Headlines

‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡಿಗೆ ಧ್ವನಿ ನೀಡಿದ ಅಧ್ಯಕ್ಷ ಶರಣ್

‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡಿಗೆ ಧ್ವನಿ ನೀಡಿದ ಅಧ್ಯಕ್ಷ ಶರಣ್


ರಂಗಭೂಮಿ ಹಿನ್ನೆಲೆಯಿಂದ ಬಂದ ನಟ ಶರಣ್ (ಶರಣ್) ಅವರು ಉತ್ತಮ ಹಾಡುಗಾರ ಕೂಡ ಹೌದು. ಅವರು ಅನೇಕ ಹಿಟ್ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗ ಶರಣ್ ಅವರ ಕಂಠದಲ್ಲಿ ‘ಸಾಲಗಾರರ ಸಹಕಾರ ಸಂಘ’ ಸಿನಿಮಾದ ಟೈಟಲ್ ಸಾಂಗ್ ಮೂಡಿಬಂದಿದೆ. ಎಂ.ಎಸ್. ತ್ಯಾಗರಾಜ್ ಅವರು ಈ ಹಾಡಿಗೆ ಸಂಗೀತ ನೀಡಿದ್ದು, ಅವರೇ ಸಾಹಿತ್ಯ ಬರೆದಿದ್ದಾರೆ. ಇತ್ತೀಚೆಗೆ ‘ಸಾಲಗಾರರ ಸಹಕಾರ ಸಂಘ’ (ಸಲಗರರ ಶಕರ ಸಂಘ) ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆಯಾಯಿತು. ಡಾ. ಶ್ರೀಧರ್ ಗುರೂಜಿ ಹಾಗೂ ಬೃಂದಾ ಆಚಾರ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಎಸ್‌ಎನ್‌ಎಲ್‌ಎನ್‌ಎಸ್ ಎಂಟರ್‌ಟೇನರ್ಸ್’ ಮತ್ತು ‘ಹವಿಶ್ ಸಿನಿ ಕ್ರಿಯೇಶನ್ಸ್’ ಮೂಲಕ ಕುಮಾರೇಶ್ ಎ. ಮತ್ತು ಸುನೀಲ್ ಕುಮಾರ್ ಅವರು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ರಾಜಣ್ಣ ಪುಟ್ಟೇನಹಳ್ಳಿ, ಚಂದ್ರು ಶಿರಾಳಕೊಪ್ಪ ಅವರು ಸಹ-ನಿರ್ಮಾಪಕರಾಗಿದ್ದಾರೆ. ವಿಕ್ರಮ್ ಧನಂಜಯ್ ಆರ್. ಅವರ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. ಸಾಲ ಕೊಡಿಸುವ ವ್ಯಕ್ತಿಯಾಗಿ ಕೆಂಪೇಗೌಡ ನಟಿಸಿದ್ದಾರೆ. ದೊಡ್ಡ ಸಾಲಗಾರನಾಗಿ ಜಾಲಿ ಜಾಕ್ ನಟಿಸಿದ್ದಾರೆ. ರಂಗಾಯಣ, ಹೊನ್ನವಳ್ಳಿ ಕೃಷ್ಣ, ಲಕ್ಷೀ ಸಿದ್ದಯ್ಯ, ಲೋಕೇಶ್, ಪ್ರವೀಣ್ ಕುಮಾರ್, ಕೂಡ ‘ಸಾಲಗಾರರ ಸಹಕಾರ ಸಂಘ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಈ ಸಿನಿಮಾದಲ್ಲಿ ಒಟ್ಟು 5 ಹಾಡುಗಳಿವೆ. ಅವುಗಳಿಗೆ ಶರಣ್, ನವೀನ್ ಸಜ್ಜು, ವಿ. ಹರಿಕೃಷ್ಣ, ಜೋಗಿ ಪ್ರೇಮ್ ಹಾಗೂ ಎಂ.ಎಂ. ತ್ಯಾಗರಾಜ್ ಅವರು ಧ್ವನಿ ನೀಡಿದ್ದಾರೆ. ಅನಿರುದ್ದ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಗಣೇಶ್ ನಿರ್ಚಾಲ್, ಶೇಷಾಚಲ ಕುಲಕರ್ಣಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಬೆಂಗಳೂರು, ತೀರ್ಥಹಳ್ಳಿ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ 45 ದಿನಗಳ ಚಿತ್ರೀಕರಣ ನಡೆದಿದೆ.

ಇದನ್ನೂ ಓದಿ: ಶರಣ್-ತರುಣ್ ಸುಧೀರ್ ಗೆಳತನ ಎಂಥದ್ದು? ಯಾರೂ ನೋಡಲೂ ಸಾಧ್ಯವಿಲ್ಲ

ಶಿವರಾಜ್ ಕೆ.ಆರ್. ಪೇಟೆ, ದಿವ್ಯಶ್ರೀ ಮೋಹನ್, ಮಡೆನೂರು ಮನು, ಗೋವಿಂದೇಗೌಡ, ಸೋನು ಶ್ರೀನಿವಾಸ್ ಗೌಡ, ಸನತ್, ದಿವ್ಯಾ ಗೌಡ ಮುಂತಾದವರು ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶೀರ್ಷಿಕೆಯೇ ಸೂಚಿಸುವಂತೆ ಇದು ವಿಪರೀತ ಸಾಲ ಮಾಡಿಕೊಂಡವರ ಕಥೆ ಇರುವ ಸಿನಿಮಾ. ಶರಣ್ ಅವರ ಕಂಠದಲ್ಲಿ ಮೂಡಿಬಂದ ಹಾಡಿನಿಂದ ಕಾಮಿಡಿ ಕಥಾಹಂದರದ ಈ ಚಿತ್ರದ ಮೇಲೆ ಸಿನಿಪ್ರಿಯರಿಗೆ ನಿರೀಕ್ಷೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *