ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್


ರಣವೀರ್ ಸಿಂಗ್ ಕೆನ್ನೆ ಮುಟ್ಟಿ ಮಾತಾಡಿಸಿದ ಶಾರುಖ್ ಖಾನ್; ವಿಡಿಯೋ ವೈರಲ್

ಮುಂಬೈ ಮೂಲದ ಪ್ರಮುಖ ಉದ್ಯಮಿ ಮತ್ತು ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಅವರ ಪುತ್ರಿ ಮಿಷ್ಕಾ ಕಂಬೋಜ್ ಅವರ 16ನೇ ಜನ್ಮದಿನದ ಸೆಲೆಬ್ರೇಷನ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಸಮಾರಂಭದಲ್ಲಿ ಘಟಾನುಘಟಿ ತಾರೆಗಳು ಕಾಣಿಸಿಕೊಂಡಿದ್ದರು. ವಿಶೇಷವಾಗಿ ಶಾರುಖ್ ಖಾನ್ (ಶಾರುಖ್ ಖಾನ್) ಮತ್ತು ರಣವೀರ್ ಸಿಂಗ್ ಅವರ ನಡುವಿನ ಆತ್ಮೀಯ ಕ್ಷಣಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ‘ಧುರಂಧರ 2’ (ಧುರಂಧರ 2) ಸಕ್ಸಸ್ ಬೆನ್ನಲ್ಲೇ ಈ ಭೇಟಿ ನಡೆದಿರುವುದು ವಿಶೇಷ. ಈ ಬಗ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

‘ಧುರಂಧರ 2’ ಸಿನಿಮಾದ ಯಶಸ್ಸಿನ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮಾತನಾಡುತ್ತಿದ್ದಾರೆ. ಆದರೆ ಶಾರುಖ್ ಖಾನ್ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಅವರಿಗೆ ರಣವೀರ್ ಸಿಂಗ್ ಬಗ್ಗೆ ಅಸಮಾಧಾನ ಇರಬಹುದು ಎಂದು ಅನೇಕರು ಇದ್ದರು. ಆದರೆ ಈಗ ಪಾರ್ಟಿಯಲ್ಲಿ ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಜೊತೆ ಇರುವ ವಿಡಿಯೋ ನೋಡಿ ಎಲ್ಲರ ಅನುಮಾನ ಪರಿಹಾರವಾಗಿದೆ.

ಆಗಿರುವ ವಿಡಿಯೋದಲ್ಲಿ ರಣವೀರ್ ಸಿಂಗ್ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದು ವೈರಲ್ ಆಗಿದೆ. ಈ ವೇಳೆ ಅಲ್ಲಿಗೆ ಆಗಮಿಸುವ ಶಾರುಖ್ ಖಾನ್ ಅವರು ರಣವೀರ್ ಹೆಗಲ ಮೇಲೆ ತಟ್ಟಿ ಅತ್ಯಂತ ಪ್ರೀತಿಯಿಂದ ಅವರ ಕೆನ್ನೆಯನ್ನು ಸವರಿದ್ದಾರೆ. ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ರಣವೀರ್ ಕೆನ್ನೆಗೆ ಮುತ್ತಿಟ್ಟು ಪ್ರೀತಿ ತೋರಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ 2’ ಸೃಷ್ಟಿಸಿರುವ ಸುನಾಮಿಗೆ ಶಾರುಖ್ ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ವಿಡಿಯೋದಲ್ಲಿ ರಣವೀರ್ ಕೂಡ ಮುಗುಳ್ನಗುತ್ತಾ ‘ಥ್ಯಾಂಕ್ ಯೂ’ ಎಂದು ಹೇಳುತ್ತಿದ್ದಾರೆ. ‘ಇವರಿಬ್ಬರೂ ಒಂದು ಕುಟುಂಬದಂತೆ ಇದ್ದಾರೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ರಣವೀರ್ ಸಿಂಗ್ ಅವರಿಗೆ ಸದ್ಯ ಎಲ್ಲವೂ ಶುಭವಾಗಿಯೇ ನಡೆಯುತ್ತಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ’ ಮತ್ತು ‘ಧುರಂಧರ 2’ ಸಿನಿಮಾಗಳು ಹೊಸ ಇತಿಹಾಸ ನಿರ್ಮಿಸಿವೆ. ಮಾರ್ಚ್ 19 ರಂದು ಬಿಡುಗಡೆಯಾದ ‘ಧುರಂಧರ 2’ ವಿಶ್ವಾದ್ಯಂತ 1,600 ಕೋಟಿ ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಅವರ ಹೊಸ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *