Headlines

ಪುರಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾಮ್​​: BMTCಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಾಲ್ವರು ನೌಕರರು ಸಸ್ಪೆಂಡ್​​

ಪುರಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್​​, ಯುಪಿಐ ಸ್ಕ್ಯಾಮ್​​: BMTCಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಾಲ್ವರು ನೌಕರರು ಸಸ್ಪೆಂಡ್​​


ಪುರಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್, ಯುಪಿಐ ಸ್ಕ್ಯಾಮ್: ಬಿಎಂಟಿಸಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ನಾಲ್ವರು ನೌಕರರು ಸಸ್ಪೆಂಡ್

ಬೆಂಗಳೂರು, ಏಪ್ರಿಲ್ 12: ರಾಜ್ಯ ಕಾಂಗ್ರೆಸ್ ಮಹತ್ವಾಕಾಂಕ್ಷೆಯ ಶಕ್ತಿ ಸರ್ಕಾರದ ಯೋಜನೆಯ ಲಾಭವನ್ನು ರಾಜ್ಯದ ಕೋಟ್ಯಾಂತರ ಹೆಣ್ಣು ಮಕ್ಕಳು ಪಡೆಯುತ್ತಿದ್ರೆ, ಇತ್ತ ಬಿಎಂಟಿಸಿಯ ಕೆಲ ಕಿಲಾಡಿ ನೌಕರರು ಮಾತ್ರ ತಿಂದ ಮನೆಗೆ ಕನ್ನ ಹಾಕೋ ಕೆಲಸ ಮಾಡುತ್ತಿದ್ದಾರೆ. ಕನ್ನಡ ಬಾರದ ಪುರುಷ ಪ್ರಯಾಣಿಕರಿಗೆ ಶಕ್ತಿ ಯೋಜನೆ ಟಿಕೆಟ್ ನೀಡಿ ದುಡ್ಡು ಮಾಡ್ತಿದ್ದಾರೆ. ಮತ್ತೊಂದೆಡೆ ಪ್ರಯಾಣಿಕರಿಗೆ ಸಹಾಯ ಆಗಲಿ ಎಂದು ಬಿಎಂಟಿಸಿ ಯುಪಿಐ ಕ್ಯೂಆರ್ ಕೋಡ್ ಅನ್ನು ಅಳವಡಿಸಲಾಗಿದೆ. ಇದನ್ನು ಸ್ಕ್ಯಾನ್ ಮಾಡಿ ಟಿಕೆಟ್ ಮಾಡಿ ಹಣ ಪಡೆಯದಿರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ, ಕೆಲ ನಿರ್ವಾಹಕರು ತಮ್ಮ ವೈಯಕ್ತಿಕ ಯುಪಿಐಐಐಐಐಗೆ ದುಡ್ಡು ಪೀಕುವ ಕೆಲಸಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆ ನಿಗಮಕ್ಕೆ ಸೇರಬೇಕಿದ್ದ ಲಕ್ಷ ಲಕ್ಷ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಂಡ ನಾಲ್ಕು ಜನ ಕಿಲಾಡಿ ಕಂಡಕ್ಟರ್‌ಗಳನ್ನು ಮನೆಗೆ ಕಳುಹಿಸಲಾಗಿದೆ.

ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿದ್ದು ಹೇಗೆ?

ಶಕ್ತಿ ಯೋಜನೆಯ ಪ್ರಯಾಣ ಉಚಿತ ಟಿಕೆಟ್ ಮೇಲೆ ಕನ್ನಡದಲ್ಲಿ ಮಾತ್ರ ಉಚಿತ ಎಂದು ಮುದ್ರಿಸಲಾಗುತ್ತದೆ. ಹೀಗಾಗಿ ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಅವರಿಗೆ ಟಿಕೆಟ್ ನೀಡಿ ಹಣ ಪಡೆಯಬಹುದಾಗಿದೆ. ತನಿಖೆಯಲ್ಲಿ ಕೆಲ ನಿರ್ವಾಹಕರು ಈ ಕಳ್ಳಾಟ ಬಯಲಾಗಿದ್ದರೆ, ಅಕೌಂಟ್‌ನಲ್ಲಿ ಸಾವಿರಾರು ರೂಪಾಯಿ ಹಣವೂ ಇದೆ.

ಇದನ್ನೂ ಓದಿ: ಬಿಎಂಟಿಸಿ ನಿಗಮಕ್ಕೆ ಚಳ್ಳೆಹಣ್ಣು ತಿನ್ನಿಸಿ ಹಣ ಪೀಕುತ್ತಿದ್ದ ನಾಲ್ವರು ಕಂಡಕ್ಟರ್ ಸಸ್ಪೆಂಡ್

ಕಂಡಕ್ಟರ್‌ಗಳು ಪೀಕಿರುವ ಹಣ ಎಷ್ಟು?

  • ಸೂರ್ಯನಾರಾಯಣ- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್ : 54,290 ರೂ.
  • ಬೊಮ್ಮಲಿಂಗೇಶ್ ಸಿ.- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 16,404 ರೂ.
  • ಬ್ರಿಜೇಶ್ ಬಾಬು- ಡಿಪೋ- 51, ಡ್ರೈವರ್ ಕಂ ಕಂಡಕ್ಟರ್: 9,795 ರೂ.
  • ಮೋಹನ್- ಡಿಪೋ- 18, ಡ್ರೈವರ್ ಕಂ ಕಂಡಕ್ಟರ್: 6,117 ರೂ.

ಇನ್ನು ಈ ಕಿಲಾಡಿ ಕಂಡಕ್ಟರ್‌ಗಳು ಡಿಪೋದಿಂದ ಬಸ್‌ಗಳು ಹೊರಗೆ ಬರ್ತಿದ್ದಂತೆ ಬಿಎಂಟಿಸಿಯ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಕಿತ್ತು ಇಟ್ಟುಕೊಳ್ಳುತ್ತಾರೆ. ಪ್ರಯಾಣಿಕರು ಯುಪಿಐ ಪೇಮೆಂಟ್ ಮಾಡಿ ಟಿಕೆಟ್ ಖರೀದಿಸಿ ಎಂದು ಕೇಳಿದಾಗ, ತಮ್ಮ ಮೊಬೈಲ್‌ನಲ್ಲಿ ಸ್ವಂತ ಅಕೌಂಟ್‌ನ ಕ್ಯೂಆರ್ ಕೋಡ್ ನೀಡಿ ಹಣ ಹಾಕಿಸಿಕೊಳ್ಳುವ ವ್ಯಕ್ತಿ. ಈ ಬಗ್ಗೆ ಕೇಳಿ ಬಂದ ಹಿನ್ನೆಲೆ ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆಗೆ ಹತ್ತಕ್ಕೂ ಹೆಚ್ಚು ಕಂಡಕ್ಟರ್‌ಗಳು ತಗ್ಲಾಕೊಂಡಿದ್ದು, ಪ್ರತಿಯೊಬ್ಬರ ಅಕೌಂಟ್‌ನಲ್ಲಿ 10 ರಿಂದ 50 ಸಾವಿರ ರೂಪಾಯಿವರೆಗೆ ಯುಪಿಐ ವಹಿವಾಟು ನಡೆದಿರುವುದು ಬಯಲಾಗಿದೆ. ಆ ಸಂಬಂಧ ಸದ್ಯ ನಾಲ್ಕು ಜನರನ್ನು ಸಸ್ಪೆಂಡ್ ಮಾಡಿಲ್ಲ, ಮುಂದಿನ ದಿನಗಳಲ್ಲಿ ಮನೆಗೆ ಹೋಗೋದು ಫಿಕ್ಸ್ ಈ ಮಂದಿಗೆ. ಇಂತಹುದೇ ಸಂಬಂಧ ಈ ಹಿಂದೆಯೂ ಕೆಲವರನ್ನು ಬಿಎಂಟಿಸಿ ಅಮಾನತು ಮಾಡಿತ್ತೆಂಬುದು ಇಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

 



Source link

Leave a Reply

Your email address will not be published. Required fields are marked *