೂ ಮೊದಲು ಮುಸ್ಲಿಂ ಎನ್ನುವ ಕಾರಣಕ್ಕೆ ಗೌರಿ ಮನೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ. ಅದೊಂದು ದಿನ ಗೌರಿ ಖಾನ್​ ಶಾರುಖ್​ಗೆ ಹೇಳದೇ ಅಪ್ಪನ ಮನೆಯಿಂದ ಹೋಗಿಬಿಟ್ಟಿದ್ದರು.

ಆಗ ಶಾರುಖ್​ ಬಳಿ ಕೇವಲ 10 ರೂಪಾಯಿ ಇತ್ತು. ಗೌರಿಯನ್ನು (Gauri Khan) ಅರಸುತ್ತಾ ಹೋಗಿದ್ದರು. ತುಂಬಾ ಶ್ರಮದ ಬಳಿಕ ಗೌರಿ ಸಿಕ್ಕಿದ್ದರು. ಗೌರಿ ಅವರ ಅಪ್ಪ-ಅಮ್ಮನ ಮನವೊಲಿಸಲು ದುಡಿಮೆಯ ಹಾದಿ ಹಿಡಿದು ನಟನಾಗಲು ತುಂಬಾ ಶ್ರಮ ಪಟ್ಟಿದ್ದರು. ಆರೇಳು ವರ್ಷ ಗೌರಿಗಾಗಿ ಕಾದ ಬಳಿಕ ಕೊನೆಗೆ ಗೌರಿ ಮನೆಯವರು ಒಪ್ಪಿಗೆ ನೀಡಿದರು. ಇದಾದ ಬಳಿಕ ಶಾರುಖ್​ ನಟನಾಗಿ ಫೇಮಸ್​ ಆಗಿದ್ದು.

ಗೌರಿ ಖಾನ್ ಅವರ ಮೂಲ ಹೆಸರು ಗೌರಿ ಚಿಬ್ಬರ್. ಗೌರಿಯವರು ಮದುವೆಯ ನಂತರವೂ ಹಿಂದೂ ಮತ್ತು ಮುಸ್ಲಿಂ ಧರ್ಮಗಳನ್ನು ಅನುಸರಿಸುತ್ತಿದ್ದಾರೆ. ವಿಶೇಷವೆಂದರೆ, ಮೊದಲು ಶಾರುಖ್​-ಗೌರಿ (Shah rukh- Gouri) ರಿಜಿಸ್ಟರ್ ಮದುವೆ ಆಗಿದ್ದರು. ಆನಂತರ ಮುಸ್ಲಿಂ ಸಂಪ್ರದಾಯದ ಪ್ರಕಾರ, ನಂತರ ಪಂಜಾಬಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದರು.

ಹಿಂದೂ ಮದುವೆಯ ವೇಳೆ ಶಾರುಖ್​ ಖಾನ್​ ಜೀತೇಂದ್ರ ಕುಮಾರ್​ ತುಲಿ (Jitendra Kumar Tuli) ಎಂದು ಹೆಸರಿಟ್ಟುಕೊಂಡಿದ್ದರೆ, ನಿಖಾ ವೇಳೆ ಗೌರಿ ಖಾನ್​ ಆಯೇಷಾ ಎಂದು ಹೆಸರು ಬದಲಾಯಿಸಿಕೊಂಡಿದ್ದರು. ಆ ವೇಳೆ ‘ರಾಜು ಬನ್ ಗಯಾ ಹೀರೋ’ ಸಿನಿಮಾದಲ್ಲಿ ಶಾರುಖ್ ನಟಿಸುತ್ತಿದ್ದರು. ಆ ಸಿನಿಮಾದ ಸೆಟ್ನಿಂದಲೇ ಸ್ಯೂಟ್ ಅನ್ನು ತಂದಿದ್ದ ಶಾರುಖ್, ಅದನ್ನೇ ಮದುವೆಗೆ ಧರಿಸಿದ್ದರಂತೆ!

1997ರ ನವೆಂಬರ್ನಲ್ಲಿ ಆರ್ಯನ್ ಖಾನ್ಗೆ ಗೌರಿ ಜನ್ಮ ನೀಡಿದರು. ಆನಂತರ 2000ರಲ್ಲಿ ಸುಹಾನಾ ಖಾನ್ ಕೂಡ ಜನಿಸಿದರು. ಮದುವೆಯಾಗಿ 22 ವರ್ಷಗಳ ನಂತರ ಬಾಡಿಗೆ ತಾಯ್ತನದ ಮೂಲಕ ಮತ್ತೊಂದು ಮಗುವನ್ನು ಈ ದಂಪತಿ ಪಡೆದುಕೊಂಡರು. ಆ ಮಗುವಿಗೆ ಅಬ್ರಾಮ್ ಎಂದು ಹೆಸರಿಟ್ಟಿದ್ದಾರೆ. ಒಟ್ಟು ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ.
View this post on Instagram
A post shared by Storiyaan (@storiyaan_)

Source link

Leave a Reply

Your email address will not be published. Required fields are marked *