
ರಜನೀಕಾಂತ್ (ರಜಿನಿಕಾಂತ್) ನಟನೆಯ ‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಸಿನಿಮಾದಲ್ಲಿ ರಜನೀಕಾಂತ್ ಜೊತೆಗೆ ಇನ್ನೂ ಕೆಲವು ಸ್ಟಾರ್ ನಟರು ನಟಿಸಲಿದ್ದಾರೆ. ‘ಜೈಲರ್’ ಸಿನಿಮಾದಲ್ಲಿ ತಮ್ಮ ಅತಿಥಿ ಪಾತ್ರದಿಂದ ಮ್ಯಾಜಿಕ್ ಮಾಡಿದ್ದ ಶಿವಣ್ಣ ಸೇರಿದಂತೆ ಮೋಹನ್ ಲಾಲ್, ಜಾಕಿ ಶ್ರಾಫ್ ಇನ್ನೂ ಕೆಲವರಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ನ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಕೇಳಿ ಬಂದಿತ್ತು. ಆದರೆ ಅದು ಸುಳ್ಳು ಎನ್ನಲಾಗುತ್ತಿದೆ.
ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ‘ಜೈಲರ್ 2’ ನಲ್ಲಿ ಶಿವಣ್ಣ, ಮೋಹನ್ ಲಾಲ್ ಜೊತೆಗೆ ಶಾರುಖ್ ಖಾನ್ ಸಹ ಇರಲಿದ್ದಾರೆ. ಮೋಹನ್ ಲಾಲ್ ಅವರ ಕಾರ್ ಡ್ರೈವರ್ ಹಂಚಿಕೊಂಡಿದ್ದ ಒಂದು ಚಿತ್ರ, ಈ ಸುದ್ದಿಗೆ ಪುಷ್ಠಿ ನೀಡಿತ್ತು. ಆದರೆ ಈಗ ಬಂದಿರುವ ಸುದ್ದಿ ಪ್ರಕಾರ, ‘ಜೈಲರ್ 2’ ನ ಅತಿಥಿ ಪಾತ್ರವನ್ನು ಶಾರುಖ್ ಖಾನ್ ನಿರಾಕರಿಸಿದ್ದಾರಂತೆ. ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಕಿಂಗ್’ ಸಿನಿಮಾದ ಮೇಲೆ ಹೆಚ್ಚು ಗಮನ ಹರಿಸಬೇಕಾಗಿರುವುದರಿಂದ ಅವರು ‘ಜೈಲರ್ 2’ ಸಿನಿಮಾದ ಅತಿಥಿ ಪಾತ್ರವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ರಜನೀಕಾಂತ್ ಋಣ ತೀರಿಸಿದ ಶಾರುಖ್ ಖಾನ್, ಎಸ್ ಆರ್ಕೆ ಜೊತೆ ಎಸ್ ಆರ್ಕೆ
“ಜೈಲರ್ 2 ಚಿತ್ರತಂಡವು ಶಾರುಖ್ ಖಾನ್ ಅವರಿಂದ 5 ದಿನಗಳ ಶೂಟಿಂಗ್ ಬಯಸಿತ್ತು. ಶಾರುಖ್ ಕೂಡ ಈ ವಿಚಾರಕ್ಕೆ ಸಕಾರಾತ್ಮಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ‘ಕಿಂಗ್’ ಸಿನಿಮಾಕ್ಕಾಗಿ ಶಾರುಖ್ ಖಾನ್ ಅವರು ತಮ್ಮ ಲುಕ್ ಅನ್ನು ಬದಲಾಯಿಸಿದ್ದಾರೆ, ಈಗ ‘ಜೈಲರ್’ಗಾಗಿ ತಮ್ಮ ಲುಕ್ ಬದಲಾಯಿಸುವ ಉದ್ದೇಶದಿಂದ ಅಥವಾ ಅದೇ ಲುಕ್ ನಲ್ಲಿ ‘ಜೈಲರ್ 2’ ಚಿತ್ರದಲ್ಲಿ ನಟಿಸಲು ಅವರು ಬಯಸುವುದಿಲ್ಲ. ಇದೇ ಕಾರಣಕ್ಕೆ ಅವರು ‘ಜೈಲರ್ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ.
ಈ ಹಿಂದೆ ಶಾರುಖ್ ಖಾನ್ ನಟಿಸಿದ್ದರು, ನಿರ್ಮಾಣ ಮಾಡಿದ್ದ ‘ರಾ 1’ ಸಿನಿಮಾದಲ್ಲಿ ರಜನೀಕಾಂತ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರ ದೊಡ್ಡ ಹಿಟ್ ಆಗಿದೆ. ಇದೀಗ ‘ಜೈಲರ್ 2’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ನಟನೆಯನ್ನು ಶಾರುಖ್ ಖಾನ್ ತೀರಿಸುತ್ತಿದ್ದಾರೆ. ಆದರೆ ಇದೀಗ ಶಾರುಖ್ ಖಾನ್ ಅವರು ‘ಜೈಲರ್ 2’ ಆಫರ್ ತಿರಸ್ಕರಿಸಿದ್ದಾರೆ. ಇದು ಸಹಜವಾಗಿಯೇ ರಜನೀಕಾಂತ್ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಲಿದೆ.
‘ಜೈಲರ್ 2’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಸಿನಿಮಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇನ್ನು ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿ. ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಹ ಸಿನಿಮಾನಲ್ಲಿದ್ದಾರೆ. ‘ಕಿಂಗ್’ ಸಿನಿಮಾ ಇದೇ ವರ್ಷ ಡಿಸೆಂಬರ್‌ನಲ್ಲಿ ಬಿಡುಗಡೆ ಆಗಲಿದೆ. ‘ಕಿಂಗ್’ ಸಿನಿಮಾದ ಬಳಿಕ ಶಾರುಖ್ ಖಾನ್, ‘ಬ್ರಹ್ಮಾಸ್ತ್ರ’ ಸಿನಿಮಾದ ಪ್ರೀಕ್ವೆಲ್ ನಲ್ಲಿ ನಟಿಸಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ