27 ಕೋಟಿ ರೂ. ಮೌಲ್ಯದ ಕಾರಿನಲ್ಲಿ ಕಾಲೇಜಿಗೆ ಬಂದ ವಿದ್ಯಾರ್ಥಿ! ವಿಡಿಯೋ ವೈರಲ್

27 ಕೋಟಿ ರೂ. ಮೌಲ್ಯದ ಕಾರಿನಲ್ಲಿ ಕಾಲೇಜಿಗೆ ಬಂದ ವಿದ್ಯಾರ್ಥಿ! ವಿಡಿಯೋ ವೈರಲ್


ಆಸ್ಟನ್ ಮಾರ್ಟಿನ್ ವಾಲ್ಕೈರಿ ಹೈಪರ್‌ಕಾರ್ಚಿತ್ರದ ಕ್ರೆಡಿಟ್ ಮೂಲ: TV9 ನೆಟ್‌ವರ್ಕ್

ಶಾಂಘೈ, ಮಾರ್ಚ್ 4: ವಿಶ್ವವಿದ್ಯಾಲಯಕ್ಕೆ ಬೈಕ್ ಅಥವಾ ಕಾರಿನಲ್ಲಿ ವಿದ್ಯಾರ್ಥಿಗಳು ಬರುವುದು ಇಂದಿನ ದಿನಗಳಲ್ಲಿ ಸಾಮಾನ್ಯ. ಆದರೆ ಸುಮಾರು 27 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿನಲ್ಲಿ ವಿದ್ಯಾರ್ಥಿ ಕ್ಯಾಂಪಸ್‌ಗೆ ಬಂದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ಚೀನಾದ ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ವಿಶ್ವದ ಅತ್ಯಂತ ದುಬಾರಿ ಮತ್ತು ಸೀಮಿತ ಆವೃತ್ತಿಯ ಕಾರುಗಳಲ್ಲಿ ಒಂದಾದ ಆಸ್ಟನ್ ಮಾರ್ಟಿನ್ ವಾಲ್ಕಿರೀ ಚಾಲನೆ ಮಾಡಿ ಕಾಲೇಜಿಗೆ ಬಂದಿದ್ದಾನೆ. ಸದ್ಯ, ಆತ ದುಬಾರಿ ಕಾರಿನಲ್ಲಿ ಬಂದ ವಿಡಿಯೋ ‘ಎಕ್ಸ್’ ನಲ್ಲಿ ಪೋಸ್ಟ್ ಆಗಿದ್ದು, ವೈರಲ್ (ವೈರಲ್ ವಿಡಿಯೋ) ಆಗಿದೆ. ಈ ಕಾರಿನ ಅಂದಾಜು ಮೌಲ್ಯ ಸುಮಾರು 3 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದ್ದು, ಭಾರತೀಯ ಮೌಲ್ಯದಲ್ಲಿ ಅಂದಾಜು 27 ಕೋಟಿ ರೂ. ಆಗಿದೆ.

ಪಾರ್ಕಿಂಗ್ ಸ್ಥಳದಲ್ಲಿ ಹೊಳೆಯುವ ಐಷಾರಾಮಿ ಕಾರು ನಿಲ್ಲಿಸಿರುವುದು ಎಕ್ಸ್ ವಿಡಿಯೋದಲ್ಲಿ ಕಾಣಿಸಿಕೊಂಡಿದೆ. ಕಾರನ್ನು ನೋಡಲು ವಿದ್ಯಾರ್ಥಿಗಳ ಗುಂಪು ಕೂಡಿಕೊಂಡಿದ್ದು, ಕೆಲವರು ಫೋಟೋ ಮತ್ತು ವಿಡಿಯೋ ತೆಗೆಯುವುದರಲ್ಲಿ ಮುಳುಗಿದ್ದಾರೆ. ಬಳಿಕ ಯುವಕನೊಬ್ಬ ಬಂದು ಕಾರಿನ ಬಾಗಿಲು ತೆರೆಯುವ ಮೂಲಕ ಆರಾಮವಾಗಿ ಒಳಗೆ ಕುಳಿತುಕೊಳ್ಳುವುದು ವಿಡಿಯೋದಲ್ಲಿದೆ.

ಆಸ್ಟನ್ ಮಾರ್ಟಿನ್ ವಾಲ್ಕಿರೀ ಫಾರ್ಮುಲಾ-1 ತಂತ್ರಜ್ಞಾನದಿಂದ ಪ್ರೇರಿತವಾಗಿ ವಿನ್ಯಾಸಗೊಳಿಸಲಾದ ಅತ್ಯುನ್ನತ ಕಂಪನಿಯ ಹೈಪರ್ ಕಾರ್ ಆಗಿದೆ. ಇಂತಹ ಅಪರೂಪದ ಕಾರನ್ನು ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ನೋಡುವುದು ಅಸಾಮಾನ್ಯ ಎನ್ನಲಾಗುತ್ತಿದೆ.

ಐಷಾರಾಮಿ ಕಾರಿನ ವಿಡಿಯೋ ಇಲ್ಲಿದೆ ನೋಡಿ

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ @DAMIADENUGA ಎಂಬ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಶಾಂಘೈ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬ ಸುಮಾರು 3 ಮಿಲಿಯನ್ ಡಾಲರ್ ಮೌಲ್ಯದ ಕಾರಿನಲ್ಲಿ ಕ್ಯಾಂಪಸ್ ನಿಂದ ಹೊರಡುತ್ತಿರುವುದು ಕಂಡುಬಂದಿದೆ ಎಂದು ವಿಡಿಯೋ ಪೋಸ್ಟ್ ಮಾಡಲಾಗಿದೆ.

ಸುಮಾರು 21 ಸೆಕೆಂಡುಗಳು ಈ ವಿಡಿಯೋವನ್ನು ಹಲವಾರು ಬಾರಿ ವೀಕ್ಷಿಸಿದ್ದು, ಸಾವಿರಾರು ಮಂದಿ ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ. ಆಸ್ಟನ್ ಮಾರ್ಟಿನ್ ಯುರೋಪಿನ ಅತ್ಯುತ್ತಮ ಐಷಾರಾಮಿ ಕಾರುಗಳಲ್ಲಿ ಒಬ್ಬರು ಎಂದು ಒಬ್ಬರು ಅಭಿಪ್ರಾಯಪಟ್ಟರು, ನಾವು ಇಲ್ಲಿ ಬಸ್ ದರದ ಬಗ್ಗೆ ಚಿಂತಿಸುತ್ತಿದ್ದೇವೆ, ಆದರೆ ಈ ವಿದ್ಯಾರ್ಥಿ ಕೋಟಿ ಮೌಲ್ಯದ ಕಾರಿನಲ್ಲಿ ಬರುತ್ತಿದೆ ಎಂದು ಇನ್ನೂ ಕೆಲವರು ಹಾಸ್ಯಮಿಶ್ರಿತವಾಗಿ ಪ್ರತಿಕ್ರಿಯಿಸಿದ್ದಾರೆ.

ಒಟ್ಟಿನಲ್ಲಿ, ವಿದ್ಯಾರ್ಥಿಯೊಬ್ಬನ ಐಷಾರಾಮಿ ಜೀವನಶೈಲಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ವಿಡಿಯೋ ವ್ಯಾಪಕವಾಗಿ ಶೇರ್ ಆಗುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *