ಶಾರುಖ್ ಖಾನ್ (ಶಾರುಖ್ ಖಾನ್) ಈಗ ಬಾಲಿವುಡ್ ಸೂಪರ್ ಸ್ಟಾರ್ ನಟ. ಕಳೆದ ಕೆಲವರಲ್ಲಿ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರನ್ನು ಸಹ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದೆ. ಸಲ್ಮಾನ್ ಮತ್ತು ಆಮಿರ್ ಅವರಂತೆ ಚಿತ್ರರಂಗದ ಹಿನ್ನೆಲೆ ಇಲ್ಲದೆ ಕೇವಲ ಪ್ರತಿಭೆ ಸ್ಟಾರ್ ಆಧಾರದ ಮೇಲೆ ಅವಕಾಶ ಗಿಟ್ಟಿಸಿಕೊಂಡು ಆಗಿ ಬೆಳೆದವರು ಶಾರುಖ್ ಖಾನ್. ಆದರೆ ಹಿಂದೆ ಸಂದರ್ಶನದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರ ತಂದೆಯನ್ನು ಕೊಂಡಾಡಿದ್ದರು. ಯಾವ ಮಟ್ಟಿಗೆಂದರೆ, ‘ನಾನು ಇಂದು ಏನಾಗಿದ್ದೇನೆ ಅದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಕಾರಣ’ ಎಂದಿದ್ದರು. ಇಂದು ಆಸ್ಪತ್ರೆಯಲ್ಲಿ ಮಲಗಿರುವ ಸಲೀಂ ಖಾನ್, ಶಾರುಖ್ ಖಾನ್ ಗೆ ಏನು ಸಹಾಯ ಮಾಡಿದೆ?
ಶಾರುಖ್ ಖಾನ್ ವಾಸ್ತವವಾಗಿ ದೆಹಲಿಯವರು. ಅವರು ನಟನಾಗಲೆಂದೇ ಮುಂಬೈಗೆ ಬಂದರು ಅದು ಬಹಳ ಸಣ್ಣ ವಯಸ್ಸಿನಲ್ಲಿ. ಕೇವಲ 15ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಶಾರುಖ್ ಖಾನ್ 19ರ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದರು. ಅವರನ್ನು ಬಿಟ್ಟು ಬಂದಿದ್ದ ಶಾರುಖ್ ಖಾನ್ ಅವರಿಗೆ ಕುಟುಂಬ ಸಿಕ್ಕಿದ್ದು ಸಲ್ಮಾನ್ ಖಾನ್ ಅವರ ಕುಟುಂಬ. ಅವರೇ ಹೇಳಿಕೊಂಡಿದ್ದಂತೆ ಶಾರುಖ್ ಖಾನ್ ಅವರು ಸಲೀಂ ಖಾನ್ ಅವರ ಮನೆಯಲ್ಲಿ ಹಲವು ಸಮಯ ನೆಲೆಸಿದ್ದರಂತೆ. ಸಲೀಂ ಖಾನ್ ಅವರು ನನ್ನ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್
ಇತ್ತೀಚೆಗೆ ಸಹ ಸಂದರ್ಶನದಲ್ಲಿ, ‘ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದವನು ಎಂದು ನನಗೆ ಹೇಳಬೇಡಿ, ನಾನು ಸಲ್ಮಾನ್ ಖಾನ್ ಕುಟುಂಬದ ಸದಸ್ಯ’ ಎಂದಿದ್ದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಸಹ ಅತ್ಯುತ್ತಮ ಗೆಳೆಯರಾಗಿದ್ದರು. ಅಮೀರ್ ಖಾನ್ ಸಹ ಇವರ ಆತ್ಮೀಯ ಗೆಳೆಯರೇ ಆಗಿದ್ದರು. ಆದರೆ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಪರಸ್ಪರ ಜಗಳ ಮಾಡುತ್ತಿದ್ದರು. ಆದರೆ ಬಳಿಕ ಇಬ್ಬರೂ ಮತ್ತೆ ಮುನಿಸು ಮರೆತು ಒಂದಾದರು. ಶಾರುಖ್ ಖಾನ್ ಪುತ್ರ ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾದಾಗ ಸಲ್ಮಾನ್ ಖಾನ್ ಖುದ್ದು ಶಾರುಖ್ ಖಾನ್ ಮನೆಗೆ ಭೇಟಿ ನೀಡಿ, ಸಂಕಷ್ಟದ ಸಮಯದಲ್ಲಿ ಗೆಳೆಯನ ಜೊತೆಗೆ ನಿಂತಿದ್ದರು.
ಶಾರುಖ್ ಖಾನ್, ತಂದೆಯಂತೆ ಕಂಡಿದ್ದ ಸಲೀಂ ಖಾನ್ ಅವರು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಸಲೀಂ ಖಾನ್ ಅವರಿಗೆ ಸಣ್ಣ ರಕ್ತಸ್ರಾವ ಆಗಿರುವಂತೆ, ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆ. ಇತ್ತೀಚೆಗಿನ ವರದಿಗಳ ಪ್ರಕಾರ, ಸಲೀಂ ಖಾನ್ ಅವರು ಸುಧಾರಿಸಿಕೊಳ್ಳುತ್ತಿದ್ದಾರೆ, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ